ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ಡೊಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಭಯಾನಕ ಬೆಂಕಿ ಅವಘಡ ನಡೆಯಿತು. ಇ-ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಆರಂಭವಾದ ಈ ಬೆಂಕಿ, ಗ್ಯಾಸ್ ಸಿಲಿಂಡರ್ ಬ್ಲಾಸ್ಟ್‌ಗೆ ಕಾರಣವಾಗಿ ತೀವ್ರಗೊಂಡು, ನೆಲಮಹಡಿಯಲ್ಲಿರುವ 19 ಇ-ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ.
ನೆಲಮಹಡಿಯಲ್ಲಿ ಇ-ದ್ವಿಚಕ್ರ ವಾಹನಗಳಿಗಾಗಿ ಸ್ಥಾಪಿಸಿರುವ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಒಂದು ಬೈಕ್ ಚಾರ್ಜ್ ಆಗುತ್ತಿದ್ದಾಗ ಓವರ್ ಹೀಟ್ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಯಿತು. ಈ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು, ತ್ವರಿತವಾಗಿ ಹರಡಿತು. ಬೆಂಕಿ ಪಾರ್ಕಿಂಗ್ ಪ್ರದೇಶದ ಗ್ಯಾಸ್ ಲೈನ್‌ಗೆ ಸೇರಿ, ಇನ್ನೂ ಆರು ಸಿಲಿಂಡರ್‌ಗಳಲ್ಲಿ ಲೀಕ್ ಉಂಟಾಗಿ ಅಗ್ನಿ ಅವಘಡ ಉಂಟಾಗಿದೆ.
ಪ್ರಮುಖವಾಗಿ, ನೆಲಮಹಡಿಯಲ್ಲಿ ಪಾರ್ಕ್ ಮಾಡಿರುವ 19 ಇ-ದ್ವಿಚಕ್ರ ವಾಹನಗಳು (ಇ-ಬೈಕ್‌ಗಳು) ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದವು. ಒಂದು ಸಿಲಿಂಡರ್ ಬ್ಲಾಸ್ಟ್ ಆಗಿ, ಸುತ್ತಮುತ್ತಲಿನ ವಾಹನಗಳು ಮತ್ತು ಉಪಕರಣಗಳು ಸುಟ್ಟುಹೋಗಿವೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ತಕ್ಷಣ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸುರಕ್ಷತಾ ಮಾರ್ಗಸೂಚಿಗಳ ಪಾಲನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪ್ರಕಾರ, ಇ-ಬೈಕ್‌ಗಳ ಚಾರ್ಜಿಂಗ್ ಸೌಲಭ್ಯದಲ್ಲಿ ಎಲೆಕ್ಟ್ರಿಕಲ್ ಫಲ್ಟ್ ಕಾರಣವಾಗಿದೆ ಎಂದು ಸೂಚನೆಯಿದೆ.
ಪೊಲೀಸ್ ಇಲಾಖೆಯು ಈ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದು, ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಸಂಬಂಧಿಸಿದ ಲೈಸೆನ್ಸ್ ಮತ್ತು ಸುರಕ್ಷತಾ ಮಾನ್ಯತೆಗಳನ್ನು ಪರಿಶೀಲಿಸುತ್ತಿದೆ. ಇ-ವಾಹನಗಳ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಎಚ್ಚರಿಕೆ ಹೊರಡಿಸಲಾಗುತ್ತಿದ್ದು, ಗುಣಮಟ್ಟದ ಬ್ಯಾಟರಿಗಳು ಮತ್ತು ಸರಿಯಾದ ಚಾರ್ಜರ್‌ಗಳನ್ನು ಬಳಸುವುದನ್ನು ಸಲಹೆ ನೀಡಲಾಗಿದೆ.