ಡಿಸೆಂಬರ್ 21ಕ್ಕೆ ದಾಜಿ ಮಾರ್ಗದರ್ಶನದಲ್ಲಿ ವಿಶ್ವ ಧ್ಯಾನ ದಿನ 2025

Untitled design 2025 12 19T195627.824

ಜಗತ್ತಿನಾದ್ಯಂತ ಆಂತರಿಕ ಶಾಂತಿ, ಮಾನಸಿಕ ಸ್ಥಿರತೆ ಮತ್ತು ಸಾಮೂಹಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್ ವತಿಯಿಂದ ಡಿಸೆಂಬರ್ 21 ರಂದು ‘ವಿಶ್ವ ಧ್ಯಾನ ದಿನ 2025’ ಅನ್ನು ಆಚರಿಸಲಾಗುತ್ತಿದೆ. ಈ ಮಹತ್ವದ ಜಾಗತಿಕ ಉಪಕ್ರಮವು ಎಲ್ಲ ವಯೋಮಾನದವರಿಗೂ, ಎಲ್ಲ ಸಂಸ್ಕೃತಿಗಳು ಹಾಗೂ ನಂಬಿಕೆಗಳನ್ನು ಮೀರಿ ಧ್ಯಾನದ ಅನುಭವವನ್ನು ಒದಗಿಸುವ ಪ್ರಯತ್ನವಾಗಿದೆ.

ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಿ ಹಾಗೂ ಶ್ರೀ ರಾಮಚಂದ್ರ ಮಿಷನ್‌ನ ಅಧ್ಯಕ್ಷರಾದ ಪೂಜ್ಯ ದಾಜಿ (ಕಮಲೇಶ್ ಡಿ. ಪಟೇಲ್) ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ, ಆನ್‌ಲೈನ್ ನೇರಪ್ರಸಾರದ ಮೂಲಕ ನಡೆಸಲಾಗುತ್ತದೆ. ಹಾರ್ಟ್‌ಫುಲ್‌ನೆಸ್‌ನ ವಿಶ್ವ ಪ್ರಧಾನ ಕಚೇರಿಯಾದ ಹೈದರಾಬಾದ್‌ನ ಕಾನ್ಹಾ ಶಾಂತಿ ವನಂನಿಂದ ಈ ಧ್ಯಾನ ಅಧಿವೇಶನವನ್ನು ಯೂಟ್ಯೂಬ್ ಲೈವ್‌ನಲ್ಲಿ ಜಗತ್ತಿನಾದ್ಯಂತ ಪ್ರಸಾರ ಮಾಡಲಾಗುತ್ತದೆ.

ವಿಶ್ವ ಧ್ಯಾನ ದಿನ 2025 ಅನ್ನು, ಒಂದೇ ಸಮಯದಲ್ಲಿ ಲಕ್ಷಾಂತರ ಜನರು ಧ್ಯಾನದಲ್ಲಿ ತೊಡಗುವ ಮೂಲಕ ಶಾಂತಿ ಮತ್ತು ಅವಲೋಕನದ ಕ್ಷಣವನ್ನು ಸೃಷ್ಟಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಸುಮಾರು 45 ನಿಮಿಷಗಳ ಈ ಅಧಿವೇಶನದಲ್ಲಿ ಸಂಕ್ಷಿಪ್ತ ಪರಿಚಯ, ಮಾರ್ಗದರ್ಶಿತ ವಿಶ್ರಾಂತಿ ವಿಧಾನ, ಯೌಗಿಕ ಪ್ರಾಣಾಹುತಿ ಬೆಂಬಲಿತ ಹಾರ್ಟ್‌ಫುಲ್‌ನೆಸ್ ಧ್ಯಾನ ಹಾಗೂ ಸಾಮೂಹಿಕ ಮೌನದ ಅವಧಿ ಸೇರಿರುತ್ತದೆ.

ಈ ಧ್ಯಾನ ಕಾರ್ಯಕ್ರಮವು ಅನುಭವಿ ಧ್ಯಾನಾಸಕ್ತರು ಹಾಗೂ ಮೊದಲ ಬಾರಿಗೆ ಧ್ಯಾನಕ್ಕೆ ಆಸಕ್ತಿ ಹೊಂದಿರುವವರಿಗೂ ಸಂಪೂರ್ಣವಾಗಿ ಸೂಕ್ತವಾಗಿದೆ. ಯಾವುದೇ ಪೂರ್ವಾನುಭವ ಅಥವಾ ವಿಶೇಷ ಸಿದ್ಧತೆ ಇಲ್ಲದೆ ಎಲ್ಲರೂ ಭಾಗವಹಿಸಬಹುದಾಗಿದೆ.

ಹಾರ್ಟ್‌ಫುಲ್‌ನೆಸ್ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಮತ್ತು ಜಗತ್ತಿನಾದ್ಯಂತದ ಪಾಲುದಾರರಿಗೆ ಈ ಜಾಗತಿಕ ಉಪಕ್ರಮವನ್ನು ಬೆಂಬಲಿಸಲು ಮತ್ತು ತಮ್ಮ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಆಹ್ವಾನ ನೀಡಿದೆ. ಇದಕ್ಕಾಗಿ ಹಾರ್ಟ್‌ಫುಲ್‌ನೆಸ್ ಸಂಸ್ಥೆ ಡಿಜಿಟಲ್ ಕ್ರಿಯೇಟಿವ್‌ಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ಕ್ಯೂಆರ್ ಕೋಡ್ ಸಾಧನಗಳು ಹಾಗೂ ಮಾದರಿ ಸಂದೇಶಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಅಧಿಕೃತವಾಗಿ ಹಂಚಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಈ ಎಲ್ಲಾ ಪ್ರಚಾರ ಸಾಮಗ್ರಿಗಳು ಕೆಳಗಿನ ಲಿಂಕ್‌ನಲ್ಲಿ ಲಭ್ಯವಿವೆ,
hfn.link/21decCreatives

ಜಾಗತಿಕ ನೇರಪ್ರಸಾರದ ಎಲ್ಲಾ ತಾಂತ್ರಿಕ ಹಾಗೂ ಕಾರ್ಯನಿರ್ವಾಹಕ ಅಂಶಗಳನ್ನು ಹಾರ್ಟ್‌ಫುಲ್‌ನೆಸ್ ಸಂಸ್ಥೆಯೇ ನಿರ್ವಹಿಸಲಿದೆ. ಕಾರ್ಯಕ್ರಮದ ನಂತರ ನೋಂದಣಿ ಪೂರ್ಣಗೊಳಿಸಿ ವಿವರಗಳನ್ನು ಸಲ್ಲಿಸಿದ ಭಾಗವಹಿಸುವವರಿಗೆ ಪೂಜ್ಯ ದಾಜಿ ಅವರ ಸಹಿಯೊಂದಿಗೆ ಡಿಜಿಟಲ್ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುತ್ತದೆ.

ಇದಕ್ಕುಟ್ಟಾಗಿ, ಭಾಗವಹಿಸಿದವರಿಗೆ ಚಿತ್ರಿತ ಧ್ಯಾನ ಅಧಿವೇಶನಗಳು, ಉಚಿತ ಆನ್‌ಲೈನ್ ಧ್ಯಾನ ಸಂಪನ್ಮೂಲಗಳು, ಸ್ಥಳೀಯ ಹಾರ್ಟ್‌ಫುಲ್‌ನೆಸ್ ಕೇಂದ್ರಗಳ ಮಾಹಿತಿ ಹಾಗೂ ಹಾರ್ಟ್‌ಫುಲ್‌ನೆಸ್ ಅಪ್ಲಿಕೇಶನ್ ಮೂಲಕ ನಿರಂತರ ಮಾರ್ಗದರ್ಶಿತ ಅಭ್ಯಾಸಗಳಿಗೂ ಪ್ರವೇಶ ಲಭ್ಯವಾಗಲಿದೆ.

Exit mobile version