ಬಿ.ವೈ. ವಿಜಯೇಂದ್ರ ವಿರುದ್ಧ ನಡೀತಿದ್ಯಾ ಸಂಚು? ಸದಾನಂದಗೌಡರದ್ದು ಎನ್ನಲಾದ ಆಡಿಯೋ ರಿಲೀಸ್

Untitled design 2026 06 29T135944.235

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಮತ್ತೊಂದು ಆಡಿಯೋ ವೈರಲ್‌ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ವಿರುದ್ಧ ಪಕ್ಷದೊಳಗೇ ಪಿತೂರಿ ನಡೆಯುತ್ತಿದೆ ಎಂಬ ಆರೋಪ ಈ ಆಡಿಯೋದಲ್ಲಿ ಇದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ (Sadananda Gowda) ಅವರದ್ದು ಎನ್ನಲಾದ ಈ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಆಡಿಯೋದಲ್ಲಿ ಏನೇನಿದೆ?

“ನಾನು ಹೇಳುತ್ತಿರುವುದು ಸರಿಯೋ ತಪ್ಪೋ ನೀವೇ ಹೇಳಿ. ವಿಜಯೇಂದ್ರ ಅವರು 3 ವರ್ಷಗಳ ಅಧ್ಯಕ್ಷ ಅವಧಿಯನ್ನು ಮುಗಿಸುತ್ತಿದ್ದಾರೆ.” “ನವೆಂಬರ್‌ನಲ್ಲಿ ಅವರ ಅಧ್ಯಕ್ಷ ಅವಧಿ ಮುಗಿಯುತ್ತದೆ. ಇನ್ನು 2-3 ತಿಂಗಳಿಗೆ ಏಕೆ ಗೊಂದಲ ಸೃಷ್ಟಿಸಬೇಕು?”…“ಈ ಸಮಯದಲ್ಲಿ ವಿಜಯೇಂದ್ರ ಅವರ ಟೀಮ್‌ನಲ್ಲಿ ಗೊಂದಲ ಸೃಷ್ಟಿಸಬೇಕು. 2 ತಿಂಗಳು ಸ್ಮೂತ್ ಆಗಿ ಮುಂದುವರಿಸಿ, ಬಳಿಕ ಹೊರಗೆ ಕಳಿಸಿ.” “ಅವಧಿ ಮುಗಿದ ನಂತರ ಅವರನ್ನು ಕೆಳಗಿಳಿಸಿದರೆ ಯಾರೂ ದೂಷಿಸುವುದಿಲ್ಲ. ಪಕ್ಷದೊಳಗೆ ಗೊಂದಲವಾಗುವುದಿಲ್ಲ.” “ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೂ ಇರಲಿ. ಅಕ್ಟೋಬರ್‌ನಲ್ಲಿ ಅವರನ್ನು ‘ಕಿಕ್ ಔಟ್’ ಮಾಡಿ.” “ಈಗಲೇ ಹೊರಗೆ ಕಳಿಸಿದರೆ ಅವರ ಪರವಾದ ಟೀಮ್ ನಿಮ್ಮ ನಿರ್ಧಾರವನ್ನು ಪ್ರಶ್ನಿಸುತ್ತದೆ. ಇನ್ನೂ 2 ತಿಂಗಳು ತಳ್ಳುವುದೇ ಉತ್ತಮ ಆಯ್ಕೆ.” ಎಂದು ಆಡಿಯೋದಲ್ಲಿ ತಿಳಿಸಲಾಗಿದೆ. 

ವಿಜಯೇಂದ್ರ ವಿರುದ್ಧ ಪಿತೂರಿಯೇ?

ಈ ಆಡಿಯೋ ಹೊರಬಿದ್ದ ಬೆನ್ನಲ್ಲೇ, ವಿಜಯೇಂದ್ರ ಅವರನ್ನು ಕೆಳಗಿಳಿಸಲು  ದೊಡ್ಡ ಮಟ್ಟದ ಪಿತೂರಿ  ನಡೆಯುತ್ತಿದೆ ಎಂಬ ಚರ್ಚೆ ಜೋರಾಗಿದೆ. ಹೈಕಮಾಂಡ್ ನಾಯಕರೊಬ್ಬರ ಜೊತೆ ಮಾತನಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಆಡಿಯೋ ನಕಲಿಯೇ ಅಥವಾ ಎಡಿಟ್ ಮಾಡಲಾಗಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಪಕ್ಷದೊಳಗೆ ಹಲ್‌ಚಲ್

ರಾಜ್ಯ ಬಿಜೆಪಿಯಲ್ಲಿ ಈ ಆಡಿಯೋ ಭಾರೀ ಹಲ್‌ಚಲ (Turmoil) ಎಬ್ಬಿಸಿದೆ. ವಿಜಯೇಂದ್ರ ಅವರು ಈ ಆಡಿಯೋದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಆಡಿಯೋ ಹೊರಬಿದ್ದ ನಂತರ ಬಿಜೆಪಿ ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. 

 

Exit mobile version