ಉಡುಪಿ: ಯಾವುದೇ ದಾಖಲೆಗಳನ್ನು ಪಡೆಯದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 10 ಮಂದಿ ಬಾಂಗ್ಲಾದೇಶದ ಪ್ರಜೆಗಳಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜಿಎಂ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಈ 10 ಮಂದಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಬಾಂಗ್ಲಾ ಪ್ರಜೆಗಳು ತಮ್ಮ ತಾವು ಭಾರತವದರೇ ಎಂದು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು ಎಂಬ ಗಂಭೀರ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಬಂಧಿತ ಆರೋಪಿಗಳು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೆ, ಅವರು ಇಲ್ಲೇ ನೆಲೆಸಿ, ಉದ್ಯೋಗ ಹೊಂದುವ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್‌ಗಳನ್ನು (Fake Aadhaar Cards) ಬಳಸುತ್ತಿದ್ದರು. ಬಳಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.
ಈ ಅಕ್ರಮ ಪ್ರಜೆಗಳು ಉಡುಪಿ ತಾಲೂಕಿನ ಪಡುತೋನ್ನ ಹೂಡೆ ಗ್ರಾಮಕ್ಕೆ ಬಂದಿದ್ದರು.ಈ ಬಗ್ಗೆ ಮಲ್ಪೆ ಠಾಣೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ್ದರು. ಈ ಅಕ್ರಮ ವಲಸಿಗರ ಬಗ್ಗೆ ಖಚಿತ ಮಾಹಿತಿ ಪಡೆದ ಮಲ್ಪೆ ಠಾಣೆ ಪೊಲೀಸರು, 2024ರ ಅಕ್ಟೋಬರ್ 11ರಂದು ಸಂಜೆ ವೇಳೆ ಕಾರ್ಯಾಚರಣೆ ಆರಂಭಿಸಿದರು. ಈ ಕಾರ್ಯಾಚರಣೆಯಲ್ಲಿ ಮಯ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ ಪೊಲೀಸರು ಮೊದಲಿಗೆ 7 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನಂತರ, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಈ ಜಾಲದಲ್ಲಿ ಭಾಗಿಯಾಗಿದ್ದ ಮತ್ತು ಹೂಡೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಉಳಿದ ಮೂವರನ್ನು ಕೂಡ ಬಂಧಿಸಿದರು. ಒಟ್ಟಾರೆ ಈ ಪ್ರಕರಣದಲ್ಲಿ 10 ಮಂದಿ ಅಕ್ರಮ ವಲಸಿಗರನ್ನ ಪೊಲೀಸರು ಬಂಧಿಸಿದರು.
ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಬಾಂಗ್ಲಾದೇಶದ ಪ್ರಜೆಗಳೆಂದರೆ, ಹಕೀಮ್ ಅಲಿ, ಇಸ್ಮಾಯಿಲ್, ಕರೀಂ, ಸಲಾಂ, ರಾಜೀಕುಲ್ ಸೇರಿದಂತೆ ಒಟ್ಟು 10 ಮಂದಿ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಉಡುಪಿಯ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜಿಎಂ ನ್ಯಾಯಾಲಯವು ಇವರ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ, ಕೇವಲ ಅಕ್ರಮ ಪ್ರವೇಶ ಮಾತ್ರವಲ್ಲದೆ, ದೇಶದ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲು ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿರುವುದು ಹೆಚ್ಚಿನ ಶಿಕ್ಷೆಗೆ ಅರ್ಹ ಎಂದು ನ್ಯಾಯಾಲಯ ತಿಳಿಸಿದೆ.
ಈ ಸಂಬಂಧ ಎಲ್ಲಾ 10 ಆರೋಪಿಗಳು ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ, ಜೊತೆಗೆ, ತಲಾ 10,000 ರೂಪಾಯಿಗಳ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
