ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ, ಸುದೀಪ್ ಆತ್ಮಹ*ತ್ಯೆ..!

Untitled design (98)

ಉಡುಪಿ: ಕಾರ್ಕಳದ ಮಾಜಿ ಶಾಸಕ ದಿವಂತ ಗೋಪಾಲ ಭಂಡಾರಿ ಅವರ 48 ವರ್ಷದ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾರ್ಕಳ ತಾಲೂಕಿನ ಹೆಬ್ರಿ ತಾಲೂಕು ನಿವಾಸಿಯಾಗಿದ್ದ ಸುದೀಪ್ ಭಂಡಾರಿ ಅ.13 ರಂದು ರಾತ್ರಿ  ಬ್ರಹ್ಮಾವರ ಸಮೀಪದ ರೈಲಿಗೆ ತಲಿಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿನ್ನೆ ತಡ ರಾತ್ರಿ ಬಾರ್ಕೂರು ರೈಲು ಬಾರುವ ಸಂದರ್ಭದಲ್ಲಿ ತಾನೆ ರೈಲಿನಡಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನೋಡಿದ ಸ್ಥಳೀಯರು ಮತ್ತು ರೈಲು ಸಿಬ್ಬಂದಿ ತಕ್ಷಣವೇ ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸುದೀಪ್ ಮನೆಯವರು ಹೇಳಿದಂತೆ ಆರ್ಥಿಕವಾಗಿ ಸಮಸ್ಯೆ ಹಾಗೂ ವೃತ್ತಿ ಸಂಬಂಧಿತ ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ.

ಸುದೀಪ್ ಅವರ ತಂದೆ ಗೋಪಾಲ ಭಂಡಾರಿ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಡವರ ಸೇವೆಗಾಗಿ ತಮ್ಮ ಜೀವನವನ್ನೇ ಮೀಸಲಾಯಿಸಿದ್ದ ಈ ಜನನಾಯಕನು 2017ರಲ್ಲಿ ನಿಧನರಾದರು. ಅವರ ಸ್ಮರಣಾರ್ಥ ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್ ಸ್ಥಾಪನೆಯಾಗಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದೆ.

Exit mobile version