ಮಹೆೇಶ್ ಶೆಟ್ಟಿ ತಿಮರೋಡಿಗಾಗಿ ಎಸ್‌ಐಟಿ ಸರ್ಚಿಂಗ್..ಹಲವು ವಸ್ತುಗಳು SIT ವಶಕ್ಕೆ

Untitled design 2025 08 26t134923.016

ಬೆಳ್ತಂಗಡಿ, ಆಗಸ್ಟ್ 26, 2025: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹೇಶ್ ಶೆಟ್ಟಿ ತಿಮರೋಡಿಯವರ ಮನೆ ಮೇಲೆ ದಾಳಿ ನಡೆಸಿದೆ. ಈ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ತಿಮರೋಡಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಸ್‌ಐಟಿ ತಂಡವು ಸರ್ಚ್ ವಾರೆಂಟ್ ಪಡೆದು ತಿಮರೋಡಿಯವರ ಬೆಳ್ತಂಗಡಿಯ ನಿವಾಸದ ಮೇಲೆ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದೆ.

ಸಿಸಿಟಿವಿ, ಮೊಬೈಲ್, ಮತ್ತು ಹಾರ್ಡ್‌ಡಿಸ್ಕ್ ವಶಕ್ಕೆ

ಎಸ್‌ಐಟಿ ತಂಡವು ತಿಮರೋಡಿಯವರ ಮನೆಯಿಂದ ಸಿಸಿಟಿವಿ ಕ್ಯಾಮರಾ, ಹಾರ್ಡ್‌ಡಿಸ್ಕ್, ಮತ್ತು ಚಿನ್ನಯ್ಯ ಎಂಬಾತನ ಬಳಕೆಯಲ್ಲಿದ್ದ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದೆ. ದಾಳಿಯ ಸಂದರ್ಭದಲ್ಲಿ ತಿಮರೋಡಿಯವರ ಪತ್ನಿ ಮತ್ತು ಪುತ್ರಿ ಮನೆಯಲ್ಲಿದ್ದರೂ, ತಿಮರೋಡಿ ಸ್ವತಃ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ

ಧರ್ಮಸ್ಥಳದಲ್ಲಿ ನಡೆದಿರುವ ಈ ಪ್ರಕರಣವು ಕರ್ನಾಟಕದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬರು ಶವಗಳನ್ನು ರಹಸ್ಯವಾಗಿ ಹೂತುಹಾಕಿರುವ ಆರೋಪವನ್ನು ಮಾಡಿದ್ದಾರೆ. ಈ ಆರೋಪದ ಆಧಾರದ ಮೇಲೆ ರಾಜ್ಯ ಸರ್ಕಾರವು ಎಸ್‌ಐಟಿಯನ್ನು ರಚಿಸಿ, ತನಿಖೆಗೆ ಆದೇಶಿಸಿತ್ತು. ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ರಚಿತವಾದ ಈ ತಂಡವು ಜುಲೈ 20ರಿಂದ ತನಿಖೆಯನ್ನು ಆರಂಭಿಸಿತ್ತು.

Exit mobile version