BREAKING: ಮೋದಿ-ಟ್ರಂಪ್ ಬೃಹತ್ ಡೀಲ್: ಸುಂಕವನ್ನ ಶೇ.18%ಕ್ಕೆ ಇಳಿಸಿದ ಅಮೇರಿಕ,ರಷ್ಯಾ ತೈಲಕ್ಕೆ ಭಾರತ ಗುಡ್‌ಬೈ

Untitled design 2026 02 02T230918.220

ತಿಂಗಳುಗಳ ಕಾಲ ನಡೆದ ಸುದೀರ್ಘ ಚರ್ಚೆ ಮತ್ತು ವ್ಯಾಪಾರ ಉದ್ವಿಗ್ನತೆಯ ನಂತರ, ಭಾರತ ಮತ್ತು ಅಮೆರಿಕ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಒಪ್ಪಂದದ ಅನ್ವಯ ಭಾರತದ ಮೇಲಿನ ಸುಂಕಗಳನ್ನು ಗಣನೀಯವಾಗಿ ಇಳಿಸಲಾಗಿದ್ದು, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ.

ಟ್ರಂಪ್ ಅವರ ಟ್ರೂತ್ ಸೋಶಿಯಲ್ ಪೋಸ್ಟ್

ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಶಿಯಲ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ನನ್ನ ಆತ್ಮೀಯ ಗೆಳೆಯ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಹೆಮ್ಮೆಯೆನಿಸುತ್ತದೆ. ವ್ಯಾಪಾರ ಮತ್ತು ಯುದ್ಧದ ಅಂತ್ಯದ ಬಗ್ಗೆ ನಾವು ಚರ್ಚಿಸಿದ್ದೇವೆ. ನಮ್ಮ ಸ್ನೇಹದ ಗೌರವಾರ್ಥವಾಗಿ ಭಾರತದ ಮೇಲಿನ ಸುಂಕವನ್ನು ತಕ್ಷಣವೇ ಜಾರಿಗೆ ಬರುವಂತೆ ಶೇ. 25 ರಿಂದ ಶೇ. 18ಕ್ಕೆ ಇಳಿಸಲು ನಾನು ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ.

ರಷ್ಯಾ ತೈಲಕ್ಕೆ ಗುಡ್‌ಬೈ

ಈ ಒಪ್ಪಂದದ ಅತ್ಯಂತ ಪ್ರಮುಖ ಅಂಶವೆಂದರೆ ರಷ್ಯಾ-ಉಕ್ರೇನ್ ಯುದ್ಧದ ವಿಚಾರ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಬದಲಾಗಿ, ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಇದು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮತ್ತು ರಷ್ಯಾದ ಆರ್ಥಿಕ ಮೂಲವನ್ನು ಕುಗ್ಗಿಸಲು ಸಹಾಯ ಮಾಡುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರವಾಗಿದೆ.

$500 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ವ್ಯಾಪಾರ

ಒಪ್ಪಂದದ ಭಾಗವಾಗಿ ಭಾರತವು ಅಮೆರಿಕದ ವಿರುದ್ಧ ಹೊಂದಿದ್ದ ಸುಂಕದ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲು ಮುಂದಾಗಿದೆ. ಅಲ್ಲದೆ, ಸುಮಾರು 500 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಮೊತ್ತದ ಅಮೆರಿಕದ ಉತ್ಪನ್ನಗಳನ್ನು (ಇಂಧನ, ತಂತ್ರಜ್ಞಾನ, ಕೃಷಿ, ಮತ್ತು ಕಲ್ಲಿದ್ದಲು) ಖರೀದಿಸಲು ಪ್ರಧಾನಿ ಮೋದಿ ಬದ್ಧರಾಗಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕನ್ನರನ್ನು ಖರೀದಿಸಿ (Buy American) ಎಂಬ ಟ್ರಂಪ್ ನೀತಿಗೆ ಪೂರಕವಾಗಿ ಭಾರತವು ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ.

ಒಪ್ಪಂದದ ಪ್ರಮುಖ ಮುಖ್ಯಾಂಶಗಳು:

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಇತ್ತೀಚೆಗೆ ನಡೆದ ‘ಎಲ್ಲದರ ತಾಯಿ’ (Mother of all deals) ಒಪ್ಪಂದದ ಬೆನ್ನಲ್ಲೇ ಅಮೆರಿಕದ ಈ ಘೋಷಣೆ ಹೊರಬಿದ್ದಿರುವುದು ಭಾರತದ ಜಾಗತಿಕ ಶಕ್ತಿಯನ್ನು ಸಾಬೀತುಪಡಿಸಿದೆ.

Exit mobile version