ರಾಜ್ಯ ಬಜೆಟ್‌‌ 2025: ಸಿದ್ದು ಬಜೆಟ್ ಟಾಪ್ 4 ಹೈಲೈಟ್ಸ್!

Befunky collage 2025 03 07t130315.243

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ 2025 ಮಂಡಿಸಿದರು. ಇದು ಅವರ 16ನೇ ಬಜೆಟ್ ಆಗಿದ್ದು, ಅತಿಹೆಚ್ಚು ಬಜೆಟ್ ಮಂಡನೆಯಾಗಿದೆ. ರಾಜ್ಯ ಬಜೆಟ್‌‌ನ ಹೈಲೈಟ್ಸ್‌ ಇಂತಿವೆ.

1.ಕೃಷ್ಣಾ ಮೇಲ್ದಂಡೆ ಯೋಜನೆ:

ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಸಂತ್ರಸ್ತರಿಗೆ ರಾಜ್ಯ ಸರ್ಕಾರವು ಭೂಮಿ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ನೀಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆಗೆ ವೇಗವಾಗಿ ಪರಿಹಾರ ನೀಡವ ಯೋಜನೆ. ಬಾಗಲಕೋಟೆಯಲ್ಲಿ ಫಾಸ್ಟ್ ಕೋರ್ಟ್ ಸ್ಥಾಪನೆ  ಮತ್ತು ಭೂಸ್ವಾಧೀನ ಪರಿಹಾರಕ್ಕಾಗಿಯೇ ವಿಶೇಷ ಕೋರ್ಟ್ ಸ್ಥಾಪನೆ. ಕಾನೂನಿನ ಅಡಿಯಲ್ಲಿಯೇ ಶೀಘ್ರ ಪರಿಹಾರ ನೀಡಲು ನಿರ್ಧಾರ.

2.ಸಿದ್ದು ಬಜೆಟ್.. ಸಾಲವೇ 27%

2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು , ಇದರ ಒಟ್ಟು ಗಾತ್ರ 4 ಲಕ್ಷ 9 ಸಾವಿರ ಕೋಟಿ ರೂಪಾಯಿ. ಇದರಲ್ಲಿ 27% ರಷ್ಟು  ಸಾಲದಿಂದ ಪೂರೈಸಲಾಗುವುದು. ಬಜೆಟ್‌ನ ಹಂಚಿಕೆಯಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ 52%, ಕೇಂದ್ರದ ಪಾಲು 13%, ಕೇಂದ್ರದ ಸಹಾಯಧನ 4% ಮತ್ತು ರಾಜಸ್ವತೆರಿಗೆ 4% ರಷ್ಟಿದೆ. ಮಿಕ್ಕ 27% ಸಾಲದಿಂದಲೇ ಸಿದ್ಧರಾಮಯ್ಯ ಸರ್ಕಾರ ಹೊಂದಿಸಿದ್ದಾರೆ. ರಾಜ್ಯ ಬಜೆಟ್ ಪುಸ್ತಕದಲ್ಲಿಯೇ ಸಮಗ್ರ ವಿವರ ನೀಡಿರುವ ಸಿದ್ದು, ಒಟ್ಟು ಒಂದು ಲಕ್ಷದ 16 ಸಾವಿರ ಕೋಟಿ ರೂ. ಸಾಲ ಹೊಂದಿದೆ.

3.ಬೆಂಗಳೂರು ಬಂಪರ್ ಕೊಡುಗೆ!

2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ನಿರೀಕ್ಷೆಯಂತೆ ರಾಜಧಾನಿ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಬೆಂಗಳೂರು ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ.

ಪ್ರಮುಖವಾಗಿ ದೇವನಹಳ್ಳಿಯವರೆಗೆ ಮೆಟ್ರೋ ಜಾಲ ವಿಸ್ತರಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ನಮ್ಮ ಮೆಟ್ರೋ 3ನೇ ಹಂತದ ಯೋಜನೆಯೊಂದಿಗೆ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ.

  1. ಟನೆಲ್ ನಿರ್ಮಾಣಕ್ಕೆ 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ.
  2. ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ 8914 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ‌.
  3. ಬೆಂಗಳೂರು ಸುತ್ತ ರಿಂಗ್ ರೋಡ್ಸ್ ಯೋಜನೆಗೆ 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
  4. ಬ್ರಾಂಡ್ ಬೆಂಗಳೂರು ಯೋಜನೆಗಾಗಿ 2200 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ‌.
  5. ಫೆರಿಫೆರಲ್ ರಿಂಗ್ ರೋಡಿಗೆ 27 ಸಾವಿರ ಕೋಟಿ ರೂ.ಮೊತ್ತದಲ್ಲಿ ಅನುಷ್ಠಾನ‌.
  6. ಬೆಂಗಳೂರು ಸೇಫ್ ಸಿಟಿ ಯೋಜನೆ : 667 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
  7. 7500 ಸಿಸಿಟಿವಿ, 10 ಡ್ರೋಣ್, 560 ಬಾಡಿ ಕ್ಯಾಮೆರಾ
  8. ಪೊಲೀಸರಿಗಾಗಿ ಒಂದು ಸಾವಿರ ಹೊಸ ವಾಹನ ಖರೀದಿ
  9. ಬೆಂಗಳೂರಿಗೆ ಹೊಸ 9000 ಬಿಎಂಟಿಸಿ ಬಸ್ ಖರಿದಿ

4.ಕ್ರೀಡಾಪಟುಗಳಿಗೆ ಸ್ಪೆಷಲ್ ಸ್ಕೀಂ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ತೀರ್ಮಾನಗಳು ಕೈಗೊಳ್ಳಲಾಗಿದೆ. ಆದಿನಾರಾಯಣ ಹೊಸಹಳ್ಳಿಯಲ್ಲಿ 20 ಎಕರೆಯಲ್ಲಿ ಕಟ್ಟಲಾಗುವ ನೂತನ ಕ್ರೀಡಾಂಗಣ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ. ಇದೇ ರೀತಿಯಲ್ಲಿ, ಜಿಲ್ಲೆಯ 12 ತಾಲೂಕುಗಳಲ್ಲಿ ಪ್ರತಿ ಕ್ರೀಡಾಂಗಣಕ್ಕೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಹಣೆ ಮತ್ತು ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಕ್ರೀಡಾ ವಸತಿ ಶಾಲೆ ಆರಂಭಿಸಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವೃತ್ತಿಪರ ತರಬೇತಿ ದೊರಕಲಿದೆ. ಮೈಸೂರು ಮತ್ತು ಬೆಳಗಾವಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡುವ ಯೋಜನೆಯು ವಿಜ್ಞಾನ ಆಧಾರಿತ ಕ್ರೀಡಾ ತರಬೇತಿಗೆ ಉತ್ತೇಜನ ನೀಡಲಿದೆ. ಚಾಮರಾಜನಗರದಲ್ಲಿ ನಿರ್ಮಾಣವಾಗಲಿರುವ ಒಲಿಂಪಿಕ್ ಮಾದರಿ ಈಜುಕೊಳ (ಸ್ವಿಮ್ಮಿಂಗ್ ಪೂಲ್) ಕ್ರೀಡಾಪಟುಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ.

ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಸೌಲಭ್ಯವಾಗಿ ಹಾಜರಾತಿ ವಿನಾಯಿತಿ ನೀಡಲಾಗುತ್ತಿದೆ. ಈ ನಿಯಮದಡಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ 15% ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ 25% ಹಾಜರಾತಿ ವಿನಾಯಿತಿ ನೀಡಲಾಗುವುದು. ಅಲ್ಲದೆ, ಪದಕ ವಿಜೇತರಿಗೆ ಶೇ.5% ಕೃಪಾಂಕವನ್ನು ನೀಡಲಾಗುತ್ತಿದೆ.

ಕುಸ್ತಿ ಕ್ಷೇತ್ರದಲ್ಲೂ ಮಹತ್ವದ ಘೋಷಣೆಗಳು ನಡೆದಿದ್ದು, ನಿವೃತ್ತ ಕುಸ್ತಿಪಟುಗಳ ಮಾಸಾಶನವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 6,000 ರೂ., ರಾಷ್ಟ್ರೀಯ ಕುಸ್ತಿಪಟುಗಳಿಗೆ 5,000 ರೂ., ಮತ್ತು ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 1,500 ರೂ. ಮಾಸಾಶನ ನೀಡಲಾಗುತ್ತಿದೆ.

 

    Exit mobile version