ರಾಜ್ಯದಲ್ಲಿ ಹೆಚ್ಚುತ್ತಿದೆ ಅತ್ಯಾಚಾರ ಪ್ರಕರಣಗಳು: ಕಾರಣವೇನು..? ಶಿಕ್ಷೆ ಪ್ರಮಾಣ ಎಷ್ಟಿದೆ ಗೊತ್ತಾ..?

111 (15)

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಗಂಭೀರ ಪ್ರಶ್ನೆ ರಾಜ್ಯದ ಜನತೆಯ ಮನಸ್ಸಿನಲ್ಲಿ ಮೂಡುತ್ತಿದೆ. ಏಕೆಂದರೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯ ಏರಿಕೆಯು ಆತಂಕಕಾರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿವೆ. ಆದರೆ ಅತ್ಯಾಚಾರಿಗೆ ಆಗ್ತಿರೋ ಶಿಕ್ಷೆಯ ಪ್ರಮಾಣ ಮಾತ್ರ ಕೇವಲ 3.6% ರಷ್ಟಿದ್ದು, ರಾಜ್ಯದ ಜನರಲ್ಲಿ ಆಘಾತವನ್ನುಂಟುಮಾಡಿದೆ. ಈ ಬಗ್ಗೆ ಸರ್ಕಾರ ಅಂಕಿಅಂಶ ನೀಡಿದ್ದು, ಜನತೆಯನ್ನು ಬೆಚ್ಚಿಬೀಳಿಸುವಂತಿದೆ.

ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ತನಿಖೆಯಲ್ಲಿ ಕಾಣಸಿಗುವ ದೋಷಗಳು, ಸಾಕ್ಷ್ಯಗಳ ಕೊರತೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳ ವಿಳಂಬ. ಇದರಿಂದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರ ಜೊತೆಗೆ ರಾಜೀಸಂಧಾನದ ಮೂಲಕ ಬಗೆಹರಿಯುವ ಪ್ರಕರಣಗಳು ಕೂಡ ಇದರಿಂದ ಹೆಚ್ಚಾಗಿವೆ. ಆದರೆ ಇದು ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ಪ್ರಕರಣಗಳು..?
ವರ್ಷ ಪ್ರಕರಣದ ಸಂಖ್ಯೆ ಬಂಧಿತರ ಸಂಖ್ಯೆ
2023 600 767
2024 739 969
2025 (ಜುಲೈ ಅಂತ್ಯಕ್ಕೆ) 549 407
ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ..!
ವರ್ಷ ಶಿಕ್ಷೆಯ ಪ್ರಮಾಣ
2021 11.7%
2022 8.4%
2023 3.6%
ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು
ವರ್ಷ ಪ್ರಕರಣಗಳು
2023 1167
2024 1517
2025 (ಜುಲೈ ಅಂತ್ಯಕ್ಕೆ) 1042
ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆಗೆ ಕಾರಣಗಳು…?
  • ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ತಾರೆ.
  • ನ್ಯಾಯಾಲಯದ ವೇಳೆ ಪ್ರತಿಕೂಲ ಸಾಕ್ಷಿ ಹೇಳಿಕೆ ನೀಡ್ತಿರೋದು.
  • ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ನಿರಾಸಕ್ತಿ ವಹಿಸುವುದು.
  • ಅತ್ಯಾಚಾರ ಸಾಬೀತು ಪಡಿಸುವಲ್ಲಿ ವಿಫಲವಾಗ್ತಿರುವುದು.
  • ಕೆಲವೊಮ್ಮೆ ತನಿಖಾ ಪ್ರಕ್ರಿಯೆಯಲ್ಲಿ ಲೋಪವಾಗ್ತಿರೋದು.
  • 164 ಹೇಳಿಕೆ , ನ್ಯಾಯಾಲಯದ ಹೇಳಿಕೆ ಹೊಂದಾಣಿಕೆಯಾಗದಿರುವುದು.
  • ಸಾಕ್ಷಿದಾರರು ಆರೋಪಿತರನ್ನ ತಪ್ಪಾಗಿ ಗುರ್ತಿಸುವುದು.
  • ವಿಚಾರಣೆ ವೇಳೆ ಸಾಕ್ಷಿದಾರರು ಮೃತಪಡುವುದು.
  • ಕಾನೂನು ಪ್ರಕ್ರಿಯೆ ವಿಳಂಬದಿಂದ ಸಾಕ್ಷಿದಾರರ ನಿರಾಸಕ್ತಿ.
  • ವೈಜ್ಞಾನಿಕ ಸಾಕ್ಷ್ಯದ ಕೊರತೆ.

 

Exit mobile version