ರೈಲ್ವೆ ನೇಮಕಾತಿ ಇಲಾಖೆ (RRC) 1,763 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. 10ನೇ ತರಗತಿ ಮತ್ತು ಐಟಿಐ ಪಾಸ್ ಆದ ಅಭ್ಯರ್ಥಿಗಳಿಗೆ ಈ ಅವಕಾಶ ಲಭ್ಯವಿದೆ. ಅರ್ಜಿಗಳನ್ನು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 17 ರವರೆಗೆ ಅಧಿಕೃತ ವೆಬ್ಸೈಟ್ www.rrcpryj.org ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬಹುದು.
ಮುಖ್ಯ ಅಂಶಗಳು:
ADVERTISEMENT
ADVERTISEMENT
- ಹುದ್ದೆಗಳ ಸಂಖ್ಯೆ:1,763 ಅಪ್ರೆಂಟಿಸ್ ಹುದ್ದೆಗಳು.
- ಶೈಕ್ಷಣಿಕ ಅರ್ಹತೆ:10ನೇ ತರಗತಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ಐಟಿಐ ಆಗಿದ್ದರೆ ಅದಕ್ಕೆ ಸಂಬಂಧ ಪಟ್ಟ ಪ್ರಮಾಣಪತ್ರ ಹೊಂದಿರಬೇಕು.
- ವಯೋಮಿತಿ:ಸೆಪ್ಟೆಂಬರ್ 16, 2025 ರಂತೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸು. ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ.
- ಅರ್ಜಿ ಪ್ರಕ್ರಿಯೆ:ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್rrcpryj.org ಗೆ ಭೇಟಿ ನೀಡಿ
- ಆನ್ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ
- ಅರ್ಜಿಯ ಪ್ರಿಂಟ್ ತೆಗೆದು ಭವಿಷ್ಯದ ಉಲ್ಲೇಖಕ್ಕಾಗಿ ಸಂಗ್ರಹಿಸಿ
ವಿವರವಾದ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ