ಹನಿಟ್ರ್ಯಾಪ್‌ ಅಶ್ಲೀಲ ಎಂದು ಕಾಂಗ್ರೆಸ್‌ ನಾಯಕರಿಗೆ ಅನ್ನಿಸಲೇ ಇಲ್ಲ

ಶಾಸಕರನ್ನು ಅಮಾನತು ಮಾಡಿರುವುದು ಖಂಡನೀಯ, ಸದನದ ಗೌರವ ಕಾಪಾಡಲು ತನಿಖೆಗೆ ಆಗ್ರಹಿಸಿದ್ದೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ,ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮಸೂದೆ ಅಸಂವಿಧಾನಿಕ.

Film (7)

ನ್ಯಾಯಕ್ಕಾಗಿ ಆಗ್ರಹಿಸಿದ ಶಾಸಕರನ್ನು ಅಮಾನತು ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ದುರುಳ ನೀತಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್‌ ಆಗಿದೆ ಎಂದಾಗ, ಕಾಂಗ್ರೆಸ್‌ನ ಇತರೆ ಸಚಿವರಿಗೆ, ಮುಖ್ಯಮಂತ್ರಿಗೆ ಅದು ಅಶ್ಲೀಲ ಎಂದು ಅನ್ನಿಸಲೇ ಇಲ್ಲ. ಹಿಂದೆ ಶಾಸಕರು ಮೊಬೈಲ್‌ ನೋಡಿದ್ದಕ್ಕೆ ಕಾಂಗ್ರೆಸ್‌ನವರು ಎದ್ದು ಕುಣಿದಿದ್ದರು. ಆದರೆ ಹನಿಟ್ರ್ಯಾಪ್‌ ಅಶ್ಲೀಲ ಎಂದು ಅನಿಸಿಲ್ಲ. ಸದನಕ್ಕೆ ಗೌರವ ಇರಲಿ ಎಂದು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೇವೆ. ಹನಿಟ್ರ್ಯಾಪ್‌ ಆಗಿರುವುದು ತಮ್ಮ ಪಕ್ಷದ ನಾಯಕರಿಂದಲೇ ಎಂದು ಹೇಳಿದರೂ ಸರ್ಕಾರ ಸುಮ್ಮನಿದೆ ಎಂದು ದೂರಿದರು.

ಬಿಜೆಪಿ ಶಾಸಕರು ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಮೇಲೆ ಸ್ಪೀಕರ್‌ ಯು.ಟಿ.ಖಾದರ್‌ ಗದಾ ಪ್ರಹಾರ ಮಾಡಿರುವುದು ಯಾವ ನ್ಯಾಯ? ಯಾವ ಮುಖ ಇಟ್ಟುಕೊಂಡು ಸಚಿವರು ಸದನಕ್ಕೆ ಬಂದಿದ್ದಾರೆ? 18 ಶಾಸಕರನ್ನು ಅಮಾನತು ಮಾಡಿರುವುದು ಅನ್ಯಾಯ. ಸ್ಪೀಕರ್‌ಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ನಾವು ನ್ಯಾಯ ಕೇಳಿದ್ದೇವೆ. ಸ್ಪೀಕರ್‌ರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಕಾಂಗ್ರೆಸ್‌ನ ದುರುಳ ನೀತಿ. ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಎಂದರು.

ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸುತ್ತೇವೆ. ಇದು ಸದನಕ್ಕೆ ಅಗೌವರ. ನ್ಯಾಯಾಂಗ ತನಿಖೆಗೆ ಆಗ್ರಹಿಸುವುದು ಗೂಂಡಾಗಿರಿ ಆಗುತ್ತದೆಯೇ? ಕಾಂಗ್ರೆಸ್‌ನ ಏಜೆಂಟರಂತೆ ಸ್ಪೀಕರ್‌ ಕೆಲಸ ಮಾಡುತ್ತಿದ್ದಾರೆ ಎಂದರು.

ಗುತ್ತಿಗೆ ಮೀಸಲಾತಿ ಮಸೂದೆ ಅಸಂವಿಧಾನಿಕ

ಸಕ್ರಾರೋ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮಸೂದೆ ಸಂವಿಧಾನ ವಿರೋಧಿ. ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ಎಲ್ಲ ಧರ್ಮಗಳು ಒಟ್ಟಿಗೆ ಹೋಗಬೇಕು ಎನ್ನುವ ಆಶಯ ಹೊಂದಿದ್ದರೆ, ಈ ಮಸೂದೆ ಸಮಾಜವನ್ನ ಒಡೆಯುವ ಬಿಲ್ ಆಗಿದೆ.

ಕಾಂಗ್ರೆಸ್ ಪಕ್ಷ ಈಗಾಗಲೇ ಒಂದು ಬಾರಿ ದೇಶವನ್ನ ವಿಭಜನೆ ಮಾಡಿದೆ. ಈಗ ವೋಟಿನ ರಾಜಕಾರಣಕ್ಕೆ ಮತ್ತೂಮ್ಮೆ ಒಂದು ಸಮುದಾಯದ ಓಲೈಕೆ ಮಾಡಲು ಹೊರಟಿದೆ. ಈ ಮಸೂದೆ ಹಿಂದೂಗಳ ಭಾವನೆಗೆ ದಕ್ಕೆ ತರುವುದರ ಜೊತೆಗೆ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರ ಹಕ್ಕನ್ನು ಕಸಿದುಕೊಳ್ಳಲ್ಲಿದೆ ಎಂದರು.

Exit mobile version