ಹುಟ್ಟಿದೂರಿಗೆ ಎಲ್.ಕೆ. ಅತೀಕ್ ಆರೋಗ್ಯ ಸೇವೆ: ಪಾವಗಡ ಬೂನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

Untitled design 2026 01 04T132957.706

ತುಮಕೂರು: ತುಮಕೂರಿನ ಪಾವಗಡ ನಗರದಲ್ಲಿ ಸಂಭ್ರಮ ಮನೆ ಮಾಡಿತ್ತು, ಜೊತೆಗೆ ಅಲ್ಲಿನ ಜನ ಖುಷಿಯಾಗಿದ್ದರು. ಯಾಕಂದ್ರೆ, ಅಲ್ಲಿ ಹುಟ್ಟಿದೂರಿಗೆ ಏನಾದ್ರೂ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದಾರೆ. ಆ ವ್ಯಕ್ತಿಯೇ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು.

ತಾನು ಹುಟ್ಟಿ ಬೆಳೆದ ಊರಿನಲ್ಲೇ ಜನರ ಸೇವೆಗೆ ಏನಾದರೂ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ್ದ ಅತೀಕ್ ಅವರು ಬೂನ್ ಆಸ್ಪತ್ರೆಯನ್ನು ಆರಂಭಿಸಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಶನಿವಾರ ಉಚಿತ ಆರೋಗ್ಯ ಶಿಬಿರವನ್ನ ಹಮ್ಮಿಕೊಂಡಿದ್ದರು. ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಶಿಬಿರ ಉದ್ಘಾಟಿಸಿ, ಅತೀಕ್ ಅವರ ಸೇವೆಯನ್ನು ಕೊಂಡಾಡಿದ್ರು.

ಈ ವೇಳೆ ಬೂನ್ ಆಸ್ಪತ್ರೆಯ ಮ್ಯಾನೇಜಿಂಗ್ ಹೆಡ್ ಫೈಜ್ ಅತೀಕ್ ಅವರು, ಆಸ್ಪತ್ರೆಯ ಪಾರ್ಟ್ನರ್ ಆಗಿರೋ ಡಾ. ಜಾಲೀಸ ಆಯೇಶ, ಸಿಇಒ ಫಹಾದ್ ಖಾನ್, ಮ್ಯಾನೇಜಿಂಗ್ ಡೈರೆಕ್ಟರ್ ಬದ್ರು ಜಮಾ ಖಾನಂ ಅವರು ಹಾಜರಿದ್ದರು. ಉಚಿತ ಆರೋಗ್ಯ ಶಿಬಿರಕ್ಕೆ ಆಗಮಿಸಿದ ಪಾವಗಡದ ನೂರಾರು ಮಂದಿ ತಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಜೊತೆಗೆ ಆಸ್ಪತ್ರೆಯ ಸೇವೆಯನ್ನ ಮೆಚ್ಚಿಕೊಂಡರು.

Exit mobile version