ಬೆಂಗಳೂರು: ನವೀನ ಪಾರ್ಕ್ ನಿವಾಸಿಗಳ ಸಂಘದ ಸಹಯೋಗದೊಂದಿಗೆ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ದಿನಾಂಕ : 31/01/2026 ಹಾಗೂ 01/02/2026 2 ದಿನಗಳ ಕಾಲ “ಸ್ವರ್ಣಾ ಕಪ್” ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ರಾಜ್ಯದ ಹಾವೇರಿ, ದಾವಣಗೇರೆ, ಶಿವಮೊಗ್ಗ, ಧಾರವಾಡ, ಉ.ಕನ್ನಡ, ಬೆಳಗಾವಿ, ಬಳ್ಳಾರಿ, ಗದಗ, ಹೊಸಪೇಟ್, ರಾಯಚೂರು, ಹಾಗೂ ಹಲವಾರು ಜಿಲ್ಲೆಗಳಿಂದ ಒಟ್ಟು 105 ಯುವ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ಮೊಟ್ಟಮೊದಲ ಬಾರಿಗೆ ಅಕಾಡೆಮಿ ವತಿಯಿಂದ U-7 ವಿಭಾಗವನ್ನು ಪರಿಚಯಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಸ್ವರ್ಣಾ ಸಮೂಹ ಸಂಸ್ಠೆಗಳ ವ್ಯವಸ್ಠಾಪಕ ನಿರ್ದೇಶಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಅವರು ಮಾತನಾಡುತ್ತ “ಭವಿಷ್ಯತ್ತಿನ ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಲು ಹಾಗು ಹಿರಿಯ ಕಿರಿಯ ಎಲ್ಲಾ ವರ್ಗಕ್ಕೂ ಉಪಯೋಗವಾಗಲಿ ಎಂದು 10 ವರ್ಷಗಳ ಹಿಂದೆ ಡಾ.ವಿಜಯ. ಸಂಕೇಶ್ವರ್ ಅವರ ನೇತೃತ್ವದಲ್ಲಿ ನಮ್ಮ ನವೀನ್ ಪಾರ್ಕಿನಲ್ಲಿ ಅಂತರಾಷ್ಟೀಯ ಮಟ್ಟದ 4 ಉಡನ್ ಕೋರ್ಟ್ ಗಳನ್ನು ನಿರ್ಮಿಸಿಲಾಗಿದೆ.
ಪ್ರತೀ ದಿನ ಇಲ್ಲಿ 200 ಜನ ತರಬೇತಿ ಹಾಗೂ ದಿನನಿತ್ಯ ಚಟುವಟಿಕೆಗೆಂದು ಆಟವಾಡಲು ಬರುತ್ತಾರೆ. ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಜೊತೆಗೆ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಇಂತಹ ಕ್ರೀಡೆಯನ್ನು ರಾಜ್ಯ ಮಟ್ಟದಲ್ಲಿ ಪಂದ್ಯಾವಳಿಯಾಗಿ ಆಯೋಜಿಸಿರುವುದು ತುಂಬಾ ಖುಷಿಯ ವಿಚಾರ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೂ ಹಾಗೂ ವಿಜೇತರಿಗೂ ಹೃತ್ಪೂರ್ವಕ ಅಭಿನಂದನೆಗಳು” ಎಂದು ಅಭಿನಂದಿಸಿದರು. ಈ ಪಂದ್ಯಾವಳಿಯ ವಿಜೇತರಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರು. ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ನಾಗೇಂದ್ರ ಜಿ.ಸಂಶಿ, ಮುಖ್ಯ ತರಬೇತುದಾರರಾದ ಸಾಗರ್ ಎನ್.ಸಂಶಿ ಹಾಗು ರಾಜೇಶ್ ವಿ.ಬಳ್ಳಾರಿ ಉಪಸ್ಠಿತರಿದ್ದರು.
ಪಂದ್ಯಾವಳಿ ವಿಜೇತರ ವಿವರಗಳು
U-7 ಓಪನ್ ಸಿಂಗಲ್ಸ್
1.ಚಂದನ್ : ವಿನ್ನರ್ : ಶಿರಸಿ
2.ಶ್ರೇಯಸ್ ನವಲಗುಂದ : ರನ್ನರ್ ಅಪ್ : ಧಾರವಾಡ
U-9 ಓಪನ್ ಸಿಂಗಲ್ಸ್
1.ಜಯಂತ್.ಜಿ.ಎಮ್ : ವಿನ್ನರ್ : ಶಿರಸಿ
2.ವೀರೆನ್ ರಾಥೊಡ್ ; ರನ್ನರ್ ಅಪ್ : ಹುಬ್ಬಳ್ಳಿ
U-11 ಬಾಯ್ಸ್ ಸಿಂಗಲ್ಸ್
1.ಜೈವರ್ದನ.ಕೆ : ವಿನ್ನರ್ : ಹುಬ್ಬಳ್ಳಿ
2.ಪ್ರಣೀತ್.ಹೆಗಡೆ; ರನ್ನರ್ ಅಪ್ :ಶಿರಸಿ
U-11 ಗರ್ಲ್ಸ್ ಸಿಂಗಲ್ಸ್
1.ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ಕೄತಿಕಾ.ಸುಣಗಾರ್ : ರನ್ನರ್ ಅಪ್ : ಹುಬ್ಬಳ್ಳಿ
U-13 ಬಾಯ್ಸ್ ಸಿಂಗಲ್ಸ್
1.ಶೌರ್ಯ ಬಿ.ಎಸ್ :ವಿನ್ನರ್: ಮುಂಡಗೋಡ್
2.ಸೂರ್ಯತೇಜ್ ರೆಡ್ಡಿ : ರನ್ನರ್ ಅಪ್
U-13 ಗರ್ಲ್ಸ್ ಸಿಂಗಲ್ಸ್
1. 1.ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ಕೄತಿಕಾ.ಸುಣಗಾರ್ : ರನ್ನರ್ ಅಪ್ : ಹುಬ್ಬಳ್ಳಿ
U-15 ಬಾಯ್ಸ್ ಸಿಂಗಲ್ಸ್
1.ಅಬ್ಬಾಸ್ ದಾಸ್ : ವಿನ್ನರ್ : ತೋರಣಗಲ್ಲು
2. ಶೌರ್ಯ ಬಿ.ಎಸ್ :ರನ್ನರ್ ಅಪ್: ಮುಂಡಗೋಡ್
U-15 ಗರ್ಲ್ಸ್ ಸಿಂಗಲ್ಸ್
1. ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ತನ್ವಿ.ಹಿತ್ತಲಮನಿ : ರನ್ನರ್ ಅಪ್ : ಹುಬ್ಬಳ್ಳಿ
U-17 ಬಾಯ್ಸ್ ಸಿಂಗಲ್ಸ್
1. ರಜತ್ ಸಿದ್ದ್ರಾಮಶೆಟ್ಟರ್ : ವಿನ್ನರ್ : ಹುಬ್ಬಳ್ಳಿ
2.ಪ್ರಥಮ್ ಹೆಗಡೆ : ವಿನ್ನರ್ : ಹುಬ್ಬಳ್ಳಿ
U-17 ಗರ್ಲ್ಸ್ ಸಿಂಗಲ್ಸ್
1.ಸಮಂತ.ಎಸ್ : ವಿನ್ನರ್ : ಹುಬ್ಬಳ್ಳಿ
2. ತನ್ವಿ.ಹಿತ್ತಲಮನಿ : ರನ್ನರ್ ಅಪ್ : ಹುಬ್ಬಳ್ಳಿ
ವಿಶೇಷವಾಗಿ ಅತೀ ಹೆಚ್ಚು ಪ್ರಶಸ್ತಿಗಳು ನವೀನ್ ಪಾರ್ಕಿನ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಲಭಿಸಿರುವುದು ಶ್ಲಾಘನೀಯ ವಿಚಾರ..ಎಮ್.ಮೆಹೆತಾಬೆಲ್ : U-11,U-13 ಹಾಗು U-15 ವರ್ಗದಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ.
