ಕೇಂದ್ರ ಸರ್ಕಾರವು ಸಂಸದರ ವೇತನ ಮತ್ತು ಭತ್ಯೆಗಳಲ್ಲಿ ಗಮನಾರ್ಹ ಏರಿಕೆಗಳನ್ನು ಘೋಷಿಸಿದೆ. ಕರ್ನಾಟಕದಲ್ಲಿ ಶಾಸಕರ ವೇತನದಲ್ಲಿ ಶೇ.100 ಹೆಚ್ಚಳ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ಸಂಸದರ ವೇತನ, ಭತ್ಯೆ ಯಲ್ಲಿ ಶೇ.24ರಷ್ಟು ಹೆಚ್ಚಳ ಮಾಡಿ ಆದೇಶಹೊರಡಿಸಿದೆ. ಇದರಿಂದಾಗಿ 1 ಲಕ್ಷ ರು. ಸಂಬಳ ಪಡೆಯುತ್ತಿದ್ದ ಸಂಸದರು ಇನ್ನು 1.24 ಲಕ್ಷ ರು. ಮಾಸಿಕ ವೇತನ ಪಡೆಯಲಿದ್ದಾರೆ. 2023ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗಿರುವ ಈ ನಿರ್ಧಾರದ ಪ್ರಕಾರ, ಸಂಸದರ ಮಾಸಿಕ ಸಂಬಳ 1 ಲಕ್ಷ ರೂ. ನಿಂದ 1.24 ಲಕ್ಷ ರೂ. ಗೆ ಏರಿಕೆಯಾಗಿದೆ. ಇದು 2023ರ ಏ.1ರಿಂದಲೇಪೂರ್ವಾನ್ವಯವಾಗಿದೆ. ಈ ಹಿಂದೆ 2018ರಲ್ಲಿ ವೇತನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.
ಯಾರ ವೇತನ ಎಷ್ಟು ಹೆಚ್ಚಳ? (ಮಾಸಿಕ) |
||
ಯಾರಿಗೆ? |
ಈವರೆಗೆ |
ಪರಿಷ್ಕೃತ |
ಸಂಸದರು | 1ಲಕ್ಷ ರೂ. | 1.24 ಲಕ್ಷ ರೂ. |
ಮಾಸಿಕ ಕ್ಷೇತ್ರ ಭತ್ಯೆ | 70,000 ರೂ. | 87,000 ರೂ. |
ದಿನಭತ್ಯೆ | 2,000 ರೂ. | 2,500 ರೂ. |
ಕಚೇರಿ ಖರ್ಚು | 60 ಸಾವಿರ ರೂ. | 75 ಸಾವಿರ ರೂ. |
ಫರ್ನಿಚರ್ (1 ವರ್ಷಕ್ಕೆ) | 1ಲಕ್ಷ ರೂ. | 1.25 ರೂ. |
ಮಾಜಿ ಸಂಸದರು | 25,000 ರೂ. | 31,000 ರೂ. |
ಯಾರಿಗೆ ಎಷ್ಟೆಷ್ಟು ಹೆಚ್ಚು?
1 ಲಕ್ಷ ರೂ. ಇದ್ದ ಸಂಸದರ ಸಂಬಳ 1.24 ಲಕ್ಷಕ್ಕೆ ಹೆಚ್ಚಳವಾಗಿದೆ.ದಿನಭತ್ಯೆ 2,000 ರೂ.ನಿಂದ 2,500 ರು.ಗೆ ಏರಲಿದೆ. ಮಾಸಿಕ ಕ್ಷೇತ್ರ ಭತ್ಯೆ 70 ಸಾವಿರ ರೂ.ನಿಂದ87 ಸಾವಿರ ರೂ. ಗೆ, ಕಚೇರಿ ವೆಚ್ಚವನ್ನು 60 ಸಾವಿರರು.ನಿಂದ 75 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಕಚೇರಿ ಖರ್ಚಿನಲ್ಲಿ 50 ಸಾವಿರ ರೂ. ನೀಡಿ ಕಂಪ್ಯೂಟರ್ ಆಪರೇಟರ್ ನೇಮಿಸಿಕೊಳ್ಳ ಬೇಕು. ಬಾಕಿ 25 ಸಾವಿರ ರೂ.ಗಳನ್ನು ಕಚೇರಿ ನಿರ್ವಹಣೆಗೆ ನೀಡಬೇಕು. 5 ವರ್ಷ ಅವಧಿಯಲ್ಲಿ ಸಂಸದರು ಇನ್ನು 1 ಲಕ್ಷ ರೂ. ಬದಲು 1.25 ಲಕ್ಷ ರೂ. ಮೊತ್ತದ ಪೀಠೋ ಪಕರಣ ಖರೀದಿಸಬಹುದು. ಮಾಜಿ ಸಂಸದರ ಪಿಂಚಣಿ ಮಾಸಿಕ 25,000ದಿಂದ 31,000ಕ್ಕೆಹೆಚ್ಚಳವಾಗಿದೆ.5 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದವರ ಹೆಚ್ಚುವರಿ ಪಿಂಚಣಿಯನ್ನು ತಿಂಗಳಿಗೆ 2,000 ರೂ.ನಿಂದ 2,500 ರೂ.ಗೆ ಏರಿಸಲಾಗಿದೆ.