ಹೆತ್ತಮ್ಮನ ಜೊತೆ ಹೋಗಲು ಮಗಳು ನಿರಾಕರಿಸಿದ್ದೇಕೆ..?

ತಾಯಿ, ಮಗಳ ಮಧ್ಯೆ ಮತ್ತೊಬ್ಬ ಮಹಿಳೆ ಎಂಟ್ರಿ..!

Untitled design 2025 11 08T193905.627

ಮೈಸೂರು: ಮೈಸೂರಿನ ಓಂ ಶ್ರೀ ಸಾಯಿ ಟ್ರಸ್ಟ್ ಮುಂದೆ ನಡೆದ ಮಹಾ ಹೈಡ್ರಾಮಾ ಸಂಚಲನ ಮೂಡಿಸಿದೆ. ತಾಯಿ ಮತ್ತು ಮಗಳ ನಡುವೆ ಮೂರನೇ ಮಹಿಳೆ ಎಂಟ್ರಿ ಕೊಟ್ಟು ರಂಪಾಟ ಸೃಷ್ಟಿಸಿದ್ದಾಳೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಧಾಮಣಿ ಎಂಬ ಮಹಿಳೆ ತನ್ನ ಮಗಳನ್ನು ನರ್ಸಿಂಗ್ ಓದಿಸಲು ಡಾ. ರಾಣಿಪ್ರಭಾ ಅವರಿಗೆ ಸೇರಿದ ಟ್ರಸ್ಟ್‌ನಲ್ಲಿ ಬಿಟ್ಟಿದ್ದರು. ಆದರೆ ಇಂದು ಮಗಳನ್ನು ನೋಡಲು ಬಂದಾಗ ಟ್ರಸ್ಟ್ ಮಾಲಕಿ ರಾಣಿಪ್ರಭಾ ಮಗಳನ್ನು ಮಾತನಾಡಿಸಲು ಬಿಟಿಲ್ಲ, ಇದ್ದಕ್ಕೆ ತಾಯಿ ಸಿಟ್ಟುಗೊಂಡಳು. ಇದರಿಂದ ಟ್ರಸ್ಟ್ ಎದುರು ತಳ್ಳಾಟ-ನೂಕಾಟ, ಗಲಾಟೆ ನಡೆದು ಪೊಲೀಸ್ ಸ್ಟೇಷನ್‌ಗೆ ವರೆಗೂ ವಿಷಯ ಹೋಯಿತು.

ರಾಧಾಮಣಿ ಮಗಳು ನರ್ಸಿಂಗ್ ಓದುತ್ತಿದ್ದಾಳೆ ಎಂದು ಟ್ರಸ್ಟ್‌ನಲ್ಲಿ ಬಿಟ್ಟಿದ್ದರು. ನಾಲ್ಕೈದು ತಿಂಗಳ ಹಿಂದೆ ಮಗಳು ಮೊಬೈಲ್‌ಗೆ ಆಡಿಯೋ ಕಳಿಸಿ, “ಇಲ್ಲಿ ತುಂಬಾ ಟಾರ್ಚರ್ ಕೊಡ್ತಿದ್ದಾರೆ, ಆಗ್ತಿಲ್ಲ ಇರೋಕೆ” ಎಂದು ಹೇಳಿದ್ದಳು. ಈ ಆಡಿಯೋ ಕೇಳಿ ತಾಯಿ ಮಗಳನ್ನು ವಾಪಸ್ ಕರೆದೊಯ್ದಿದ್ದರು. ಆದರೆ ಇಂದು ಮತ್ತೆ ಮಗಳನ್ನು ನೋಡಲು ಬಂದಾಗ ರಾಣಿಪ್ರಭಾ ಮಗಳು ಮೇಜರ್ ಆಗಿದ್ದಾಳೆ, ನನ್ನ ಜೊತೆಯೇ ಇರಲು ಬಯಸುತ್ತಾಳೆ ಎಂದು ಹೇಳಿ ಮಾತನಾಡಿಸಲು ಬಿಡಲಿಲ್ಲ. ತಾಯಿ ನನ್ನ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾಳೆ, ಬ್ರೈನ್ ವಾಶ್ ಮಾಡಿದ್ದಾಳೆ ಎಂದು ಆರೋಪಿಸಿದಳು.

ಟ್ರಸ್ಟ್ ಎದುರು ತಾಯಿ ಮತ್ತು ಕುಟುಂಬ ಸದಸ್ಯರು ಸಿಟ್ಟುಗೊಂಡು ಪ್ರತಿಭಟಿಸಿದರು. ರಾಣಿಪ್ರಭಾ ಮಗಳನ್ನು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದಾಗ ತಳ್ಳಾಟ-ನೂಕಾಟ ಆರಂಭವಾಯಿತು. ಸಾಧ್ಯವಾಗದೇ ಇದ್ದಾಗ ರಾಧಾಮಣಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದಳು. ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ರಾಣಿಪ್ರಭಾಗೆ ಕರೆ ಮಾಡಿ ಕರೆಸಿಕೊಂಡರು. ಯುವತಿಯೊಂದಿಗೆ ಠಾಣೆಗೆ ಬಂದ ರಾಣಿಪ್ರಭಾ ಹುಡುಗಿ ಮೇಜರ್ ಆಗಿದ್ದಾಳೆ, ನನ್ನ ಜೊತೆಯೇ ಇರಲು ಬಯಸುತ್ತಾಳೆ ಎಂದು ರಿಟನ್ ಹೇಳಿಕೆ ನೀಡಿ ಯುವತಿಯನ್ನು ಕರೆದೊಯ್ದಳು.

ಈ ದೃಶ್ಯ ಕಂಡು ತಾಯಿ ರಾಧಾಮಣಿ ಮತ್ತು ಕುಟುಂಬ ಸದಸ್ಯರು ಸಿಟ್ಟಿಗೆದ್ದರು. ನನ್ನ ಮಗಳನ್ನು ಮಾತನಾಡಿಸಲೂ ಬಿಡುತ್ತಿಲ್ಲ, ಬಲವಂತವಾಗಿ ಇಟ್ಟುಕೊಂಡಿದ್ದಾಳೆ. ಏನಾದರೂ ಪ್ರಾಣಾಪಾಯ ಆದಲ್ಲಿ ರಾಣಿಪ್ರಭಾ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಯವಿಟ್ಟು ನನ್ನ ಮಗಳನ್ನು ನನ್ನೊಟ್ಟಿಗೆ ಕಳುಹಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದರೆ ಯುವತಿ ತಾನೇ ನಾನು ರಾಣಿಪ್ರಭಾ ಜೊತೆಯೇ ಇರಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ, ತಾಯಿ ಮಗಳನ್ನು ಟ್ರಸ್ಟ್‌ಗೆ ಬಿಟ್ಟಿದ್ದೇಕೆ ? ಯುವತಿ ತಾಯಿಯ ಜೊತೆ ಹೋಗಲು ನಿರಾಕರಿಸಿದ್ದೇಕೆ ? ರಾಣಿಪ್ರಭಾ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾಳೆಯೇ ? ಅಥವಾ ತಾಯಿ ಮಗಳ ಮೇಲೆ ಬಲವಂತ ಮಾಡುತ್ತಿದ್ದಾಳೆಯೇ? ಯುವತಿಗೆ ಬಲವಂತ ಮದುವೆ ಮಾಡಿಸಲು ತಾಯಿ ಹೊರಟಿದ್ದಾಳೆಯೇ ? ಈ ಎಲ್ಲ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿವೆ. ಗ್ಯಾರಂಟಿ ನ್ಯೂಸ್‌ನಲ್ಲಿ ಯುವತಿ ತಾಯಿಗೆ ಕಳುಹಿಸಿದ ಆಡಿಯೋ ವೈರಲ್ ಆಗಿದ್ದು, ಟಾರ್ಚರ್ ಆಗ್ತಿದೆ ಎಂಬ ಮಾತುಗಳು ಆತಂಕ ಮೂಡಿಸಿವೆ.

ಪೊಲೀಸರು ಈ ಕೇಸ್‌ನಲ್ಲಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕುವೆಂಪುನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿ ಮೇಜರ್ ಆಗಿದ್ದರೂ, ಬ್ರೈನ್ ವಾಶ್ ಆರೋಪಗಳು ಗಂಭೀರವಾಗಿವೆ. ಟ್ರಸ್ಟ್ ಮಾಲೀಕರಾದ ರಾಣಿಪ್ರಭಾ ವಿರುದ್ಧ ಮಾನಸಿಕ ಒತ್ತಡ, ಬಲವಂತ ಇರಿಸುವಿಕೆ ಆರೋಪಗಳು ಬಂದಿವೆ. ತಾಯಿ ರಾಧಾಮಣಿ ನನ್ನ ಮಗಳು ಗೊತ್ತಿಲ್ಲದಂತೆ ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Exit mobile version