ಕಾಂಗ್ರೆಸ್ ಸರ್ಕಾರ ಇನ್ನು ಕೇವಲ 2 ವರ್ಷ, ಇನ್ಮೇಲೆ ಹತ್ತು ವರ್ಷ ನಮ್ಮದೇ ಹವಾ!: ಆರ್. ಅಶೋಕ್

Untitled design 2025 09 10t140914.334

ಮಂಡ್ಯ: ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದ ಘಟನೆ ನಡೆದಿತ್ತು. ಈ ಘಟನೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. “ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬರೀ ಜಾತಿ-ಜಾತಿ ಎಂದು ಮಾತನಾಡುತ್ತಾರೆ. ಇವರ ಆಡಳಿತದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗಿವೆ,” ಎಂದು ಅವರು ಟೀಕಿಸಿದ್ದಾರೆ.

ಮದ್ದೂರಿನಲ್ಲಿ ಇಂದು ನಡೆದ ಬೃಹತ್ ಗಣೇಶ ಶೋಭಾಯಾತ್ರೆಯಲ್ಲಿ ಆರ್‌ ಅಶೋಕ್‌ ಮಾತನಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಘಟನೆ ನಡೆದಿತ್ತು. ಈ ಘಟನೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.

“ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬರೀ ಜಾತಿ-ಜಾತಿ ಎಂದು ಮಾತನಾಡುತ್ತಾರೆ. ಇವರ ಆಡಳಿತದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗಿವೆ,” ಎಂದು ಅವರು ಟೀಕಿಸಿದ್ದಾರೆ. “ನಾವೇನು ಗಣೇಶನ ಹಬ್ಬವನ್ನು ದಿನಾಲೂ ಮಾಡುತ್ತಿದ್ದೇವೆಯೇ? ಒಂದು ದಿನ ಡಿಜೆ ಹಾಕಿದರೆ ತಪ್ಪೇನು? ಸಾರ್ವಜನಿಕ ರಸ್ತೆ ಯಾರ ಆಸ್ತಿಯೂ ಅಲ್ಲ, ತೆರಿಗೆದಾರರ ಹಕ್ಕಿನ ಭಾಗವಾಗಿದೆ,” ಎಂದು ಆರ್. ಅಶೋಕ್‌ ಕಿಡಿಕಾರಿದ್ದಾರೆ.

“ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ಕೇವಲ ಎರಡು ವರ್ಷ. ಇನ್ಮೇಲೆ ಹತ್ತು ವರ್ಷ ನಮ್ಮದೇ ಹವಾ! ನಿನ್ನೆಯಷ್ಟೇ ಎಚ್‌ಡಿಕೆ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ,” ಎಂದು ಘೋಷಿಸಿದರು. “ನಾವು ಘಜ್ನಿ, ಬಾಬರ್ ದಾಳಿಗಳನ್ನು ನೋಡಿದ್ದೇವೆ. ಇನ್ಮೇಲೆ ಏನಿದ್ದರೂ ಹಿಂದೂಗಳದ್ದೇ ದರ್ಬಾರ್! ಸಿದ್ದರಾಮಯ್ಯ ಬೇಕಾದರೆ ಟೋಪಿ ಹಾಕಿಕೊಂಡು ಓಡಾಡಲಿ, ಆದರೆ ಮಂಡ್ಯದ ಜನರಿಗೆ ಟೋಪಿ ಹಾಕಲು ಬರಬಾರದು,” ಎಂದು ಎಚ್ಚರಿಕೆ ನೀಡಿದರು. ಧರ್ಮಸ್ಥಳ, ಚಾಮುಂಡೇಶ್ವರಿ, ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದಗಳನ್ನು ಉಲ್ಲೇಖಿಸಿ, “ಇಂತಹ ಘಟನೆಗಳಿಗೆ ನಾವು ಇನ್ಮೇಲೆ ಪರವಾನಗಿ ಕೊಡುವುದಿಲ್ಲ,” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

Exit mobile version