ಇರಾನ್-ಇಸ್ರೇಲ್-ಅಮೆರಿಕಾ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೊಟೇಲ್‌ಗಳು ಪರದಾಡುತ್ತಿದ್ದು, ಗೃಹಬಳಕೆ ಸಿಲಿಂಡರ್‌ಗಳೂ ಸುಲಭವಾಗಿ ಸಿಗುತ್ತಿಲ್ಲ. ಇದರಿಂದಾಗಿ ಜನರು ಇಂಡಕ್ಷನ್ ಸ್ಟೌವ್‌ಗಳತ್ತ ತಿರುಗುತ್ತಿದ್ದಾರೆ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಮಾರಾಟ 5 ರಿಂದ 10 ಪಟ್ಟು ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಂಡಕ್ಷನ್ ಸ್ಟೌವ್ ಖರೀದಿ ಮತ್ತು ಬಳಕೆಯ ಸುರಕ್ಷತಾ ಸಲಹೆಗಳನ್ನು ಹಂಚಿಕೊಂಡಿದೆ. ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುವ ಮುನ್ನ ಈ ಅಂಶಗಳನ್ನು ಖಚಿತಪಡಿಸಿಕೊಳ್ಳಿ.
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಈ ಅಂಶಗಳು ನೆನಪಿನಲ್ಲಿರಲಿ
ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ#Bescom #InductionStove #ElectricitySafety #SafetyAwareness pic.twitter.com/k3z5oWyLVJ
— Namma BESCOM | ನಮ್ಮ ಬೆಸ್ಕಾಂ (@NammaBESCOM) April 2, 2026
ಇಂಡಕ್ಷನ್ ಸ್ಟೌವ್ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು :
- ISI ಮಾರ್ಕ್ ಹೊಂದಿರುವ ಮತ್ತು 3 ಸ್ಟಾರ್ ಅಥವಾ ಹೆಚ್ಚಿನ ಎನರ್ಜಿ ಎಫಿಷಿಯನ್ಸಿ ರೇಟಿಂಗ್ ಇರುವ ಸ್ಟೌವ್ ಆಯ್ಕೆ ಮಾಡಿ.
- ಆಟೋಮ್ಯಾಟಿಕ್ ಆಫ್, ಚೈಲ್ಡ್ ಲಾಕ್ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳು ಇರುವುದನ್ನು ಪರಿಶೀಲಿಸಿ.
- 15A ಅಥವಾ ಹೆಚ್ಚಿನ ಲೋಡ್ ಸಾಕೆಟ್ ಅಳವಡಿಸಿ. ಪ್ರತ್ಯೇಕ ಸಾಕೆಟ್ ಬಳಸಿ.
- ಮನೆಯ ವೈರಿಂಗ್ ದೋಷಪೂರಿತವಾಗಿದ್ದಲ್ಲಿ ಅಥವಾ ಸರಿಯಾದ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ ಇಂಡಕ್ಷನ್ ಸ್ಟೌವ್ ಬಳಸಬೇಡಿ.
- 3-ಪಿನ್ ಪ್ಲಗ್ ಇರುವ ಸ್ಟೌವ್ಗಳನ್ನೇ ಖರೀದಿಸಿ.
ಇಂಡಕ್ಷನ್ ಕುಕ್‌ವೇರ್ (ಪಾತ್ರೆಗಳು) ಆಯ್ಕೆ ಹೇಗೆ?
ಇಂಡಕ್ಷನ್ ಸ್ಟೌವ್‌ಗೆ ಮ್ಯಾಗ್ನೆಟ್ ಅಂಟುವ ಪಾತ್ರೆಗಳು ಮಾತ್ರ ಸೂಕ್ತ. ಕಾಸ್ಟ್ ಐರನ್, ಎನಾಮಲ್ ಕಾಸ್ಟ್ ಐರನ್ ಅಥವಾ ಮ್ಯಾಗ್ನೆಟಿಕ್ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಆಯ್ಕೆ ಮಾಡಿ.
- ಪವರ್ ರೇಟಿಂಗ್: 1200W ರಿಂದ 2000W ಅಥವಾ ಹೆಚ್ಚಿನ ವ್ಯಾಟೇಜ್ ಇರುವ ಸ್ಟೌವ್ ಆಹಾರವನ್ನು ವೇಗವಾಗಿ ಬೇಯಿಸುತ್ತದೆ.
- ಪ್ರಿಸೆಟ್ ಆಯ್ಕೆಗಳು: ಬಾಯ್ಲಿಂಗ್, ಫ್ರೈಯಿಂಗ್, ಕರಿ, ಅಕ್ಕಿ, ಹಾಲು ಮುಂತಾದ ಆಟೋಮ್ಯಾಟಿಕ್ ಮೋಡ್ಗಳು ಇರುವುದು ಉತ್ತಮ.
- ಸುರಕ್ಷತಾ ವೈಶಿಷ್ಟ್ಯಗಳು: ಆಟೋ ಶಟ್ಆಫ್, ಓವರ್ಹೀಟ್ ಪ್ರೊಟೆಕ್ಷನ್, ಪ್ಯಾನ್ ಡಿಟೆಕ್ಷನ್ ಮತ್ತು ಚೈಲ್ಡ್ ಲಾಕ್ ಖಚಿತಪಡಿಸಿಕೊಳ್ಳಿ.
ಬಳಕೆಯ ಸುರಕ್ಷತಾ ಸಲಹೆಗಳು
- ಸ್ಟೌವ್ ಅನ್ನು ಸ್ಥಿರ ಮತ್ತು ಫ್ಲ್ಯಾಟ್ ಸರ್ಫೇಸ್ ಮೇಲೆ ಇರಿಸಿ.
- ಅಡುಗೆ ಪ್ರದೇಶವನ್ನು ಯಾವಾಗಲೂ ಒಣಗಿರಿಸಿ.
- ಎಣ್ಣೆ ಅಥವಾ ಫ್ಯಾಟ್ ಬಿಸಿ ಮಾಡುವಾಗ ಸ್ಟೌವ್ ಅನ್ನು ಅನ್ಅಟೆಂಡೆಡ್ ಬಿಡಬೇಡಿ.
- ಬಳಕೆಯ ನಂತರ ಪ್ಲಗ್ ಅನ್ನು ತೆಗೆಯಿರಿ.
- ವಿದ್ಯುತ್ ಸಂಬಂಧಿ ಯಾವುದೇ ಅವಘಡ ಸಂಭವಿಸಿದಲ್ಲಿ ತಕ್ಷಣ ಬೆಸ್ಕಾಂ 24×7 ಹೆಲ್ಪ್ಲೈನ್ 1912ಗೆ ಕರೆ ಮಾಡಿ.
ಗ್ಯಾಸ್ ಕೊರತೆಯ ಹಿನ್ನೆಲೆಯಲ್ಲಿ ಇಂಡಕ್ಷನ್ ಸ್ಟೌವ್ ಉತ್ತಮ ಪರ್ಯಾಯವಾಗಿದೆ. ಆದರೆ ಸುರಕ್ಷತೆಯನ್ನು ಕಡೆಗಣಿಸಬಾರದು. ISI ಮಾರ್ಕ್, ಎನರ್ಜಿ ಎಫಿಷಿಯಂಟ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳುಳ್ಳ ಸ್ಟೌವ್ ಖರೀದಿಸಿ. ಸರಿಯಾದ ವೈರಿಂಗ್ ಮತ್ತು ಅರ್ಥಿಂಗ್ ಇಲ್ಲದಿದ್ದರೆ ಬಳಸಬೇಡಿ. ಇದು ನಿಮ್ಮ ಮನೆಯ ಭದ್ರತೆಗೆ ಮುಖ್ಯವಾಗಿದೆ.
