ಕರ್ನಾಟಕ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ಆರೋಪದ ಮೇಲೆ ಏಕಕಾಲಕ್ಕೆ 8 ಅಧಿಕಾರಿಗಳ 42 ಸ್ಥಳಗಳಲ್ಲಿ ದಾಳಿ ನಡೆಸಿ 35.65 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ 24.05 ಕೋಟಿ ಮೌಲ್ಯದ ಸ್ಥಿರ ಆಸ್ತಿ (ನಿವೇಶನಗಳು, ಮನೆಗಳು, ಜಮೀನು) ಮತ್ತು 11.59 ಕೋಟಿ ಮೌಲ್ಯದ ಚರ ಆಸ್ತಿ (ನಗದು, ಚಿನ್ನಾಭರಣ, ವಾಹನಗಳು, ಠೇವಣಿ, ಇತರೆ) ಪತ್ತೆಯಾಗಿದೆ. ದಾಳಿಯ ವೇಳೆ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳು ಸಿಕ್ಕಿವೆ.
ಜಪ್ತಿಯಾದ ಆಸ್ತಿಯ ವಿವರಗಳು ಮತ್ತು ಅಧಿಕಾರಿಗಳು :
- ಶಶಿಧರ್ ಆರ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘ, ಬೆಂಗಳೂರು :
- ದಾಳಿ: 5 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 4.25 ಕೋಟಿ (4 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು)
- ಚರ ಆಸ್ತಿ: 90.59 ಲಕ್ಷ (1.35 ಲಕ್ಷ ನಗದು, 29.74 ಲಕ್ಷ ಚಿನ್ನಾಭರಣ, 42.22 ಲಕ್ಷ ವಾಹನ, 17.25 ಲಕ್ಷ FD)
- ಅಸಮತೋಲನ ಆಸ್ತಿ: 3.43 ಕೋಟಿ
- ಹೆಚ್ ಸಿ ಇಂದ್ರೇಶ್ ಸಹ ಪ್ರಾಧ್ಯಾಪಕ, ಪಶು ವೈದ್ಯಕೀಯ ಕಾಲೇಜು, ಹೆಬ್ಬಾಳ, ಬೆಂಗಳೂರು :
- ದಾಳಿ: 6 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 2.20 ಕೋಟಿ (10 ನಿವೇಶನ, 2 ವಾಸದ ಮನೆ)
- ಚರ ಆಸ್ತಿ: 32.1 ಲಕ್ಷ (1.25 ಲಕ್ಷ ನಗದು, 11.95 ಲಕ್ಷ ಚಿನ್ನಾಭರಣ, 18.90 ಲಕ್ಷ ವಾಹನ)
- ಅಸಮತೋಲನ ಆಸ್ತಿ: 1.88 ಕೋಟಿ
- ವಸಂತ್ ವಲ್ಲಪ್ಪ ನಾಯಕ್ ಕೇಶಿಪ್ ಚೀಫ್ ಇಂಜಿನಿಯರ್ :
- ದಾಳಿ: 10 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 5.65 ಕೋಟಿ (4 ನಿವೇಶನ, 7 ವಾಸದ ಮನೆ, 22 ಎಕರೆ 20 ಗುಂಟೆ ಜಮೀನು)
- ಚರ ಆಸ್ತಿ: 74.74 ಲಕ್ಷ (75 ಸಾವಿರ ನಗದು, 12.25 ಲಕ್ಷ ಚಿನ್ನಾಭರಣ, 34.25 ಲಕ್ಷ ವಾಹನಗಳು, 27.49 ಲಕ್ಷ FD)
- ಅಸಮತೋಲನ ಆಸ್ತಿ: 4.41 ಕೋಟಿ
- ಸತೀಶ್ ಸಹಾಯಕ ಕಾರ್ಯಪಾಲಕ, ಲೋಕೋಪಯೋಗಿ ಇಲಾಖೆ, ಮಂಡ್ಯ :
- ದಾಳಿ: 4 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 2.19 ಕೋಟಿ (3 ನಿವೇಶನ, 2 ವಾಸದ ಮನೆ, 6 ಎಕರೆ ಜಮೀನು)
- ಚರ ಆಸ್ತಿ: 2.26 ಕೋಟಿ (6.7 ಲಕ್ಷ ನಗದು, 20 ಲಕ್ಷ ಚಿನ್ನಾಭರಣ, 23 ಲಕ್ಷ ವಾಹನಗಳು, 1.77 ಕೋಟಿ ಠೇವಣಿ ಮತ್ತು ವಸ್ತುಗಳು)
- ಅಸಮತೋಲನ ಆಸ್ತಿ: 3.01 ಕೋಟಿ
- ಎನ್ ಕೆ ಸುರಕೋಡ್ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಶಿರಹಟ್ಟಿ, ಗದಗ :
- ದಾಳಿ: 6 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 1.38 ಕೋಟಿ (6 ನಿವೇಶನ, 1 ವಾಸದ ಮನೆ, 29 ಎಕರೆ ಜಮೀನು)
- ಚರ ಆಸ್ತಿ: 73.56 ಲಕ್ಷ (89 ಸಾವಿರ ನಗದು, 25.25 ಲಕ್ಷ ಚಿನ್ನಾಭರಣ, 31.40 ಲಕ್ಷ ವಾಹನಗಳು, 16 ಲಕ್ಷ ಇತರ ವಸ್ತುಗಳು)
- ಅಸಮತೋಲನ ಆಸ್ತಿ: 1.82 ಕೋಟಿ
- ಆಸಿಫ್ ಇಕ್ಬಾಲ್ ನೀರು ಮತ್ತು ಒಳಚರಂಡಿ ಮಂಡಳಿ, ಮೈಸೂರು :
- ದಾಳಿ: 4 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 5.80 ಕೋಟಿ (5 ನಿವೇಶನ, 7 ವಾಸದ ಮನೆ, 38 ಗುಂಟೆ ಜಮೀನು)
- ಚರ ಆಸ್ತಿ: 3 ಕೋಟಿ (2.78 ಲಕ್ಷ ಚಿನ್ನಾಭರಣ, 22.50 ಲಕ್ಷ ವಾಹನ)
- ಅಸಮತೋಲನ ಆಸ್ತಿ: 6.89 ಕೋಟಿ
- ಪ್ರಕಾಶ್ ಈರಪ್ಪ ಕಿರಿಯ ಅಭಿಯಂತರು, ಇಂಡಿ, ವಿಜಯಪುರ :
- ದಾಳಿ: 4 ಸ್ಥಳಗಳಲ್ಲಿ
- ಸ್ಥಿರ ಆಸ್ತಿ: 1.45 ಕೋಟಿ (2 ವಾಸದ ಮನೆ, 1 ಶಾಲಾ ಕಟ್ಟಡ)
- ಚರ ಆಸ್ತಿ: 3.15 ಕೋಟಿ (29.97 ಲಕ್ಷ ಚಿನ್ನಾಭರಣ, 2.64 ಕೋಟಿ ವಾಹನಗಳು, 30 ಲಕ್ಷ ವಸ್ತುಗಳು)
- ಅಸಮತೋಲನ ಆಸ್ತಿ: 4.60 ಕೋಟಿ
- ವೀರೇಶ್ ರುದ್ರಯ್ಯ ಹಿರೇಮಠ್ ಇಲೆಕ್ಟ್ರಿಕ್ ಇನ್ಸ್‌ಪೆಕ್ಟರ್, ಇಂಧನ ಇಲಾಖೆ, ಯಾದಗಿರಿ :
- ದಾಳಿ : 3 ಸ್ಥಳಗಳಲ್ಲಿ
- ಸ್ಥಿರ ಆಸ್ತಿ : 1.09 ಕೋಟಿ (5 ನಿವೇಶನ, 2 ವಾಸದ ಮನೆ, 8 ಎಕರೆ 34 ಗುಂಟೆ ಜಮೀನು)
- ಚರ ಆಸ್ತಿ : 44.24 ಲಕ್ಷ (39 ಸಾವಿರ ನಗದು, 14.77 ಲಕ್ಷ ಚಿನ್ನಾಭರಣ, 20.16 ಲಕ್ಷ ವಾಹನಗಳು, 9.90 ಲಕ್ಷ ವಸ್ತುಗಳು)
- ಅಸಮತೋಲನ ಆಸ್ತಿ : 1.54 ಕೋಟಿ
ಲೋಕಾಯುಕ್ತರು ಈ ದಾಳಿಗಳನ್ನು ಭ್ರಷ್ಟಾಚಾರದ ಆರೋಪದ ಮೇಲೆ ನಡೆಸಿದ್ದು, ಜಪ್ತಿಯಾದ ಆಸ್ತಿಗಳು ಅಧಿಕಾರಿಗಳ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಾಗಿರುವುದು ದೃಢಪಟ್ಟಿದೆ. ತನಿಖೆ ಮುಂದುವರೆದಿದ್ದು, ಇನ್ನಷ್ಟು ಬೆಳವಣಿಗೆಗಳು ನಿರೀಕ್ಷಿತವಾಗಿವೆ.





