ಲೋಕಾಯುಕ್ತ ದಾಳಿ: 12 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದೆಷ್ಟು? ಇಲ್ಲಿದೆ ಸಂಪೂರ್ಣ ಲಿಸ್ಟ್ !

Free (8)

ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸ್‌ರ ದಿಢೀರ್ ದಾಳಿಯು ರಾಜ್ಯಾದ್ಯಂತ ಭಾರೀ ಆತಂಕವನ್ನು ಹರಡಿದೆ. ಮಂಗಳವಾರ (ಅಕ್ಟೋಬರ್ 14, 2025) ನಡೆದ ಈ ದಾಳಿಯು ತಡರಾತ್ರಿಗೆ ಮುಕ್ತಾಯಗೊಂಡಿದ್ದು, 12 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ರೇಡ್‌ನಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ-ಬೆಳ್ಳಿ, ಜಮೀನು, ಮನೆ ಮತ್ತು ಇತರ ಆಸ್ತಿಗಳು ಪತ್ತೆಯಾಗಿವೆ. ಬೆಂಗಳೂರು ಸೇರಿದಂತೆ 48 ಸ್ಥಳಗಳಲ್ಲಿ ನಡೆದ ಈ ಶೋಧನಾ ಕಾರ್ಯದಿಂದ ಸುಮಾರು ₹38 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳು ವಶವಾಗಿವೆ. ಈ ದಾಳಿಯು ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರ್ಕಾರದ ಬಿಗಿ ನಿಲುವನ್ನು ತೋರಿಸಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್‌ರು ಅನುಪಾತಹೀನ ಆಸ್ತಿ ಸಂಬಂಧಿಸಿದ ದೂರುಗಳ ಆಧಾರದ ಮೇಲೆ 12 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೀದರ್, ಉಡುಪಿ, ಬಾಗಲಕೋಟೆ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದಿದ್ದು, 48 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದೆ. ದಾಳಿಯಲ್ಲಿ ನಗದು, ಚಿನ್ನಾಭರಣಗಳು, ವಾಹನಗಳು, ಜಮೀನುಗಳು, ಮನೆಗಳು ಮತ್ತು ಆಸ್ತಿ ದಾಖಲೆಗಳು ವಶವಾಗಿವೆ.

1. ಮಂಜುನಾಥ. ಜಿ. ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು

2. ವಿ. ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು

3. ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ. ಬೆಂಗಳೂರು

4. ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ
5. ಜಗದೀಶ್ ನಾಯ್ಕ. ಕೆ. ಹೆಚ್. ಸಹಾಯಕ ಅಭಿಯಂತರರು. ಕೆ.ಆರ್.ಐ.ಡಿ.ಎಲ್. ದಾವಣಗೆರೆ.
6. ಬಿ. ಎಸ್. ನಡುವಿನ ಮನೆ, ಕಿರಿಯ ಸಹಾಯಕ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ,ದಾವಣಗೆರೆ
7. ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲ್ಲೂಕು ಪಂಚಾಯಿತಿ, ಹಾವೇರಿ
8. ಅಶೋಕ್ ಶಂಕರಪ್ಪ ಅರಳೇಶ್ವ‌ರ್, ರಾಜಸ್ವ ನಿರೀಕ್ಷಕರು,, ರಾಣಿಬೆನ್ನೂರು ತಾಲ್ಲೂಕು, ಹಾವೇರಿ
9. ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್‌, ಬೀದ‌ರ್ ಜಿಲ್ಲೆ
10. ಲಕ್ಷ್ಮಿನಾರಾಯಣ.ಪಿ. ನಾಯಕ್, ಆರ್.ಟಿ.ಓ ಉಡುಪಿ
11. ಚೇತನ್, ಕಿರಿಯ ಅಭಿಯಂತರರು ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ.
12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಇಲಾಖೆ, ಹಾಸನ

 

Exit mobile version