• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನನ್ನನ್ನು ಕೆಣಕಬೇಡಿ, ಡಿಕೆಶಿಗೆ ನೇರ ಎಚ್ಚರಿಕೆ ಕೊಟ್ಟ ಹೆಚ್.ಡಿ. ಕುಮಾರಸ್ವಾಮಿ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 5, 2025 - 5:52 pm
in Flash News, ಕರ್ನಾಟಕ
0 0
0
Film 2025 04 05t174951.915
  • ಇಂದಿನಿಂದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಯುದ್ಧ ಆರಂಭಿಸಿದ್ದೇನೆ ಎಂದ ಕೇಂದ್ರ ಸಚಿವರು
  • ವಿಧಾನಸೌಧ 3ನೇ ಮಹಡಿಯಲ್ಲಿ ಘಜ್ನಿ ಮಹಮದ್, ಘೋರಿ ಮಹಮದ್, ಮಲ್ಲಿಕ್ ಖಫೂರ್‌‌‌ಗಳೇ ಸರ್ಕಾರ ನಡೆಸುತ್ತಿದ್ದಾರೆ.
  • ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಕಬ್ಬಿಣದ ಅದಿರು ಕದ್ದ ಆರೋಪ ಮಾಡಿದ HDK
  • ಬಿಬಿಎಂಪಿ ಕಸದ ಟೆಂಡರ್ ವಿಚಾರಕ್ಕೆ ಸಿಎಂ, ಡಿಸಿಎಂಗೆ HDK ಖಡಕ್ ತಿರುಗೇಟು
  • ರಾಜಧಾನಿ ಜನರ ಸುಲಿಗೆ, ಬೆಂಗಳೂರು ನಗರದಲ್ಲಿ ಜೆಡಿಎಸ್ ನಿರಂತರ ಹೋರಾಟ
  • ನಿಮ್ಮ ಕಸ ಕ್ಲೀನ್ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ

ನನ್ನ ಹತ್ರ ಟನ್ ಗಟ್ಟಲೆದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ ನನ್ನನ್ನು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು.

ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗೆ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಅವರು ಎಚ್ಚರಿಕೆ ನೀಡಿದರು.

RelatedPosts

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ: ಯಾವುದರ ದರ ಎಷ್ಟಿದೆ?

ಶಾಲಾ ಆವರಣದಲ್ಲಿ ಬೀದಿ ನಾಯಿ ಹಾವಳಿಗೆ ಫುಲ್‌ಸ್ಟಾಪ್: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

IND vs SA: ಕೊಹ್ಲಿ ಶತಕ, ರಾಹುಲ್‌ ಅರ್ಧಶತಕ: ಟೀಂ ಇಂಡಿಯಾಗೆ ರೋಚಕ ಜಯ

ADVERTISEMENT
ADVERTISEMENT

ಈ ಸರ್ಕಾರಕ್ಕೆ ನಾನು ನೇರವಾಗಿ ಹೇಳುತ್ತಿದ್ದೇನೆ. ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಅಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಅವರು ಗುಡುಗಿದರು.

2003- 2004ರಲ್ಲಿ ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ. ನಾನು ಸುಮ್ಮನಿರಲು ಸಾಧ್ಯ ಇಲ್ಲ ಅಲ್ಲವೇ? ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ. ಈ ಕ್ಷಣದಿಂದ ಈ ಸರ್ಕಾರದ ವಿರುದ್ಧ ಸಮರ ಆರಂಭ ಮಾಡಿದ್ದೇನೆ. ಅದಕ್ಕೆ ಈ ಮಾಧ್ಯಮಗೋಷ್ಠಿ ಕರೆದಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸಚಿವರು.

ಪಾಪ..ಅವರಿಗೆ ಏನೂ ಗೊತ್ತಿಲ್ಲ. ನನಗೆ ಕನಕನಪುರ ಅಷ್ಟೇ ಸಾಕು. ಬಳ್ಳಾರಿಗೆ ಯಾಕೆ ಹೋಗಲಿ ಎಂದು ಹೇಳಿದ್ದಾರೆ. ಸಂಬಂಧ ಇಲ್ಲ ಎಂದಾದರೆ ಅದಿರು ಮಣ್ಣಿನ ಬಗ್ಗೆ ಖನಿಜ ಇಲಾಖೆಗೆ ಹಾಗೂ ಖನಿಜ ಸಂಪನ್ಮೂಲ ಇಲಾಖೆಗೆ ಪತ್ರಗಳನ್ನು ನಿರಂತರವಾಗಿ ಯಾಕೆ ಬರೆದರು? ಅಧಿಕಾರಿಗಳ ಮೇಲೆ ಯಾಕೆ ಒತ್ತಡ ಹಾಕಿದರು? ರಸ್ತೆಗೆ ಮಣ್ಣು ಬೇಕು ಎಂದು ಬಳ್ಳಾರಿಯಿಂದ ಅದಿರು ಮಣ್ಣು ತರಿಸಿಕೊಂಡರು. ಅತ್ಯಂತ ಗುಣಮಟ್ಟದ ಅದಿರು ಇದ್ದ ಮಣ್ಣನ್ನು ಏನು ಮಾಡಿದರು? ಎಂದು ಪ್ರಶ್ನೆ ಮಾಡಿದರು.

ಉಪ ಮುಖ್ಯಮಂತ್ರಿ ಎನ್ನುವ ವ್ಯಕ್ತಿ ಎಷ್ಟು ಕಂಪನಿಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಏಳು ಕಂಪನಿಗಳ ಹೆಸರಿನಲ್ಲಿ ಅವರು ವ್ಯವಹಾರ ನಡೆಸಿ ಪತ್ರ ವ್ಯವಹಾರವನ್ನೂ ನಡೆಸಿದ್ದಾರೆ. ಎಲ್ಲಾ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನೂ ಕಸ ಎತ್ತುತ್ತಿದ್ದೆ, ಇಲ್ಲ ಎಂದವರು ಯಾರು?

ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ. ಯಾವುದೇ ಕಾರಣಕ್ಕೂ ಸರ್ಕಾರಿ ಗುತ್ತಿಗೆ ತೆಗೆದುಕೊಳ್ಳ ಕೂಡದು ಎಂದು ಅವರು ಹೇಳಿದ್ದರು ಎಂಬ ಸಂಗತಿಯನ್ನು ಅವರು ಸುದ್ದಿಗಾರರ ಗಮನಕ್ಕೆ ತಂದರು.

ಕಸ ಗುತ್ತಿಗೆಯಲ್ಲಿಯೂ ಕೋಟಿ ಕೋಟಿ ಹೊಡೆಯಲು ಹೊರಟಿದ್ದರು!

ಡಿಕೆಶಿ ಮೇಲೆ ಮತ್ತೂ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು, ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು ₹6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ ₹15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ ₹6500 ಮೊತ್ತವನ್ನು ₹3, 000ಕ್ಕೆ ಕಡಿಮೆ ಮಾಡಿದರು.
ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಒಂದೊಂದೇ ಅಂಶವನ್ನು ಬಿಡಿಸಿಟ್ಟರು.

ನಾನು ಆ ಹಗರಣದ ಬಗ್ಗೆ ಮಾತನಾಡಿದ್ದರಿಂದಲೇ ಬೆಂಗಳೂರಿನಲ್ಲಿ ಕಸ ಎತ್ತಲು ಮಹಾನಾಯಕ ಒಬ್ಬರು ಅಡ್ಡಿ ಮಾಡಿದರು ಎಂದು ಉಪ ಮುಖ್ಯಮಂತ್ರಿ ಆರೋಪ ಮಾಡಿದ್ದಾರೆ. ಆ ಮಹಾನಾಯಕ ಬೇರೆ ಯಾರೂ ಅಲ್ಲ, ನಾನೇ. ಅವತ್ತು ನಾನು ಆ ವಿಷಯ ಬಹಿರಂಗಪಡಿಸಿದೆ ಹೋಗಿದ್ದರೆ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿತ್ತು. ನಾನು ಹೇಳಿದ್ದು ಜನರ ಹಣ ಕೊಳ್ಳೆ ಹೊಡೆಯಬೇಡಿ ಎಂದೇ ಹೊರತು ಕಸ ಎತ್ತಬೇಡಿ ಎಂದಲ್ಲ ಎಂದು ಅವರು ಕುಟುಕಿದರು.

ನಿಮ್ಮ ಕಸ ಕ್ಲೀನ್ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ!!

ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ. ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ. ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಸರ್ಕಾರದಲ್ಲಿ ಘಜ್ನಿ, ಘೋರಿ ಮಹಮ್ಮದ್ ಇದ್ದಾರೆ!!

ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಮಾಜಿ ಪ್ರಧಾನಿ ಮಗ, ಮಾಜಿ ಸಿಎಂ, 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ?

40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರನ್ನು ಕರೆದುಕೊಂಡು ಬಂದಿದ್ದರು. ರಾಜಕೀಯ ಸೇಡು ಸಾಧಿಸುತ್ತಿದ್ದರೆ. ಎಷ್ಟು ಬೇಕೋ ಅಷ್ಟು ಸಾಧಿಸಲಿ, ಅದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ. ಬಂದು ತೋರಿಸಲಿ. ನಾನು ಅನುಭವದಲ್ಲಿ.ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ. ನನ್ನ ವ್ಯವಹಾರ ಕಾನೂನುದ್ಧವಾಗಿ ಆಗಿದೆ. ದಾಖಲೆಗಳ ಮುಖಾಂತರ ಕೆಲವು ತೀರ್ಮಾನಗಳು ಆಗಿವೆ. ಈ ವಿಚಾರದಲ್ಲಿ ಕೋರ್ಟ್ ಅನ್ನೂ ಮಿಸ್ ಲೀಡ್ ಮಾಡುವ ಕೆಲಸ ಆಗಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ತಪ್ಪು ಮಾಡಿದ್ದಿದ್ದರೆ, ಇಷ್ಟು ವರ್ಷಗಳ ಕಾಲ ಬೇಕಿತ್ತಾ? ಕೇವಲ ನನ್ನ ಮೇಲೆ ರಾಜಕೀಯ ಹಗೆತನ ಸಾಧಿಸಲು ಇದನ್ನೆಲ್ಲ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಮುಡಾ ಕೇಸ್ ನಲ್ಲಿ ಎಷ್ಟು ಸ್ಪೀಡ್ ಆಗಿ ತನಿಖೆ ಮಾಡಿದರು. ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿದ್ದಾಗ ಸಾಯಿವೆಂಕಟೇಶ್ವರ ಕೇಸ್ ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದೀನಾ? ಯಾರಾದ್ರೂ ಅಧಿಕಾರಿಗೆ ಕರೆ ಮಾಡಿ ಬೆದರಿಸಿದ್ದೀನಾ? ಇದಕ್ಕೆಲ್ಲ ಉತ್ತರ ಕೊಡದೇ ನಾನು ಬಿಡುವುದಿಲ್ಲ ಎಂದು ಅವರು ಗುಡುಗಿದರು.

ಗುತ್ತಿಗೆ ಮೀಸಲು, ಶ್ವೇತಪತ್ರ ಹೊರಡಿಸಿ

ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಜನರಿಗೆ ಮಾಹಿತಿ. ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಡಲು ಹೊರಟಿದ್ದೀರಲ್ಲ. ಕ್ರೆಡೆಲ್, ನಿರ್ಮಿತಿ ಕೇಂದ್ರ ಎಲ್ಲಾ ಯಾಕೆ ಇಟ್ಟುಕೊಂಡಿದ್ದೀರಿ? ಜನಗಳಿಗೆ ಈ ಮಟ್ಟಕ್ಕೆ ಟೋಪಿ ಹಾಕಲು ಹೊರಟಿದ್ದೀರಾ? ಇಲ್ಲಾ ಸಾಬರನ್ನು ಉದ್ದಾರ ಮಾಡಲು ಹೊರಟಿದ್ದೀರಾ? ಈ ವಿಚಾರದಲ್ಲಿ ಬಿಜೆಪಿ ಸ್ನೇಹಿತರಿಗೆ ಕಾಂಗ್ರೆಸ್ ನ ಟೆಕ್ನಿಕಲ್ ತಪ್ಪುಗಳನ್ನು ಹುಡುಕಿ ಎಂದು ಸಚಿವರು ಸಲಹೆ ಕೊಟ್ಟರು.

ಬೆಂಗಳೂರಿನ ಎಲ್ಲಾ ವಾರ್ಡುಗಳಲ್ಲಿ ಜನಾಂದೋಲನ ಮಾಡುತ್ತೇವೆ

ಬೆಂಗಳೂರಿನ 198 ವಾರ್ಡ್ ಗಳಲ್ಲಿಯೂ ನಮಗೆ ಶಕ್ತಿ ಇಲ್ಲ. ಆದರೆ ಇರುವ ಅಲ್ಪ ಸ್ವಲ್ಪ ಕಾರ್ಯಕರ್ತರ ಶಕ್ತಿ ಬಳಸಿಕೊಂಡು ಅವರನ್ನು ಸಂಘಟಿಸಿ ಪಕ್ಷವನ್ನು ಮುನ್ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಅನಾಹುತ, ಮಾಡಬೇಕಾದ ಕೆಲಸಗಳ ಬಗ್ಗೆ ಜನಾಂದೋಲನ ಮಾಡುತ್ತೇವೆ. ಜನಗಳನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಘೋಷಣೆ ಮಾಡಿದರು.

ಪಕ್ಷ ಸಂಘಟನೆ ಮಾಡಬೇಕು ಎನ್ನುವುದು ಬೇರೆ. ರಾಜಧಾನಿಯನ್ನು ಕಾಂಗ್ರೆಸ್ ಸರಕಾರ ಹೇಗೆಲ್ಲ ಸುಲಿಗೆ ಮಾಡುತ್ತಿದೆ ಎಂಬುದನ್ನು ಜನರಿಗೆ ಹೇಳಬೇಕು. ದೇಶದ ಎಲ್ಲಾ ಭಾಗದ ಜನರೂ ನಗರದಲ್ಲಿ ಆಶ್ರಯ ಪಡೆದು ಬದುಕುತ್ತಿದ್ದಾರೆ. ಹೀಗಾಗಿ ಕನ್ನಡ, ಇಂಗ್ಲಿಷ್ ಸೇರಿ ಎಲ್ಲಾ ಭಾಷೆಗಳಲ್ಲಿ ಕರಪತ್ರ ಮುದ್ರಿಸಿ ಜಾಗೃತಿ ಮೂಡಿಸುತ್ತಿವೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್-ಬಿಜೆಪಿ ಹೊಂದಾಣಿಕೆ ಸಮಸ್ಯೆ ಇಲ್ಲ

ಜೆಡಿಎಸ್-ಬಿಜೆಪಿ ಬಿನ್ನಾಭಿಪ್ರಾಯ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಕೊರತೆಯು ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಸುರೇಶ್ ಬಾಬು ಅವರ ಅಭಿಪ್ರಾಯ ಹೇಳಿದ್ದಾರೆ. ನಿಖಿಲ್ ಕೂಡ ಮಾತನಾಡಿದ್ದಾರೆ. ನಾನು ಈ ಬಗ್ಗೆ ಬಿಜೆಪಿ ಎಲ್ಲಾ ನಾಯಕರ ಜತೆ ಮಾತನಾಡುತ್ತೇನೆ. ಅಲ್ಲದೆ, ನಮ್ಮಲ್ಲಿ ವಿಶ್ವಾಸದ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ಉತ್ತಮ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ
ಶಾಸಕರಾದ ನೇಮಿರಾಜ್ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಜವರಾಯ ಗೌಡ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಹೆಚ್. ಎಂ. ರಮೇಶ್ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ನಗರ ಘಟದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾವ್ ಮುಂತಾದವರು ಉಪಸ್ಥಿತರಿದ್ದರು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 01T100950.601

ಡಿಸೆಂಬರ್ ಮೊದಲ ದಿನ ಗೋಲ್ಡ್‌ ಪ್ರಿಯರಿಗೆ ಗುಡ್‌‌ನ್ಯೂಸ್‌: ಚಿನ್ನದ ಬೆಲೆ ಇಳಿಕೆ

by ಶಾಲಿನಿ ಕೆ. ಡಿ
December 1, 2025 - 10:14 am
0

Untitled design 2025 12 01T092319.695

BBK 12: ಬಿಗ್ ಬಾಸ್‌ನಲ್ಲಿ ರ‍್ಯಾಂಕಿಂಗ್‌ ಟಾಸ್ಕ್‌: ಗಿಲ್ಲಿಗೆ ‘ನೀನು ಸೋಮಾರಿ’ ಎಂದ ರಕ್ಷಿತಾ-ರಘು

by ಶಾಲಿನಿ ಕೆ. ಡಿ
December 1, 2025 - 9:33 am
0

Untitled design 2025 12 01T084341.345

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
December 1, 2025 - 8:54 am
0

Untitled design 2025 12 01T083023.780

ಗ್ರಾಹಕರಿಗೆ ಗುಡ್ ನ್ಯೂಸ್: LPG ವಾಣಿಜ್ಯ ಸಿಲಿಂಡರ್ ಬೆಲೆ ಡಿಸೆಂಬರ್ 1ರಿಂದ ಇಳಿಕೆ

by ಶಾಲಿನಿ ಕೆ. ಡಿ
December 1, 2025 - 8:36 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 30T220302.257
    IND vs SA: ಕೊಹ್ಲಿ ಶತಕ, ರಾಹುಲ್‌ ಅರ್ಧಶತಕ: ಟೀಂ ಇಂಡಿಯಾಗೆ ರೋಚಕ ಜಯ
    November 30, 2025 | 0
  • Untitled design 2025 11 30T185632.357
    ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ; 11 ಮಂದಿ ಸ್ಥಳದಲ್ಲೇ ಸಾವು
    November 30, 2025 | 0
  • Untitled design 2025 11 30T173439.789
    ಭೀಕರ ರಸ್ತೆ ಅಪಘಾತ: ಟೆಂಪೋ ಪಲ್ಟಿಯಾಗಿ ಐವರು ಕಾರ್ಮಿಕರ ದುರ್ಮರಣ
    November 30, 2025 | 0
  • Untitled design 2025 11 30T140355.455
    ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!
    November 30, 2025 | 0
  • Untitled design 2025 11 30T124307.889
    ದೈವ ನರ್ತನವನ್ನು ‘ಫೀಮೇಲ್ ಘೋಸ್ಟ್’ ಎಂದ ರಣವೀರ್‌ ಸಿಂಗ್‌ ವಿರುದ್ದ ಭಾರಿ ಆಕ್ರೋಶ
    November 30, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version