ಕಮಿಷನ್ ಆರೋಪಗಳಿಗೆ ದಾಖಲೆ ನೀಡಿದರೆ ಖಂಡಿತ ತನಿಖೆ: ಸಚಿವ ಕೃಷ್ಣ ಬೈರೇಗೌಡ

Untitled design 2025 04 10t180229.771

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ನೀಡಿದರೆ ಸರ್ಕಾರ ತನಿಖೆಗೆ ಬದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಮಧ್ಯವರ್ತಿಗಳು ಈ ಆರೋಪಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನೂ ಸ್ಪಷ್ಟವಾಗಿ ತಿಳಿಸಬೇಕು. ಯಾರ ವಿರುದ್ಧ ಯಾವ ರೀತಿಯ ಆರೋಪ ಇದೆ, ಎಷ್ಟು ಕಮಿಷನ್ ಕೇಳಲಾಗಿದೆ ಎಂಬ ವಿವರಗಳೊಂದಿಗೆ ದಾಖಲೆಗಳು ನಮ್ಮ ಬಳಿ ಬಂದರೆ, ಅದನ್ನು ಪರಿಶೀಲಿಸಿ ತನಿಖೆಗೆ ಮುಂದಾಗುವುದು ಖಂಡಿತ” ಎಂದರು.

“ಸರ್ಕಾರ ಯಾವುದೇ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಆರೋಪಗಳು ರಾಜಕೀಯ ಪ್ರೇರಿತವಾಗಿರಬಹುದು. ಆದರೆ ದಾಖಲೆ ಇದ್ದರೆ ನಾವು ಬಿಡಲ್ಲ. ನಾವು ಜನತೆ ಮುಂದೆ ಸ್ವಚ್ಛ ಆಡಳಿತ ನೀಡಲು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಇತ್ತೀಚೆಗೆ ಗುತ್ತಿಗೆದಾರರು ಸರ್ಕಾರದ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕಮಿಷನ್ ಬೇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿವೆ.

ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಬೈರೇಗೌಡ ಅವರ ಈ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಈ ಬಗ್ಗೆ ಬದ್ಧವಾಗಿದೆ ಎಂಬ ಸಂದೇಶವನ್ನು ಅವರು ನೀಡಿದ್ದು, ದಾಖಲೆಗಳೊಂದಿಗೆ ನೀಡಲು ಗುತ್ತಿಗೆದಾರರಿಗೆ ಆಹ್ವಾನ ನೀಡಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version