ಪ್ರೇಯಸಿಗೆ 9 ಬಾರಿ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

Untitled design (21)

ಬೆಳಗಾವಿ: ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊರ್ವ ಒಂಭತ್ತು ಬಾರಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದಾನೆ. ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ಒಂದೇ ಊರಿನವರಾದ ರೇಷ್ಮಾ ತಿರವಿರ (29) ಮತ್ತು ಆನಂದ ಸುತಾರ್ (31)  ಅಕ್ರಮ ಸಂಬಂಧಕ್ಕೆ ಬಲಿಯಾದ ದುರ್ದೈವಿಗಳು. 

 ಘಟನೆಯ ಹಿನ್ನೆಲೆ

ರೇಷ್ಮಾ ತಿರವಿರ ಮತ್ತು ಆನಂದ ಸುತಾರ್ ಒಂದೇ ಊರಿನವರಾಗಿದ್ದರು. ಇಬ್ಬರಿಗೂ ಮದುವೆಯಾಗಿದ್ದು, ರೇಷ್ಮಾಗೆ ಇಬ್ಬರು ಮಕ್ಕಳಿದ್ದರೆ, ಆನಂದಗೆ ಮೂರು ಮಕ್ಕಳಿದ್ದರು. ಇಬ್ಬರ ನಡುವೆ ಹಲವು ವರ್ಷಗಳಿಂದ ಸ್ನೇಹವಿತ್ತು, ಆದರೆ ಮದುವೆಯ ಬಳಿಕ ಈ ಸ್ನೇಹವು ಅನೈತಿಕ ಸಂಬಂಧವಾಗಿ ಪರಿವರ್ತನೆಗೊಂಡಿತ್ತು. ಕಳೆದ ಮೂರು ವರ್ಷಗಳಿಂದ ಇಬ್ಬರು ಈ ಸಂಬಂಧವನ್ನು ಮುಂದುವರೆಸಿಕೊಂಡು ಬಂದಿದ್ದರು. ಆನಂದ ಸುತಾರ್ ಫರ್ನಿಚರ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದನು. ರೇಷ್ಮಾ ಗೃಹಿಣಿಯಾಗಿದ್ದಳು.

ಕಳೆದ ತಿಂಗಳು, ರೇಷ್ಮಾ ಅವರ ಪತಿಗೆ ಈ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಇಬ್ಬರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ರೇಷ್ಮಾ ಪತಿ ನಂದಗಡ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆನಂದಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಘಟನೆಯ ಬಳಿಕ ರೇಷ್ಮಾ ಆನಂದನಿಂದ ದೂರವಿರಲು ತೀರ್ಮಾನಿಸಿದ್ದಳು.

ರೇಷ್ಮಾ ತನ್ನಿಂದ ದೂರವಾದದ್ದನ್ನು ಸಹಿಸಲಾಗದ ಆನಂದ, ಕೋಪಗೊಂಡು ರೇಷ್ಮಾ ಅವರ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿದನು. ರೇಷ್ಮಾ ಅವರ ಪುತ್ರಿಯ ಎದುರೇ ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿ ಆಕೆಯನ್ನು ಕೊಲೆಗೈದನು. ಈ ಘಟನೆಯಿಂದ ಭಯಗೊಂಡ ಆನಂದ, ಅದೇ ಚಾಕುವಿನಿಂದ ತನ್ನನ್ನು ತಾನೇ ಚುಚ್ಚಿಕೊಂಡನು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನನ್ನು ಸ್ಥಳೀಯರು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆನಂದ ಕೂಡ ಸಾವನ್ನಪ್ಪಿದನು.

Exit mobile version