ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ, ಅದನ್ನು ಆಗ್ರಹಿಸಿ ಧಾರವಾಡದಿಂದ 14ದಿನಗಳ ಕಾಲ ಕಾಲ್ನಡಿಗೆಯಲ್ಲಿ ಬಂದು ಫ್ರೀಡಂ ಪಾರ್ಕ್‌ನಲ್ಲಿ ಕೆಪಿಎಸ್ಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಬೇರೆ ಬೇರೆ ಜಿಲ್ಲೆಯಿಂದ ನೂರಾರು ವಿದ್ಯಾರ್ಥಿಗಳು ಬಂದು ಪ್ರತಿಭಟನೆಯಲ್ಲಿ ಪಾಲ್ಗೋಂಡರು.
384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಅನ್ಯಾಯವಾಗಿದ್ದು, ಸುಮಾರು 50ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಲೋಪವೆಸಗಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗಿದೆ. ಡಿಸೆಂಬರ್ 29ರಂದು ನಡೆದ ಮರುಪರೀಕ್ಷೆಯಲ್ಲೂ ಅದಕ್ಕೂ ಹೆಚ್ಚಿನ ತಪ್ಪು ಪುನರಾವರ್ತನೆಯಾಗಿದೆ. ಅಧಿಕಾರಿಗಳು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ.
ಈ ಕುರಿತು ಈಗಾಗಲೇ ಸಾಕಷ್ಟು ಭಾರಿ ಹೋರಾಟ ನಡೆಸಿದ್ದೇವೆ ಆದ್ರೆ ಸರ್ಕಾರ ಇದಕ್ಕೆ ಸಂಬಂಧ ಪಟ್ಟ ಹಾಗೇ ಕ್ರಮ ತೆಗೆದುಕೊಂಡಿಲ್ಲ. ಇದ್ರಿಂದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತೀದೆ ಹಾಗಾಗಿ, ಈ ಕೂಡಲೇ ನಿಗಧಿಯಾಗಿರುವ ಮುಖ್ಯಪರೀಕ್ಷೆಯ ಪ್ರಕ್ರಿಯೆಗಳನ್ನು ರದ್ದುಪಡಿಸಿ, ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಮತ್ತೊಮ್ಮೆ ಮರುಪರೀಕ್ಷೆಗೆ ಆದೇಶಿಸಬೇಕು ಎಂದು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲಿ ಬಂದು ಕೆಪಿಎಸ್‌ಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಇನ್ನೂ ಧಾರವಾಡದಿಂದ ಕಾಲ್ನಡಿಗೆಯಲ್ಲಿ ಪ್ರೀಡಂ ಪಾರ್ಕ್‌ಗೆ ಬರ್ತೀದ್ದ ವಿದ್ಯಾರ್ಥಿಗಳನ್ನ ರಾಜಾಜಿನಗರದಲ್ಲಿ ತಡೆದು, ಪೊಲೀಸ್‌ನವರು ಅರೆಷ್ಟ್ ಮಾಡಿ ಸುಮಾರು 3 ಗಂಟೆಗಳ ಕಾಲ ಸ್ಟೇಷನ್‌ನಲ್ಲಿ ಇರಿಸಿದ್ದರು, ತದನಂತರ ಪ್ರೀಡಂ ಪಾರ್ಕ್‌ಗೆ ಬಂದ ವಿದ್ಯಾರ್ಥಿಗಳು ಕೆಪಿಎಸ್‌ಸಿ ವಿರುದ್ಧ ದಿಕ್ಕಾರ ಕೂಗಿ ಹೋರಾಟ ನಡೆಸಿದರು. ಹಾಗೂ ಗ್ಯಾರಂಟಿ ನ್ಯೂಸ್‌ನೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ನೇರವಾಗಿ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮಾಡಿ, ನಮಗೆ ನ್ಯಾಯ ಕೊಡಿಸಿ, ಇಲ್ಲಾ ನಿಮ್ಮ ಅಧಿಕಾರಕ್ಕೆ ರಾಜೀನಾಮೆ ಕೊಡಿ, ನಾವೇ ರಾಜಕೀಯಕ್ಕೆ ಬರ್ತೀನಿ ಎಂದು ಹೇಳಿದರು.
ಹಲವಾರು ಬಾರಿ ಪ್ರತಿಭಟನೆ ಕೈಗೊಂಡು ಪ್ರತಿಫಲ ಸಿಗದ, ಕೆಪಿಎಸ್‌ಸಿ ಅಭ್ಯರ್ಥಿಗಳು ಇಂದು ಸಿಡಿದೆದ್ದು ನೇರವಾಗಿ ಸರ್ಕಾರಕ್ಕೆ ಮತ್ತು ಸಿಎಂ ಗೆ ಸವಾಲು ಹಾಕಿದ್ಧಾರೆ. ಇನ್ನೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸೊದಕ್ಕೆ ಸರ್ಕಾರ ಮುಂದಾಗುತ್ತಾ ಎಂದು ನೋಡಬೇಕಿದೆ.