ಗ್ಯಾರಂಟಿ ನ್ಯೂಸ್‌ ಕಚೇರಿ ಉದ್ಘಾಟಿಸಿದ ಕಿಚ್ಚ ಸುದೀಪ್

Untitled design 2025 04 02t094215.458

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ವೆಬ್ ಸೈಟ್ ಮೂಲಕವೂ ಓದುಗರನ್ನು ಗ್ಯಾರಂಟಿ ನ್ಯೂಸ್ ತಲುಪಿತ್ತು. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.

ನಗರದ ಮಲ್ಲೇಶ್ವರಂನಲ್ಲಿರೋ ಗ್ಯಾರಂಟಿ ನ್ಯೂಸ್ ಇನ್ಮುಂದೆ ಸ್ಯಾಟಲೈಟ್ ಮೂಲಕ ಫೇಕ್ ಸುದ್ದಿಗಳನ್ನು ಮರೆ ಮಾಚಿ ನೈಜ ಸುದ್ದಿಗಳನ್ನು ನಿಮ್ಮ ಮನೆಗೆ ನೇರವಾಗಿ ತಲುಪಿಸೋ ಕೆಲಸವನ್ನ ಮಾಡುತ್ತೆ.. ಬಾದ್ ಶಾ ಕಿಚ್ಚ ಸುದೀಪ್ ಗ್ಯಾರಂಟಿ ನ್ಯೂಸ್ ಚಾನೆಲ್‌ನ ಉದ್ಘಾಟನೆಗೆ ಟೇಪ್ ಕತ್ತರಿಸಿ, ಕಚೇರಿಯ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ವೀಕ್ಷಿಸಿದ್ರು. ಬಳಿಕ ಕೇಕ್ ಕತ್ತರಿಸಿ ಸಿಬ್ಬಂದಿ ಜೊತೆ ಕೆಲ ಕಾಲ ಕೂತು ಮಾತಾಡಿ ಗ್ಯಾರಂಟಿ ನ್ಯೂಸ್ ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು..

Exit mobile version