ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ KERC, ತೀವ್ರ ವಿರೋಧದ ನಡುವೆಯೂ ವಿದ್ಯುತ್ ದರ ಹೆಚ್ಚಳ!

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) 2025-26ನೇ ಆರ್ಥಿಕ ವರ್ಷಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ ವಿದ್ಯುತ್ ದರ ಏರಿಸಿದ್ದು, ಇದು ಉದ್ಯಮಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಫೆಬ್ರವರಿ 20ರಂದು ನಡೆದ ಸಾರ್ವಜನಿಕ ಚರ್ಚೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೂ, KERC ತನ್ನ ಹಿಂದಿನ ಭರವಸೆಯನ್ನು ಮೀರಿ ದರ ಏರಿಕೆ ಮಾಡಿದೆ. ಈ ನಿರ್ಧಾರದಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ಹೆಚ್ಚಿನ ವೆಚ್ಚ ಎದುರಿಸಬೇಕಾಗಿದೆ.

ದರ ಏರಿಕೆಯ ಹಿನ್ನೆಲೆ KERC ಮಾರ್ಚ್ 3, 2026ರಂದು ತನ್ನ ಆದೇಶ ಹೊರಡಿಸಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ದರ ಕಡಿತಗೊಳಿಸಿ (LT-4A ವರ್ಗದಲ್ಲಿ ₹8.30ರಿಂದ ₹6.57-7.79ಕ್ಕೆ ಇಳಿಕೆ) ಆರ್ಥಿಕ ಅಂತರವನ್ನು ಸರಿದೂಗಿಸಲು ವಾಣಿಜ್ಯ ಮತ್ತು ಕೈಗಾರಿಕಾ ವರ್ಗಗಳಲ್ಲಿ ದರ ಏರಿಸಲಾಗಿದೆ. ಇದರಿಂದ ಸುಮಾರು ₹1,254.88 ಕೋಟಿ ಹೆಚ್ಚುವರಿ ಆದಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ. ದರ ಏರಿಕೆಯೊಂದಿಗೆ 9% ವಿದ್ಯುತ್ ತೆರಿಗೆಯೂ ಹೆಚ್ಚಾಗುತ್ತದೆ.

ವರ್ಗವಾರು ದರ ಏರಿಕೆ ವಿವರ :

ಈ ಏರಿಕೆಯಿಂದ ಕೈಗಾರಿಕಾ ಉತ್ಪಾದನಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದ್ದು, ಉದ್ಯಮಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಸಬೇಕಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಉದ್ಯಮಿಗಳ ಆಕ್ರೋಶ ಮತ್ತು ಪ್ರತಿಕ್ರಿಯೆ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಸಂಘಟನೆಗಳು ಈ ನಿರ್ಧಾರವನ್ನು ಖಂಡಿಸಿದ್ದು, ಆರ್ಥಿಕತೆಗೆ ದೊಡ್ಡ ಆಘಾತ ಎಂದು ಆರೋಪಿಸಿದ್ದಾರೆ. ಫೆಬ್ರವರಿ ಚರ್ಚೆಯಲ್ಲಿ ದರ ಏರಿಕೆ ಮಾಡದಂತೆ ಭರವಸೆ ನೀಡಿದ್ದ KERC ಈಗ ಯು-ಟರ್ನ್ ಹೊಡೆದಿದೆ ಎಂಬ ಆರೋಪಗಳು ಎದ್ದಿವೆ. ಉದ್ಯಮಿಗಳು ಪ್ರತಿಭಟನೆ, ಕಾನೂನು ಕ್ರಮ ಮತ್ತು ಪುನಃ ಪರಿಶೀಲನೆಗೆ ಒತ್ತಾಯಿಸುತ್ತಿದ್ದಾರೆ.

Exit mobile version