ಬೆಂಗಳೂರು, ಏಪ್ರಿಲ್ 15: ರಾಜ್ಯಾದ್ಯಂತ ಲಾರಿ ಮಾಲೀಕರು ಡೀಸೆಲ್ ದರ ಏರಿಕೆ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಾ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕೈ ಹಾಕಿದ್ದಾರೆ. ಈ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭಗೊಂಡಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ತುಮಕೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಲಾರಿ ಮತ್ತು ಟ್ರಕ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮುಷ್ಕರದ ಹಿನ್ನಲೆ
ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಹೆದ್ದಾರಿ ಟೋಲ್ ಶುಲ್ಕದ ವಿರುದ್ಧ, ಗಡಿಗಳಲ್ಲಿನ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸುವಂತೆ, ಎಫ್‌ಸಿ ಫಿಟ್ನೆಸ್ ಶುಲ್ಕ ಇತ್ತೀಚೆಗೆ ಏರಿದ್ದು ಹಿಂಪಡೆಯುವಂತೆ, ಬೆಂಗಳೂರು ನಗರ ಪ್ರವೇಶಕ್ಕೆ ಗೂಡ್ಸ್ ವಾಹನಗಳ ನಿರ್ಬಂಧವನ್ನು ರದ್ದುಗೊಳಿಸುವಂತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರವನ್ನು ಏರ್ಪಡಿಸಲಾಗಿದೆ.
ಬೆಂಗಳೂರಿನಲ್ಲಿ ಸಂಪೂರ್ಣ ಲಾರಿ ಸಂಚಾರ ಸ್ಥಗಿತ
ನಗರದ ಯಶವಂತಪುರ ಟ್ರಕ್ ಟರ್ಮಿನಲ್‌ನಲ್ಲಿ ನೂರಾರು ಲಾರಿಗಳು ಸಾಲು ಸಾಲಾಗಿ ನಿಂತಿದ್ದು, ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿಗಳು ರಸ್ತೆಗಿಳಿಯದೆ ನಿಂತಿವೆ. ನಗರದಲ್ಲಿ ಸರಕು ಸರಬರಾಜಿಗೆ ತೊಂದರೆಯನ್ನುಂಟುಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಕೆಲವೆಡೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯ ಭೀತಿ ಮೂಡಿದೆ.
ಮೈಸೂರಿನ ಪರಿಸ್ಥಿತಿ
ಸಂಸ್ಕೃತಿಕ ನಗರ ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆಯಲ್ಲೂ ನೂರಾರು ಲಾರಿಗಳು ನಿಂತಿದ್ದು, ಸಂಪೂರ್ಣ ಲಾರಿ ಸಂಚಾರ ಬಂದ್ ಆಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಸಹ ನೂರಾರು ಲಾರಿಗಳು ನಿಂತಿದ್ದು, ಬೆಳಗ್ಗಿನಿಂದಲೂ ಯಾವುದೇ ಲಾರಿ ಸಂಚರಿಸಿಲ್ಲ ಎಂದು ಸ್ಥಳೀಯ ಉಸ್ತುವಾರಿಗಳು ತಿಳಿಸಿದ್ದಾರೆ.
ಚಾಲಕರ ತೀವ್ರ ಆಕ್ರೋಶ
ಲಾರಿ ಚಾಲಕರೊಬ್ಬರಾದ ಕುಮಾರ್, “ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಲೆ ಏರಿಕೆಗಳಿಂದ ಲಾರಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಗಿದಂತಾಗಿದೆ ನಮ್ಮ ಸ್ಥಿತಿ. ನಿತ್ಯ ನೂರಾರು ಲಾರಿಗಳು ಓಡುತ್ತಿದ್ದವು, ಆದರೆ ಇಂದು ಒಂದೂ ಲಾರಿ ರಸ್ತೆಗಿಳಿಯುವುದಿಲ್ಲ. ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸುವವರೆಗೆ ಈ ಮುಷ್ಕರ ಮುಂದುವರಿಯಲಿದೆ,” ಎಂದು ತಿಳಿಸಿದರು.
“ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿದೆ, ಆದರೆ ಬಾಡಿಗೆ ಮಾತ್ರ ಏರಿಲ್ಲ. ಲಾರಿ ಮಾಲೀಕರು ಮತ್ತು ಚಾಲಕರ ಕಷ್ಟವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಲ್ಲವೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿದೆ. ನಾವು ದುಡಿದು ಹೊಟ್ಟೆಪಾಡು ಮಾಡಿಕೊಂಡರೆ, ಅವರು ಕಿತ್ತುಕೊಂಡು ಮತ್ತೊಬ್ಬರಿಗೆ ಉಚಿತವಾಗಿ ಕೊಡುತ್ತಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟ್ಯಾಕ್ಸಿ ಚಾಲಕರಿಂದ ಬೆಂಬಲ
ಲಾರಿ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರ ಸಂಘಗಳೂ ಬೆಂಬಲ ನೀಡಿವೆ. ಆದರೆ ಈ ಹಿಂದೆ ಊಹಿಸಿದಂತೆ, ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಎಲ್ಲ ಟ್ಯಾಕ್ಸಿ ಸೇವೆಗಳು, ಓಲಾ, ಉಬರ್, ಏರ್ಪೋರ್ಟ್ ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಲಾರಿ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ದಿನಸಿ ವಸ್ತುಗಳು, ತರಕಾರಿ, ಅಕ್ಕಿ, ಗೋಧಿ, ಹಾಗೂ ಕೈಗಾರಿಕಾ ಸಾಮಾನುಗಳ ಸರಬರಾಜಿನಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಮುಂದಿನ ದಿನ
