ಟ್ರಾಫಿಕ್ ಫೈನ್ ಪಾವತಿಗೆ 50% ರಿಯಾಯಿತಿ: ಒಂದೇ ವಾರದಲ್ಲಿ ಭರ್ಜರಿ ಕಲೆಕ್ಷನ್‌

Untitled design 2025 11 28T102041.354

ಬೆಂಗಳೂರು, ನವೆಂಬರ್ 28: ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ.50 ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ವಾಹನ ಸವಾರರು ಎಚ್ಚೆತ್ತುಕೊಂಡು ದಂಡ ಪಾವತಿ ಮಾಡಲು ಮುಂದಾಗಿದ್ದಾರೆ. ಕೇವಲ ಒಂದೇ ವಾರದಲ್ಲಿ (ನವೆಂಬರ್ 21 ರಿಂದ 27 ರವರೆಗೆ) ರಾಜ್ಯದಾದ್ಯಂತ ₹5.98 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದ್ದು, 2.25 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ.

ಸಾರಿಗೆ ಇಲಾಖೆಯ ಸೂಚನೆಯ ಮೇರೆಗೆ ಸರ್ಕಾರ ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಬಾಕಿ ಇರುವ ಸಂಚಾರ ದಂಡದ ಕೇವಲ ಶೇ.50 ರಷ್ಟು ಮೊತ್ತವನ್ನು ಪಾವತಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಈ ರಿಯಾಯಿತಿಗೆ ಜನರು ಉತ್ತಮ ಸ್ಪಂದನೆ ತೋರಿದ್ದು, ಮೊದಲ ವಾರದಲ್ಲೇ ₹5,98,28,800 ಸಂಗ್ರಹವಾಗಿದೆ. ಇದರೊಂದಿಗೆ 2,25,511 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿವೆ.

ಎಲ್ಲಿ-ಹೇಗೆ ಪಾವತಿಸಬೇಕು ?

ವಾಹನ ಸವಾರರು ಈ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಳ್ಳಲು ಹಲವು ಆಯ್ಕೆಗಳಿವೆ:

ಡಿಸೆಂಬರ್ 12 ರ ನಂತರ ಈ ರಿಯಾಯಿತಿ ಸೌಲಭ್ಯ ಇರುವುದಿಲ್ಲ. ಆ ಬಳಿಕ ಪೂರ್ಣ ದಂಡದ ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ಹೀಗಾಗಿ ಬಾಕಿ ದಂಡ ಇರುವವರು ತಕ್ಷಣವೇ ಈ ಅವಕಾಶ ಬಳಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ಈ ಹಿಂದೆ 2024ರ ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಇದೇ ರೀತಿ ಶೇ.50 ರಿಯಾಯಿತಿ ಘೋಷಿಸಲಾಗಿತ್ತು. ಆಗ ಬೆಂಗಳೂರು ನಗರದಲ್ಲೇ ₹55 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿತ್ತು. ಈ ಬಾರಿ ರಾಜ್ಯದಾದ್ಯಂತ ಒಟ್ಟು ಗುರಿ ₹100 ಕೋಟಿಗೂ ಹೆಚ್ಚು ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.

ಯಾಕೆ ಈ ರಿಯಾಯಿತಿ ?

ಈ ರಿಯಾಯಿತಿಯಿಂದ ಲಕ್ಷಾಂತರ ವಾಹನ ಸವಾರರು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಇದನ್ನು ದುರುಪಯೋಗಪಡಿಸಿಕೊಂಡು ಮತ್ತೆ ನಿಯಮ ಉಲ್ಲಂಘಿಸಬಾರದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ 14 ದಿನಗಳ ಕಾಲ ಮಾತ್ರ ಈ ಸುವರ್ಣಾವಕಾಶ ಇದೆ. ಬಾಕಿ ದಂಡ ಇದ್ದವರು ತಪ್ಪದೇ ಡಿಸೆಂಬರ್ 12ರೊಳಗೆ ಶೇ.50 ರಿಯಾಯಿತಿ ಬಳಸಿಕೊಳ್ಳಿ.

Exit mobile version