MES ವಿರುದ್ಧ ಸಿಡಿದೆದ್ದ ಕನ್ನಡಿಗರು: ವಾಟಾಳ್‌ ನಾಗರಾಜ್‌‌ ಬಣದಿಂದ ಮಾ.22 ರಂದು ಕರ್ನಾಟಕ ಬಂದ್

ವಾಟಾಳ್‌ ನಾಗರಾಜ್‌‌ ಬಣದಿಂದ ಮಾ.22 ರಂದು ಕರ್ನಾಟಕ ಬಂದ್

Untitled Design 2025 02 28t161030.705

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಕಂಡೆಕ್ಟರ್‌ ಮೇಲಿನ ಹಲ್ಲೆ ಘಟನೆ ನಂತರ ಮರಾಠಿ ಪುಂಡರ ವಿರುದ್ಧ ಕನ್ನಡಿಗರು ಸಿದಿದೆದ್ದಿದ್ದಾರೆ. ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 3ರಿಂದ 22ರ ವರೆಗೆ ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಾರ್ಚ್ 22ರಂದು “ಅಖಂಡ ಕರ್ನಾಟಕ ಬಂದ್” ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಸಾರಿಗೆ, ವ್ಯಾಪಾರ, ಮತ್ತು ಸಾರ್ವಜನಿಕ ಸಂಸ್ಥೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಪ್ರತಿಭಟನೆಯ ವೇಳಾಪಟ್ಟಿ
  1. ಮಾರ್ಚ್ 3: ರಾಜಭವನಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆ.
  2. ಮಾರ್ಚ್ 7: ಬೆಳಗಾವಿಯಲ್ಲಿ ಕನ್ನಡಿಗರ ಜನಸಮೂಹ ಮೆರವಣಿಗೆ.
  3. ಮಾರ್ಚ್ 11: ಅತ್ತಿಬೆಲೆ ಗಡಿ ಪ್ರದೇಶದಲ್ಲಿ ಬಂದ್.
  4. ಮಾರ್ಚ್ 16: ಹೊಸಕೋಟೆ ಟೋಲ್‌ಗೇಟ್‌ನಲ್ಲಿ ಮೇಕೆದಾಟು ಯೋಜನೆಗೆ ಒತ್ತಾಯ.
  5. ಮಾರ್ಚ್ 22: ಬೆಂಗಳೂರಿನ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ರಾಜ್ಯವ್ಯಾಪಿ ಬಂದ್ ಮತ್ತು ಪ್ರತಿಭಟನಾ ಮೆರವಣಿಗೆ.

    ಮಾರ್ಚ್ 22ರಂದು ಕರ್ನಾಟಕ ಬಂದ್ ಹೇಗಿರಲಿದೆ?

    • ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್
    • ಹೋಟೆಲ್, ಅಂಗಡಿ-ಮುಂಗಟ್ಟು, ಸಾರಿಗೆ ಸೇವೆಗಳು ಸ್ಥಗಿತ
    • ಬೆಂಗಳೂರು: ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ
Exit mobile version