ರಾಜ್ಯದಲ್ಲಿ ಮಳೆಯ ಅಬ್ಬರ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಆ.17ರವರೆಗೆ ಗುಡುಗು ಸಹಿತ ಭಾರೀ ಮಳೆ!

ರಾಜ್ಯದದ ಹಲವು ಜಿಲ್ಲೆಗಳಲ್ಲಿ ಮುಂದಿನ 6 ದಿನ ಗುಡುಗು ಸಹಿತ ಮಳೆ!

111 (10)

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೆ ಭಾರಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ.

ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಭಾವ ಇನ್ನೂ ಮುಂದುವರಿದಿದ್ದು, ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗಿನವರೆಗೆ ನಿರಂತರ ಮಳೆ ಸುರಿದಿದೆ. ಹವಾಮಾನ ಇಲಾಖೆಯು, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ಮಳೆಯೊಂದಿಗೆ ಗಾಳಿ, ಗುಡುಗು ಮತ್ತು ಮಿಂಚು ಸಾಧ್ಯತೆಯಿದೆ.

ಮಳೆಯಾಗುವ ನಿರೀಕ್ಷಿತ ಜಿಲ್ಲೆಗಳು: ಬೆಂಗಳೂರು ನಗರ, ಚಾಮರಾಜನಗರ, ಗದಗ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಮಗಳೂರು, ವಿಜಯನಗರ.

ಕಳೆದ 24 ಗಂಟೆಗಳಲ್ಲಿ ಮಳೆಯಾಗಿರುವ ಕೆಲವು ಪ್ರದೇಶಗಳು: ಗೌರಿಬಿದನೂರು, ಅಫ್ಝಲ್ಪುರ, ತಾವರಗೇರಾ, ಬರಗೂರು, ಕೆರೂರು, ಕೆಂಭಾವಿ, ಬಿಳಗಿ, ಹುನಗುಂದ, ಚಿಂಚೋಳಿ, ಬೆಳ್ಳಟ್ಟಿ, ಮಂಠಾಳ, ಹೊಸಕೋಟೆ, ಗಂಗಾವತಿ, ಬೆಂಗಳೂರು ನಗರ, ಗಂಗಾಪುರ, ಸಿಂದಗಿ, ಕೂಡಲಸಂಗಮ, ಹರಪನಹಳ್ಳಿ, ದೇವರಹಿಪ್ಪರಗಿ, ತಾಳಿಕೋಟೆ, ನಾಯಕನಹಟ್ಟಿ, ನಾರಾಯಣಪುರ, ಮದ್ದೂರು, ಕಮಲಾಪುರ, ಕಲಬುರಗಿ, ಜಗಳೂರು, ತಿಪಟೂರು, ಸಿದ್ದಾಪುರ, ಶೋರಾಪುರ, ಮಹಾಲಿಂಗಪುರ, ಲೋಕಾಪುರ, ಮುದಗಲ್, ಕೃಷ್ಣರಾಜಪೇಟೆ, ಕಮ್ಮರಡಿ, ಕೆಆರ್ ನಗರ, ಹಿರಿಯೂರು, ಗುಳೇಗೋಡು, ಅಜ್ಜಂಪುರ, ಬಸವನಬಾಗೇವಾಡಿ, ಅಥಣಿ, ಆಲಮಟ್ಟಿ, ವಿಜಯಪುರ, ತರೀಕೆರೆ, ಟಿಜಿ ಹಳ್ಳಿ, ಶಿರಹಟ್ಟಿ, ರಬಕವಿ, ನಾಗಮಂಗಲ, ಮಿಡಿಗೇಶಿ, ಮೈಸೂರು, ಕೋಲಾರ, ಜೇವರ್ಗಿ, ಜಯಪುರ, ಹುಕ್ಕೇರಿ, ಗುಬ್ಬಿ, ಧರ್ಮಸ್ಥಳ, ಚಿತ್ತಾಪುರ, ಚಿಕ್ಕೋಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಭದ್ರಾವತಿ, ಬನವಾಸಿ, ಔರಾದ್.

ಉಷ್ಣಾಂಶದ ವಿವರಗಳು: ಬೆಂಗಳೂರಿನಲ್ಲಿ ಭಾನುವಾರ ಎಚ್ಎಎಲ್ನಲ್ಲಿ ಗರಿಷ್ಠ 28.0°C ಮತ್ತು ಕನಿಷ್ಠ 20.0°C, ನಗರದಲ್ಲಿ ಗರಿಷ್ಠ 27.6°C ಮತ್ತು ಕನಿಷ್ಠ 20.3°C, ಕೆಐಎಎಲ್ನಲ್ಲಿ ಗರಿಷ್ಠ 28.4°C ಮತ್ತು ಕನಿಷ್ಠ 19.9°C, ಜಿಕೆವಿಕೆಯಲ್ಲಿ ಗರಿಷ್ಠ 29.0°C ಮತ್ತು ಕನಿಷ್ಠ 19.2°C ದಾಖಲಾಗಿದೆ. ಇತರ ಪ್ರದೇಶಗಳಲ್ಲಿ ಹೊನ್ನಾವರದಲ್ಲಿ ಗರಿಷ್ಠ 29.6°C ಮತ್ತು ಕನಿಷ್ಠ 24.0°C, ಕಾರವಾರದಲ್ಲಿ ಗರಿಷ್ಠ 31.8°C ಮತ್ತು ಕನಿಷ್ಠ 25.8°C, ಮಂಗಳೂರು ಏರ್ಪೋರ್ಟ್ನಲ್ಲಿ ಗರಿಷ್ಠ 27.4°C ಮತ್ತು ಕನಿಷ್ಠ 23.6°C, ಶಕ್ತಿನಗರದಲ್ಲಿ ಗರಿಷ್ಠ 28.6°C ಮತ್ತು ಕನಿಷ್ಠ 23.8°C.

ಬೆಳಗಾವಿ ಏರ್ಪೋರ್ಟ್‌ನಲ್ಲಿ ಗರಿಷ್ಠ 28.8°C ಮತ್ತು ಕನಿಷ್ಠ 20.8°C, ಬೀದರ್ನಲ್ಲಿ ಗರಿಷ್ಠ 29.2°C ಮತ್ತು ಕನಿಷ್ಠ 21.0°C, ವಿಜಯಪುರದಲ್ಲಿ ಗರಿಷ್ಠ 28.5°C ಮತ್ತು ಕನಿಷ್ಠ 21.1°C, ಧಾರವಾಡದಲ್ಲಿ ಗರಿಷ್ಠ 28.6°C ಮತ್ತು ಕನಿಷ್ಠ 19.8°C, ಗದಗದಲ್ಲಿ ಗರಿಷ್ಠ 29.8°C ಮತ್ತು ಕನಿಷ್ಠ 21.2°C, ಕಲಬುರಗಿಯಲ್ಲಿ ಗರಿಷ್ಠ 30.8°C ಮತ್ತು ಕನಿಷ್ಠ 21.2°C, ಹಾವೇರಿಯಲ್ಲಿ ಗರಿಷ್ಠ 24.0°C ಮತ್ತು ಕನಿಷ್ಠ 21.4°C, ಕೊಪ್ಪಳದಲ್ಲಿ ಗರಿಷ್ಠ 29.2°C ಮತ್ತು ಕನಿಷ್ಠ 22.8°C, ರಾಯಚೂರಿನಲ್ಲಿ ಗರಿಷ್ಠ 30.0°C ಮತ್ತು ಕನಿಷ್ಠ 22.4°C ದಾಖಲಾಗಿದೆ.

ಈ ಮಳೆಯಿಂದಾಗಿ ಕೃಷಿ, ಸಂಚಾರ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ನಾಗರಿಕರು ಮಳೆಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ಪಾಲಿಸಿ, ಅಗತ್ಯವಿದ್ದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ.

Exit mobile version