ಶಂಕಿತನ ಮನೆಯಲ್ಲಿ ಅಸ್ಥಿಪಂಜರಗಳ ರಹಸ್ಯ: ಸರಣಿ ಹಂತಕ ಸೆಬಾಸ್ಟಿಯನ್ ಬಂಧನ!

ಬಾವಿಯಲ್ಲಿ ಸುಟ್ಟ ಮೂಳೆಗಳು ಪತ್ತೆ!

0 (69)

ತಿರುವನಂತಪುರಂ: ಕೇರಳದ ತಿರುವನಂತಪುರಂನ ಪಾಲಿಪುರಂನಲ್ಲಿ ಒಂದು ಮನೆಯಲ್ಲಿ ಅನೇಕ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಈ ಭಯಾನಕ ಪ್ರಕರಣದ ನಡುವೆ 68 ವರ್ಷದ ಸೆಬಾಸ್ಟಿಯನ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಮಹಿಳೆಯರನ್ನು ಮನೆಗೆ ಕರೆತಂದು ಕೊಲೆ ಮಾಡಿರುವುದು ಎಂಬ ಶಂಕೆ ಹಬ್ಬಿದೆ.

ಸೆಬಾಸ್ಟಿಯನ್ ತನ್ನ ಮನೆಗೆ ಹೆಚ್ಚಾಗಿ ಭೇಟಿ ನೀಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಬೇರೆ ಕ್ರಿಮಿನಲ್‌ಗಳು ಮಹಿಳೆಯರನ್ನು ಕೊಂದು ಅಸ್ಥಿಪಂಜರಗಳನ್ನು ತಂದು ಹಾಕಿರಬಹುದು ಎಂದು ಪೊಲೀಸರಿಗೆ ಹೇಳಿದ್ದಾನೆ. ಆದರೆ, ಪೊಲೀಸರು ಮನೆಯನ್ನು ಶೋಧಿಸಿದಾಗ ಭೂಮಿಯಡಿಯಲ್ಲಿ ಮತ್ತು ಹಿಂಬದಿಯ ಬಾವಿಯಲ್ಲಿ ಸುಟ್ಟ ಮೂಳೆಗಳು, ಹಲ್ಲುಗಳು ಮತ್ತು ಅಸ್ಥಿಪಂಜರಗಳು ದೊರಕಿವೆ.

ಸೆಬಾಸ್ಟಿಯನ್ ರಿಯಲ್ ಎಸ್ಟೇಟ್ ಮತ್ತು ಬಟ್ಟೆ ವ್ಯಾಪಾರದಲ್ಲಿ ತೊಡಗಿರುವವನು. ಅವನು ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರನ್ನು ಕೊಂದು, ಅವರ ದೇಹಗಳನ್ನು ನಾಶಪಡಿಸಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಈ ಪ್ರಕರಣವು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Exit mobile version