ಇಂದು ರಾಜ್ಯ ಸರ್ಕಾರದ ವಿರುದ್ಧ ಎನ್‌ಡಿಎ ಮೈತ್ರಿಕೂಟದಿಂದ ಒಗ್ಗಟ್ಟಿನ ಪ್ರತಿಭಟನೆ

ಬಿಜೆಪಿಯಿಂದ ಇಂದು ದಾವಣಗೆರೆಯಲ್ಲಿ ಜನಾಕ್ರೋಶ ಯಾತ್ರೆ

123 (62)

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಇಂದು ಬೆಳಿಗ್ಗೆ 11:30ಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ವತಿಯಿಂದ ತುಮಕೂರಿನ ತುರುವೇಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಲಿದೆ.

ಜೆಡಿಎಸ್ ಕಚೇರಿಯಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಬಿಜೆಪಿ ಕಚೇರಿಯಿಂದ ಮಾಜಿ ಶಾಸಕ ಮಸಾಲ ಜಯರಾಮ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿ, ದೆಬ್ಬೆಘಟ್ಟ ವೃತ್ತದಿಂದ ಬಿರ್ಲಾ ಕಾರ್ನರ್ ಮೂಲಕ ಮೆರವಣಿಗೆ ಹೊರಟು, ಬಾಣಸಂದ್ರ ವೃತ್ತದಲ್ಲಿ ಸಮಾವೇಶ ನಡೆಯಲಿದೆ.

ಪ್ರತಿಭಟನೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ್ ಸೇರಿದಂತೆ ಮೈತ್ರಿಕೂಟದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿಭಟನೆಯ ಬಳಿಕ ಮುಖಂಡರು ತಾಲ್ಲೂಕು ಕಚೇರಿಗೆ ತೆರಳಿ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಬಿಜೆಪಿಯಿಂದ ಇಂದು ದಾವಣಗೆರೆಯಲ್ಲಿ ಜನಾಕ್ರೋಶ ಯಾತ್ರೆ

ದಾವಣಗೆರೆ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಇಂದು ದಾವಣಗೆರೆಯಲ್ಲಿ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ ಆಯೋಜನೆಗೊಂಡಿದೆ. ನಗರದ ಜಯದೇವ ವೃತ್ತದ ಬಳಿ ಬೆಳಿಗ್ಗೆ 11 ಗಂಟೆಗೆ ಈ ಯಾತ್ರೆ ನಡೆಯಲಿದೆ.

ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಶ್ರೀ ರಾಮುಲು, ರೇಣುಕಾಚಾರ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಪ್ಲೆಕ್ಸ್ ಮತ್ತು ಕಟೌಟ್‌ಗಳಿಂದ ಬೆಣ್ಣೆ ನಗರಿ ಸಿಂಗಾರಗೊಂಡಿದೆ.

 

Exit mobile version