20 ಲಕ್ಷ BPL ಕಾರ್ಡ್ ರಾಜ್ಯಾದ್ಯಂತ ಕ್ಯಾನ್ಸಲ್: ಸಚಿವ ಕೆ. ಎಚ್. ಮುನಿಯಪ್ಪ

Untitled design (7)

ರಾಜ್ಯದಾದ್ಯಂತ ಅಕ್ರಮವಾಗಿ ಹಂಚಿಕೆಯಾಗಿರುವ ಬಿಪಿಎಲ್ (BPL) ಕಾರ್ಡ್‌ಗಳನ್ನು ಗುರುತಿಸಿ ರದ್ದುಗೊಳಿಸಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದು, 20 ಲಕ್ಷಕ್ಕೂ ಹೆಚ್ಚು ಅಕ್ರಮ BPL ಕಾರ್ಡ್‌ಗಳನ್ನು ರದ್ದು ಮಾಡಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ವಿಧಾನಸಭೆಯಲ್ಲಿ ಅವರು ಈ ಮಹತ್ವದ ಘೋಷಣೆ ಮಾಡಿದ್ದು, ಎಪಿಎಲ್ (APL) ಕಾರ್ಡ್ ಹೊಂದಿರುವವರು ಅಕ್ರಮವಾಗಿ BPL ಕಾರ್ಡ್ ಪಡೆದಿದ್ದರೆ, ಅವರ ಕಾರ್ಡ್‌ಗಳು ರದ್ದು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

 ಗ್ರಾಮ ಮಟ್ಟದಲ್ಲಿ ತನಿಖೆ:
ಸಚಿವರ ಆದೇಶದಂತೆ, ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ (ಪಂಚಾಯತ್ Development Officer) ಮತ್ತು ವಿಎ (ವಿಲೇಜ್ ಅಕೌಂಟೆಂಟ್) ಅಧಿಕಾರಿಗಳು ನೇರವಾಗಿ ಊರಿಗೆ ಭೇಟಿ ನೀಡಿ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ನಡೆಸಲಿದ್ದಾರೆ. ಅಕ್ರಮ BPL ಕಾರ್ಡ್ ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಕಾರ್ಡ್‌ಗಳನ್ನು ತಕ್ಷಣವೇ ರದ್ದು ಮಾಡಲಾಗುವುದು. ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ADVERTISEMENT
ADVERTISEMENT

ದಕ್ಷಿಣ ಭಾರತದಲ್ಲಿ ಕರ್ನಾಟಕದ ಸ್ಥಾನ:
“ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯ ಬಿಪಿಎಲ್ ಕಾರ್ಡ್‌ಗಳಿವೆ. ಇದರಲ್ಲಿ ಹಲವು ಅಕ್ರಮವಾಗಿವೆ” ಎಂದು ಮುನಿಯಪ್ಪ ಹೇಳಿದರು. ಸರ್ಕಾರದ ಯೋಜನೆಗಳ ಸವಲತ್ತುಗಳು ನಿಜವಾದ ಬಡವರಿಗೆ ಮಾತ್ರ ತಲುಪುವಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:
ಬಿಪಿಎಲ್ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆದಿರುವ ನಾಗರಿಕರು ತಮ್ಮ ಕಾರ್ಡ್‌ಗಳನ್ನು ಸ್ವಯಂಪ್ರೇರಿತವಾಗಿ ಸಲ್ಲಿಸಲು ಸಚಿವರು ಕೋರಿದ್ದಾರೆ. ಹೀಗೆ ಮಾಡದಿದ್ದಲ್ಲಿ, ಕಾನೂನುಬಾಹಿರ ಕ್ರಮಗಳು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

Exit mobile version