ಇಂದಿನಿಂದ ಜನಗಣತಿ ಆರಂಭ: ಏಪ್ರಿಲ್ 15ರೊಳಗೆ ನೀವೇ ನಿಮ್ಮ ದಾಖಲೆಗಳನ್ನ ಅಪ್ಲೋಡ್‌ ಮಾಡಬಹುದು

Untitled design 2026 04 01T120342.107

ಬೆಂಗಳೂರು: ದಶಕದ ಕಾಯುವಿಕೆಯ ನಂತರ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದಿನಿಂದ (ಏಪ್ರಿಲ್ 1, 2026) ಬಹುನಿರೀಕ್ಷಿತ ‘ಜನಗಣತಿ’ (Census) ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಬಾರಿಯ ಗಣತಿಯು ಸಂಪೂರ್ಣ ಡಿಜಿಟಲ್ ರೂಪದಲ್ಲಿದ್ದು, ಸಾರ್ವಜನಿಕರಿಗೆ ತಮ್ಮ ವಿವರಗಳನ್ನು ತಾವೇ ದಾಖಲಿಸಲು ‘ಸ್ವಯಂ ಗಣತಿ’ (Self-Enumeration) ಎಂಬ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ಎರಡು ಹಂತಗಳಲ್ಲಿ ಗಣತಿ ಪ್ರಕ್ರಿಯೆ

ರಾಜ್ಯದಲ್ಲಿ ಜನಗಣತಿಯು ಎರಡು ಮುಖ್ಯ ಹಂತಗಳಲ್ಲಿ ನಡೆಯಲಿದೆ:

  1. ಮೊದಲ ಹಂತ: ಮನೆಗಳ ಪಟ್ಟಿ ತಯಾರಿಕೆ ಮತ್ತು ಮನೆಗಳ ಗಣತಿ (Houselisting)

  2. ಎರಡನೇ ಹಂತ: ವೈಯಕ್ತಿಕ ವಿವರಗಳ ಸಂಗ್ರಹ ಅಥವಾ ಜನ ಗಣತಿ

ಸ್ವಯಂ ಗಣತಿ: ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಅವಕಾಶ

ಜನಗಣತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ವೆಬ್ ಪೋರ್ಟಲ್ ಮೂಲಕ ‘ಸ್ವಯಂ ಗಣತಿ’ಗೆ ಅವಕಾಶ ನೀಡಿದೆ. ಇಂದಿನಿಂದ (ಏಪ್ರಿಲ್ 1) ಏಪ್ರಿಲ್ 15 ರವರೆಗೆ ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಮನೆಯ ವಿವರಗಳನ್ನು ದಾಖಲಿಸಬಹುದು. ಕುಟುಂಬದ ಯಾವುದೇ ಒಬ್ಬ ಜವಾಬ್ದಾರಿಯುತ ಸದಸ್ಯರು ಈ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ವಿವರಗಳನ್ನು ನೀಡಬಹುದು.

ಸ್ವಯಂ ಗಣತಿ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ):

ಸ್ವಯಂ ಗಣತಿ ಪ್ರಕ್ರಿಯೆ ಮುಗಿದ ನಂತರ, ಎರಡನೇ ಹಂತವಾಗಿ ಏಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಈ ವೇಳೆ ನೀವು ಈಗಾಗಲೇ ಪಡೆದಿರುವ ‘ಸ್ವಯಂ ಗಣತಿ ಐಡಿ’ಯನ್ನು ಅವರಿಗೆ ತೋರಿಸಿದರೆ ಸಾಕು. ಅವರು ಆ ಐಡಿ ಮೂಲಕ ನಿಮ್ಮ ವಿವರಗಳನ್ನು ಕ್ಷಣಾರ್ಧದಲ್ಲಿ ದೃಢೀಕರಿಸುತ್ತಾರೆ. ಯಾರು ಸ್ವಯಂ ಗಣತಿ ಮಾಡಿಲ್ಲವೋ, ಅಂತಹವರ ಮನೆಗೆ ಭೇಟಿ ನೀಡಿ ಗಣತಿದಾರರೇ ನೇರವಾಗಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಈ ಜನಗಣತಿಯು ಸರ್ಕಾರದ ಯೋಜನೆಗಳ ಜಾರಿಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ನಿಖರವಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

Exit mobile version