ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ತಮ್ಮ ದಾಖಲೆಯ 17ನೇ ರಾಜ್ಯ ಬಜೆಟ್ ಮಂಡಿಸಿದರು. ಸುದೀರ್ಘ 3 ಗಂಟೆ 40 ನಿಮಿಷಗಳ ಭಾಷಣದಲ್ಲಿ ರಾಜ್ಯದ ಆರ್ಥಿಕತೆಗೆ ಹೊಸ ದಿಕ್ಕು ನೀಡುವ ಅನೇಕ ಯೋಜನೆಗಳನ್ನು ಘೋಷಿಸಿದರು. ಗ್ಯಾರಂಟಿ ಯೋಜನೆಗಳ ಮುಂದುವರಿಕೆಯಿಂದ ಹಿಡಿದು ಉದ್ಯೋಗ, ಆರೋಗ್ಯ, ಶಿಕ್ಷಣ, ಕೃಷಿ, ಮಹಿಳಾ-ಮಕ್ಕಳ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಇಲ್ಲಿ ಬಜೆಟ್‌ನ ಟಾಪ್ 30 ಹೈಲೈಟ್ಸ್ ಒಂದೇ ಕಡೆ:
- ದೇಶದ ಜಿಡಿಪಿ ಬೆಳವಣಿಗೆ 7.4% ಇದ್ದರೆ ಕರ್ನಾಟಕದಲ್ಲಿ 8.1% ದಾಖಲು
- ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಮೀಸಲು
- 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯ ನಿಷೇಧ
- ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಬೋಧಕ ಹುದ್ದೆಗಳ ಭರ್ತಿ
- ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2 ಸಾವಿರ ಬೋಧಕ ಹುದ್ದೆಗಳ ಭರ್ತಿ
- ಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ
- 18 ವರ್ಷದೊಳಗಿನ ಮಕ್ಕಳ ಡಯಾಬಿಟಿಸ್ ಚಿಕಿತ್ಸೆಗೆ ಉಚಿತ ಇನ್ಸುಲಿನ್
- ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ
- ಕಾರವಾರ, ಯಾದಗಿರಿಯಲ್ಲಿ ₹100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
- ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ
- ಐಟಿಐ ಕೋರ್ಸು ಮಾಡಿದವರಿಗೆ ಪದವಿ ಪೂರ್ವ ಪ್ರಮಾಣಪತ್ರ ವಿತರಣೆ
- ಬೆಂಗಳೂರಲ್ಲಿ 158 ಕಿ.ಮೀ. ರಸ್ತೆಗಳ ವೈಟ್ ಟಾಪಿಂಗ್
- ಈ ವರ್ಷ 41 ಕಿ.ಮೀ. ಮೆಟ್ರೋ ಮಾರ್ಗ ಪೂರ್ಣಗೊಳಿಸುವ ಯೋಜನೆ
- ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ 1,250 ಚಾರ್ಜಿಂಗ್ ಪಾಯಿಂಟ್‌ಗಳ ಸ್ಥಾಪನೆ
- ಬೆಳಗಾವಿಯಲ್ಲಿ 1,000 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿ
- ಪತ್ರಿ ಕೆಜಿ ರೇಷ್ಮೆ ಗೂಡಿಗೆ ಸಾಗಾಣಿಕಾ ವೆಚ್ಚ ₹10ರಿಂದ ₹20ಕ್ಕೆ ಹೆಚ್ಚಳ
- ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ, ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್‌ಗಳ ಸ್ಥಾಪನೆ
- ರಾಜ್ಯದಲ್ಲಿ ಪ್ರಪ್ರಥಮವಾಗಿ ಜಾನುವಾರುಗಳಿಗೆ ಸಿ.ಟಿ ಸ್ಕ್ಯಾನಿಂಗ್ ಕೇಂದ್ರ
- ಬೆಂಗಳೂರು ಮತ್ತು ಬೀದರ್ ಪಶು ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನಿಂಗ್ ಕೇಂದ್ರ
- ಬೆಂಗಳೂರು ಮತ್ತು ಬೀದರ್‌ನಲ್ಲಿ ‘ಶ್ವಾನ ಸಂತಾನ ನಿಯಂತ್ರಣ ಕೇಂದ್ರ’ ಸ್ಥಾಪನೆ
- ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಚಿಕ್ಕಮಗಳೂರಲ್ಲಿ ಮತ್ಸ್ಯ ದರ್ಶಿನಿ ಸ್ಥಾಪನೆ
- 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹30,000 ಕೋಟಿ ಸಾಲ
- ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ
- ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಯಾತ್ರೆಗೆ ₹5,000 ಸಹಾಯ
- ಸಂತ ಶಿಶುನಾಳ ಶರೀಫರ ಹೆಸರಲ್ಲಿ 10 ಹೊಸ ವಸತಿ ಶಾಲೆಗಳ ಸ್ಥಾಪನೆ
- 25 ಹೊಸ ಅಲ್ಪಸಂಖ್ಯಾತ ಮೆಟ್ರಿಕ್ ವಿದ್ಯಾರ್ಥಿ ನಿಲಯಗಳ ಸ್ಥಾಪನೆ
- 50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ 10 AI ಪ್ರಯೋಗಾಲಯಗಳ ಸ್ಥಾಪನೆ
- ಸಾರಿಗೆ ನೌಕರರ ವೇತನ ಬಾಕಿ ಪಾವತಿಗೆ ₹1,271 ಕೋಟಿ ಮೀಸಲು
- ಕೊರಟಗೆರೆ ತಾ. ವಡೇರಹಳ್ಳಿಯಲ್ಲಿ 12 TMC ಸಾಮರ್ಥ್ಯದ ಡ್ಯಾಂ ನಿರ್ಮಾಣ
- ಮಹಿಳೆಯರಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆಗೆ ಅವಕಾಶ
ಸಿದ್ದರಾಮಯ್ಯ ಅವರ ಈ ಬಜೆಟ್ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ಜನಕಲ್ಯಾಣ ಯೋಜನೆಗಳಿಗೆ ಭರ್ಜರಿ ಒತ್ತು ನೀಡಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಮುಂದುವರಿಕೆಯೊಂದಿಗೆ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.





