Karnataka Budget 2026 Live Update: ಸಿದ್ದರಾಮಯ್ಯರ ದಾಖಲೆಯ 17ನೇ ಬಜೆಟ್ ಮಂಡನೆ

BeFunky collage 2026 03 06T103240.116

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ತಮ್ಮ ದಾಖಲೆಯ 17ನೇ ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಅಥವಾ ಹಣಕಾಸು ಸಚಿವರು ಮಂಡಿಸಿದ ಅತ್ಯಧಿಕ ಬಜೆಟ್‌ಗಳ ಸಾಧನೆಯಾಗಿದೆ.

2026-27ನೇ ಸಾಲಿನ ಆಯ-ವ್ಯಯ ಮಂಡನೆಯಾದ ಈ ಐತಿಹಾಸಿಕ ಬಜೆಟ್ ರಾಜ್ಯದ ಆರ್ಥಿಕತೆಗೆ ಹೊಸ ದಿಕ್ಕು ನೀಡುವ ಗುರಿಯನ್ನು ಹೊಂದಿದೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲಿ ರಾಜ್ಯದ ರೈತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. “ನಾಡಿನ ರೈತರು, ಅಲ್ಪಸಂಖ್ಯಾತರ ಪರವಾಗಿ ಈ ಬಜೆಟ್ ರೂಪುಗೊಂಡಿದೆ. ರಾಷ್ಟ್ರದ ಅಭಿವೃದ್ಧಿ ಸಾಲಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವಂತೆ ಮಾಡುವುದು ನಮ್ಮ ಗುರಿ” ಎಂದು ಸಿಎಂ ಹೇಳಿದ್ದಾರೆ.

ಬಜೆಟ್ ಅಧಿವೇಶನ ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿದ್ದು, ರಾಜ್ಯದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಲಭ್ಯವಾಗಲಿದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಉದ್ಯೋಗ ಸೃಷ್ಟಿಗೆ ಈ ಬಜೆಟ್ ಹೊಸ ಆಶಾಕಿರಣವಾಗಲಿದೆ ಎಂಬ ನಿರೀಕ್ಷೆ ಇದೆ.

ಪ್ರಮುಖಾಂಶಗಳ ನಿರೀಕ್ಷೆಗಳು :

ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲಿ (230 ಸ್ಥಳಗಳಲ್ಲಿ) ಟಿವಿ ಮತ್ತು ಎಲ್‌ಇಡಿ ಪರದೆಗಳ ಮೂಲಕ ಏರ್ಪಡಿಸಲಾಗಿದೆ. ಬಜೆಟ್ ಮಂಡನೆಯ ನಂತರ ಸಿಎಂ ಅವರ ಪತ್ರಿಕಾಗೋಷ್ಠಿಯನ್ನೂ ಪ್ರಸಾರ ಮಾಡಲಾಗುತ್ತದೆ.

Exit mobile version