ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರು ಮದುವೆಗೆ ಮುನ್ನ ಹೃದಯಾಘಾತದಿಂದ ಮರಣಕ್ಕೆ ಈಡಾಗಿದ್ದಾರೆ.
ನಾಳೆ (ನವೆಂಬರ್ 1) ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು ತರೀಕೆರೆಯ ದಿಲೀಪ್ ಅವರ ಜೊತೆ ವಿವಾಹ ನಿಗದಿಯಾಗಿತ್ತು. ಎರಡೂ ಕುಟುಂಬಗಳು ಮದುವೆಯ ಸಿದ್ಧತೆಗಳಲ್ಲಿ ತೊಡಗಿದ್ದ ಸಮಯದಲ್ಲಿ, ಗುರುವಾರ ವಧು ಶೃತಿ ಅವರು ತನ್ನ ಮನೆಯಲ್ಲಿದ್ದಾಗ ಹಠತ್ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವೈದ್ಯಕೀಯ ತಜ್ಞರು, ಒತ್ತಡ, ಅಸಮತೋಲಿತ ಆಹಾರ ಮತ್ತು ಅತಿ ಕೆಲಸದಿಂದಾಗಿ ಯುವ ಪೀಳಿಗೆಯಲ್ಲಿ ಹೃದಯ ರೋಗಗಳು ಹೆಚ್ಚಾಗುತ್ತಿರುವುದಾಗಿ ಎಚ್ಚರಿಸುತ್ತಾರೆ.
ಮಗಳ ಮದುವೆಯನ್ನು ಕಂಡು ಸಂತೋಷಿಸಲು ಸಿದ್ಧರಾಗಿದ್ದ ಹಿರಿಯರು, ಈಗ ಅವಳ ಅಕಾಲ ಮರಣದ ದುಃಖ ಅನುಭವಿಸುತ್ತಿದ್ದಾರೆ. ಇನ್ನೂ ವರನ ಕುಟುಂಭವೂ ಈ ಸುದ್ದಿ ಕೇಳಿ ತೀವ್ರ ದುಃಖ ಹೊರಹಾಕಿದ್ದಾರೆ. ವಧು ಶೃತಿ ದೇಹವನ್ನು ಮನೆಯಲ್ಲೇ ಇರಿಸಿ, ಬಂಧು-ಬಳಗ ಮತ್ತು ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಲಿದ್ದಾರೆ.
 
			
 
					




 
                             
                             
                            