ರಾಜ್ಯಪಾಲರು ಓಡಿ ಹೋದ್ರು ಎಂದ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಆರ್‌.ಅಶೋಕ್‌

Untitled design 2026 01 23T135347.897

ಬೆಂಗಳೂರು: ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವ ಮುನ್ನವೇ ಸದನದಿಂದ ಹೊರನಡೆದ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದು, ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ವಾಗ್ವಾದ ನಡೆಯಿತು.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ರಾಜ್ಯಪಾಲರು, ಭಾಷಣದ ನಂತರ ರಾಷ್ಟ್ರಗೀತೆ ಆರಂಭವಾಗುವ ಮುನ್ನವೇ ವೇದಿಕೆಯಿಂದ ಹೊರನಡೆದರು. ಈ ಬಗ್ಗೆ ಇಂದು ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವವರೆಗೂ ಕಾಯಬೇಕಿತ್ತು. ಸಂವಿಧಾನಾತ್ಮಕ ಹುದ್ದೆಯಲ್ಲಿರುವವರು ಹೀಗೆ ರಾಷ್ಟ್ರಗೀತೆಗೆ ಗೌರವ ನೀಡದೆ ಮಧ್ಯದಲ್ಲೇ ಹೊರಟು ಹೋಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ಮಧ್ಯೆ, ನಾನು ಹೇಳುವ ಮೊದಲೇ ರಾಜ್ಯಪಾಲರು ಓಡಿ ಹೋದರು, ಅವರ ಹಿಂದೆ ನಾನೂ ಓಡಿದೆ ಎಂದು ಹೇಳಿದ್ದಾರೆ ಹೀಗಾಗಿ ವಿರೋಧ ಪಕ್ಷದ ನಾಯಕರು ಸಿಎಂ ವಿರುದ್ದ ಕಿಡಿಕಾರಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, ರಾಜ್ಯಪಾಲರ ಬಗ್ಗೆ ಓಡಿ ಹೋದರು ಎಂಬ ಪದ ಬಳಸುವುದು ಎಷ್ಟು ಸರಿ ? ಅವರು ಗೌರವಾನ್ವಿತ ವ್ಯಕ್ತಿಗಳು, ಅವರ ಬಗ್ಗೆ ಇಂತಹ ಹಗುರವಾದ ಮಾತುಗಳು ಶೋಭಿಸುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ರಾಜ್ಯಪಾಲರ ವಯಸ್ಸೇನು ? ಆ ವಯಸ್ಸಿನಲ್ಲಿ ಅವರಿಗೆ ಓಡಲು ಸಾಧ್ಯವೇ ? ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಪಕ್ಷಗಳ ಟೀಕೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಭಾಷಣ ಮುಗಿಸಿ ನಾನು ವಂದನಾರ್ಪಣೆ ಸಲ್ಲಿಸುವ ಮುನ್ನವೇ ವೇಗವಾಗಿ ಹೊರಬಂದರು. ಅವರನ್ನು ತಡೆಯಲು ನಾನು ಕೂಡ ಅವರ ಹಿಂದೆಯೇ ವೇಗವಾಗಿ ಹೊಗಬೆಕಾಯಿತು. ರಾಷ್ಟ್ರಗೀತೆಯ ಶಿಷ್ಟಾಚಾರವನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಒಟ್ಟಾರೆಯಾಗಿ, ರಾಜ್ಯಪಾಲರ ನಡೆ ಮತ್ತು ಮುಖ್ಯಮಂತ್ರಿಗಳ ಹೇಳಿಕೆ ವಿಧಾನಮಂಡಲದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.

ಕೇವಲ 1 ನಿಮಿಷ ಭಾಷಣ ಮಾಡಿ ಹೊರ ನಡೆದ ರಾಜ್ಯಪಾಲ ಗೆಹ್ಲೋಟ್ ವಿರುದ್ಧ ಸರ್ಕಾರ ಆಕ್ರೋಶ..!

ಕರ್ನಾಟಕ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೇವಲ 1 ನಿಮಿಷದಷ್ಟು ಭಾಷಣ ಮಾಡಿ ಹೊರಟಿದ್ದು, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ತಯಾರಿಸಿದ ಭಾಷಣದ ಮೊದಲ ಎರಡು ಸಾಲುಗಳಷ್ಟೇ ಓದಿ, “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲಿ ಹೇಳಿ ಶುಭಾಶಯಗಳನ್ನು ತಿಳಿಸಿ ತಕ್ಷಣ ಹೊರಟುಹೋದರು.

ಭಾಷಣ ಮುಗಿದ ಕೂಡಲೇ ವಿಧಾನಸಭೆಯಲ್ಲಿ ಗದ್ದಲ ಆರಂಭವಾಯಿತು. ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಹೊರಡುವ ದಾರಿಯಲ್ಲೇ ಹೊರಟು ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಸರ್ಕಾರ ತಯಾರಿಸಿದ ಭಾಷಣವನ್ನು ಸಂಪೂರ್ಣವಾಗಿ ಓದಬೇಕು.

ರಾಜ್ಯಪಾಲರು ಭಾಷಣದಲ್ಲಿ ಕೇಂದ್ರ ವಿರೋಧಿ 11 ಅಂಶಗಳನ್ನು (ಬರ ಪರಿಹಾರ ವಿಳಂಬ, ತೆರಿಗೆ ಹಂಚಿಕೆ ಅನ್ಯಾಯ, MGNREGA ರದ್ದುಪಡಿಸಿ VB-G RAM G ಜಾರಿ ಮುಂತಾದವು) ಓದಲು ನಿರಾಕರಿಸಿದ್ದರು. ಸ್ಪೀಕರ್ ಅವರ ಮನವೊಲಿಕೆಗೂ ಕಿವಿಗೊಡದೇ ಅವರು ಹೊರಟುಹೋದರು. ಇದು ತಮಿಳುನಾಡು ಮತ್ತು ಕೇರಳದಲ್ಲಿ ನಡೆದ ರಾಜ್ಯಪಾಲರು vs ಸರ್ಕಾರದ ಡ್ರಾಮಾವನ್ನು ಹೋಲುತ್ತಿದ್ದು, ದಕ್ಷಿಣ ರಾಜ್ಯಗಳಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರು ಇದನ್ನು ಸಂವಿಧಾನದ ಉಲ್ಲಂಘನೆ ಎಂದು ಆರೋಪಿಸಿದ್ದು, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ವಿರೋಧ ಪಕ್ಷಗಳು ರಾಜ್ಯಪಾಲರ ನಿಲುವನ್ನು ಬೆಂಬಲಿಸುತ್ತಿವೆ. ಈ ಘಟನೆಯಿಂದ ಅಧಿವೇಶನದ ಉಳಿದ ದಿನಗಳಲ್ಲಿ ರಾಜಕೀಯ ಘರ್ಷಣೆ ತೀವ್ರಗೊಳ್ಳುವ ನಿರೀಕ್ಷೆ ಇದೆ.

Exit mobile version