2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

Untitled design 2026 04 09T191742.146

ಬೆಂಗಳೂರು, ಏಪ್ರಿಲ್ 09: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಇಂದು ಮಧ್ಯಾಹ್ನ 3 ಗಂಟೆಗೆ ಆನ್ಲೈನ್ ನಲ್ಲಿ ಪ್ರಕಟವಾಗಿದೆ. ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಅಧಿಕೃತ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶೇಕಡಾ 86.48 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ (73.45%) ಗಿಂತ ಗಣನೀಯ ಏರಿಕೆ ಕಂಡು ಬಂದಿದೆ. ಒಟ್ಟು 7,10,363 ಪರೀಕ್ಷಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಬಾಲಕಿಯರೇ ಮುಂದೆ

ಈ ಬಾರಿಯೂ ಬಾಲಕಿಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶೇ.88.07 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಬಾಲಕರ ತೇರ್ಗಡೆ ಪ್ರಮಾಣ ಶೇ.83.65 ಆಗಿದೆ. ವಿಭಾಗವಾರು ಫಲಿತಾಂಶವನ್ನು ಗಮನಿಸಿದರೆ, ವಿಜ್ಞಾನ ವಿಭಾಗದಲ್ಲಿ ಶೇ.91.69, ವಾಣಿಜ್ಯ ವಿಭಾಗದಲ್ಲಿ ಶೇ.88.04 ಮತ್ತು ಕಲಾ ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ ಬಂದಿದೆ.

ಉಡುಪಿ ಮತ್ತೆ ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ

ಕಳೆದ ವರ್ಷದಂತೆಯೇ ಈ ಬಾರಿಯೂ ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇ.96.39 ಫಲಿತಾಂಶದೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.96.35 ರನ್ವಯ ಎರಡನೇ ಸ್ಥಾನದಲ್ಲಿದ್ದರೆ, ಕೊಡಗು ಜಿಲ್ಲೆ ಶೇ.92.34 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ತೇರ್ಗಡೆ ಪ್ರಮಾಣ ದಾಖಲಿಸಿದ ಜಿಲ್ಲೆಗಳೆಂದರೆ ರಾಯಚೂರು (74.09%) ಮತ್ತು ಯಾದಗಿರಿ (71.21%). ಯಾದಗಿರಿ ಜಿಲ್ಲೆ ಕೊನೆಯ (31ನೇ) ಸ್ಥಾನದಲ್ಲಿದೆ.

ಸಂಪೂರ್ಣ ಜಿಲ್ಲಾವಾರು ಫಲಿತಾಂಶದ ಪಟ್ಟಿ (ಶೇಕಡಾದಲ್ಲಿ)
  1. ಉಡುಪಿ – 96.39

  2. ದಕ್ಷಿಣ ಕನ್ನಡ – 96.35

  3. ಕೊಡಗು – 92.34

  4. ವಿಜಯಪುರ – 92.00

  5. ಉತ್ತರ ಕನ್ನಡ – 91.78

  6. ಬೆಂಗಳೂರು ಗ್ರಾಮಾಂತರ – 91.00

  7. ಚಿಕ್ಕಮಗಳೂರು – 90.80

  8. ಬೆಂಗಳೂರು ದಕ್ಷಿಣ – 90.55

  9. ಚಿಕ್ಕಬಳ್ಳಾಪುರ – 90.24

  10. ಬೆಂಗಳೂರು ಉತ್ತರ – 90.05

  11. ಹಾಸನ – 89.71

  12. ಮಂಡ್ಯ – 88.85

  13. ಶಿವಮೊಗ್ಗ – 87.62

  14. ರಾಮನಗರ – 87.90

  15. ಕೋಲಾರ – 87.38

  16. ತುಮಕೂರು – 86.89

  17. ಕೊಪ್ಪಳ – 86.80

  18. ಮೈಸೂರು – 84.80

  19. ಚಾಮರಾಜನಗರ – 84.68

  20. ಬೀದರ್ – 84.61

  21. ಬಾಗಲಕೋಟೆ – 84.12

  22. ಹಾವೇರಿ – 84.11

  23. ಧಾರವಾಡ – 83.31

  24. ಚಿಕ್ಕೋಡಿ – 83.10

  25. ದಾವಣಗೆರೆ – 81.99

  26. ಬೆಳಗಾವಿ – 80.32

  27. ಚಿತ್ರದುರ್ಗ – 79.12

  28. ಬಳ್ಳಾರಿ – 78.69

  29. ಕಲಬುರಗಿ – 76.97

  30. ಗದಗ – 76.65

  31. ರಾಯಚೂರು – 74.09

  32. ಯಾದಗಿರಿ – 71.21

ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಈ ಬಾರಿಯ ದಾಖಲೆಯ ಫಲಿತಾಂಶವು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ, ಪೂರಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

Exit mobile version