ಒಂದೇ ದಿನದಲ್ಲಿ 17 ಫ್ರಾಂಚೈಸಿಗಳನ್ನ ಆರಂಭಿಸಿದ ಆದಿತ್ಯ ಬಿರ್ಲಾ

Untitled design 2025 03 26t190213.762

ಇತ್ತೀಚಿಗೆ ಕರ್ನಾಟಕದಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ಒಂದು ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿಯನ್ನು ವಿಭಿನ್ನ ರೀತಿಯಲ್ಲಿ ವಿಸ್ತರಿಸಿದೆ. ಇದರಿಂದ ರಾಜ್ಯದಲ್ಲಿ ಒಟ್ಟು 45 ಫ್ರಾಂಚೈಸಿ ಮಳಿಗೆಗಳ ಮೂಲಕ ಬಿರ್ಲಾ ಓಪಸ್ ಪೇಂಟ್ಸ್ ತನ್ನ ಸೇವೆಗಳನ್ನು ಒದಗಿಸುತ್ತಿದ್ದು, ಗುಣಮಟ್ಟದ ಪೇಂಟಿಂಗ್ ಪರಿಹಾರಗಳನ್ನು ನೀಡಲು ಹೆಸರುವಾಸಿಯಾಗುತ್ತಿದೆ.

ಈ ಹೊಸ ಮಳಿಗೆಗಳು ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಗುಲ್ಬರ್ಗಾ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸ್ಥಾಪಿತವಾಗಿವೆ. ಈ ಮೂಲಕ ಗ್ರಾಹಕರಿಗೆ ಉನ್ನತ ಗುಣಮಟ್ಟದ ಪೇಂಟ್ಸ್ ಮತ್ತು ವೈವಿಧ್ಯಮಯ ಕಲರಿಂಗ್ ಆಯ್ಕೆಗಳು ಲಭ್ಯವಾಗುತ್ತವೆ. ಫ್ರಾಂಚೈಸಿ ಮಳಿಗೆಗಳಲ್ಲಿ ಉಚಿತ ಪೇಂಟ್ ಕನ್‌ಸಲ್ಟೇಶನ್‌ ಮತ್ತು ಗ್ರಾಹಕರಿಗೆ ಹೊಂದುವಂತೆ ವೈಯಕ್ತಿಕ ಕಲರ್ ಆಯ್ಕೆಗಳ ಸೇವೆಗಳನ್ನು ಒದಗಿಸಲಾಗುತ್ತಿದೆ.

ಬಿರ್ಲಾ ಓಪಸ್ ಪೇಂಟ್ಸ್‌ನ ಸಿಇಒ ರಕ್ಷಿತ್ ಹರ್ಗವೆ ಈ ಸಂದರ್ಭದಲ್ಲಿ ಮಾತನಾಡಿ, “ಕರ್ನಾಟಕದಲ್ಲಿ 17 ಹೊಸ ಮಳಿಗೆಗಳ ಪ್ರಾರಂಭವು ನಮ್ಮ ಫ್ರಾಂಚೈಸಿ ಜಾಲವನ್ನು 45ಕ್ಕೆ ಹೆಚ್ಚಿಸಿದ್ದು, ದಕ್ಷಿಣ ಭಾರತದಲ್ಲಿ ನಮ್ಮ ಹೆಜ್ಜೆ ಗುರುತನ್ನು ಬಲಪಡಿಸಿದೆ. ಪೇಂಟಿಂಗ್ ಅನ್ನು ಕೇವಲ ಕೆಲಸವಷ್ಟೇ ಅಲ್ಲ, ಜೀವನಕ್ಕೆ ಸ್ಫೂರ್ತಿ ತರುವ ಕಾರ್ಯವೆಂದು ನಾವು ನಂಬುತ್ತೇವೆ. ಈ ಹೊಸ ಮಳಿಗೆಗಳ ಮೂಲಕ ನಾವು ಕರ್ನಾಟಕದ ಸಂಸ್ಕೃತಿ ಮತ್ತು ಸೌಂದರ್ಯವನ್ನು ಬಿಂಬಿಸುವ ಬಣ್ಣಗಳನ್ನು ನೀಡುತ್ತೇವೆ” ಎಂದು ಹೇಳಿದರು.

ಈ ವಿಸ್ತರಣೆ ಬಿರ್ಲಾ ಓಪಸ್ ಪೇಂಟ್ಸ್‌ನ ಪ್ರಗತಿಗೆ ಪೂರಕವಾಗಿದ್ದು, ಭಾರತದಾದ್ಯಂತ ಉನ್ನತ ಗುಣಮಟ್ಟದ ಸೇವೆಗಳ ಒದಗಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದ್ದು, ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಕರ್ನಾಟಕದ ಪೇಂಟಿಂಗ್ ಉದ್ಯಮಕ್ಕೆ ಹೊಸ ಮೈಲುಗಲ್ಲು ಬರೆಯಲಾಗಿದೆ.

Exit mobile version