ಭಾರತ ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳಿಂದ ಸಾವುಗಳನ್ನು ದಾಖಲಿಸುವ ದೇಶವಾಗಿದೆ. ಪ್ರತಿ ವರ್ಷ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಜೀವ ಬಿಡುತ್ತಿದ್ದಾರೆ, ಇದರಲ್ಲಿ ಬಸ್ ಅಪಘಾತಗಳು ಮತ್ತು ಬೆಂಕಿ ದುರಂತಗಳು ಗಣನೀಯವಾಗಿವೆ. 2024ರಿಂದ 2025ರ ಅಕ್ಟೋಬರ್‌ವರೆಗೆ ಬಸ್ ಬೆಂಕಿ ಅಪಘಾತಗಳಲ್ಲಿ ನೂರಾರು ಜನರು ಮೃತರಾಗಿದ್ದಾರೆ. ರಸ್ತೆಗಳ ದುರಾವಸ್ಥೆ, ಚಾಲಕರ ನಿರ್ಲಕ್ಷ್ಯ, ವಾಹನಗಳ ಸುರಕ್ಷತಾ ಕೊರತೆ ಮತ್ತು ದಟ್ಟವಾದ ಸಂಚಾರವೇ ಈ ದುರಂತಗಳಿಗೆ ಕಾರಣಗಳು.
ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯು ದಿನಕ್ಕೊಂದು ಲಕ್ಷಾಂತರ ಜೀವಗಳನ್ನು ಕಸಿಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2023ರಲ್ಲಿ 1.19 ಲಕ್ಷ ಸಾವುಗಳು ನಡೆದಿದ್ದು, 2024ರಲ್ಲಿ ಇದು ಹೆಚ್ಚಾಗಿದೆ. ಬಸ್ ಅಪಘಾತಗಳು ಈ ಸಂಖ್ಯೆಯಲ್ಲಿ 10%ಕ್ಕೂ ಹೆಚ್ಚು ಪಾಲು ಹೊಂದಿವೆ. ಕಾರಣಗಳು: 70% ಅಪಘಾತಗಳು ಚಾಲಕರ ತಪ್ಪುಗಳಿಂದ, 20% ರಸ್ತೆ ದುರಾವಸ್ಥೆಯಿಂದ, 10% ವಾಹನ ಕೊರತೆಯಿಂದ ನಡೆಯುತ್ತವೆ. ಖಾಸಗಿ ಬಸ್‌ಗಳಲ್ಲಿ ಎಸಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತು ತುರ್ತು ಬಾಗಿಲುಗಳ ಕೊರತೆಯಿಂದ ಬೆಂಕಿ ದುರಂತಗಳು ಹೆಚ್ಚಾಗಿವೆ.
2024 ರಿಂದ 2025ರ ಅಕ್ಟೋಬರ್‌ವರೆಗೆ ಭಾರತದಲ್ಲಿ ನಡೆದ ಬಸ್ ಬೆಂಕಿ ದುರಂತಗಳ ಪಟ್ಟಿ ಹೀಗಿವೆ..! ಈ ಅವಧಿಯಲ್ಲಿ 10ಕ್ಕೂ ಹೆಚ್ಚು ಪ್ರಮುಖ ಘಟನೆಗಳು ನಡೆದು, 200ಕ್ಕೂ ಹೆಚ್ಚು ಜೀವಗಳು ಕಳೆದುಕೊಂಡಿವೆ.
ಅಕ್ಟೋಬರ್ 2025 – ಆಂಧ್ರಪ್ರದೇಶ (ಕರ್ನೂಲು): ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಮುಂಜಾನೆ 3 ಗಂಟೆಗೆ ನಡೆದ ಈ ದುರಂತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡರು. ಶಾರ್ಟ್ ಸರ್ಕ್ಯೂಟ್‌ನಿಂದ ಬಾಗಿಲು ಜ್ಯಾಮ್ ಆಗಿ, ಕೇವಲ 12 ಮಂದಿ ಕಿಟಕಿಗಳನ್ನು ಒಡೆದು ತಪ್ಪಿಸಿಕೊಂಡರು. ಬಸ್ ಸಂಪೂರ್ಣ ಭಸ್ಮವಾಯಿತು.
ಅಕ್ಟೋಬರ್ 14,2025- ರಾಜಸ್ಥಾನ (ಜೈಸಲ್ಮೇರ್-ಜೋಧ್‌ಪುರ): ಹವಾನಿಯಂತ್ರಣ ವ್ಯವಸ್ಥೆಯ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿತು. ಮಕ್ಕಳು ಸೇರಿದಂತೆ 22 ಮಂದಿ ಮೃತರಾದರು. ಬಾಗಿಲು ಲಾಕ್ ಆಗಿ, ಬಹುತೇಕರು ಬಸ್‌ನೊಳಗೆ ಸಿಲುಕಿ ಸಾಯುವಂತೆಯಾದರು.
ಮೇ15, 2025 – ಹರಿಯಾಣ (ಕೆಎಂಪಿ ಎಕ್ಸ್‌ಪ್ರೆಸ್‌ವೇ): ವೃಂದಾವನದಿಂದ ಹಿಂದಿರುಗುತ್ತಿದ್ದ ಬಸ್‌ಗೆ ನುಹ್ ಬಳಿಯಲ್ಲಿ ಬೆಂಕಿ ತಗುಳಿತು.9 ಮಂದಿ ಮೃತರಾದರು. ಸುಮಾರು 60 ಪ್ರಯಾಣಿಕರಲ್ಲಿ ಹಲವರು ಗಾಯಗೊಂಡರು.
ನವೆಂಬರ್ 14,2025 – ಉತ್ತರ ಪ್ರದೇಶ (ಲಕ್ನೋ): ದೆಹಲಿಯಿಂದ ಅಜಮ್‌ಗಢಕ್ಕೆ ಹೋಗುತ್ತಿದ್ದ ಬಸ್‌ನ ಟೈರ್ ಸ್ಪೋಟ್ ಆಗಿ ಬೆಂಕಿ ಕಾಣಿಸಿಕೊಂಡಿತು. ಚಾಲಕನ ಸಮಯಪ್ರಜ್ಞೆಯಿಂದ 42 ಮಂದಿ ಪ್ರಯಾಣಿಕರು ಸುರಕ್ಷಿತರಾದರು; ಯಾವುದೇ ಸಾವು ಸಂಭವಿಸಲಿಲ್ಲ.
ಜುಲೈ 2023- ಮಹಾರಾಷ್ಟ್ರ (ಬುಲ್ಢಾಣ): ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ವಿದರ್ಭ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಹೊತ್ತಿಕೊಂಡು 25 ಮಂದಿ ಮೃತರಾದರು. ಚಾಲಕನ ರಕ್ತದಲ್ಲಿ ೦.3೦% ಆಲ್ಕೊಹಾಲ್ ಪತ್ತೆಯಾಯಿತು. 8 ಮಂದಿ ಗಾಯಗೊಂಡರು.
ಅಕ್ಟೋಬರ್ 2022- ಮಹಾರಾಷ್ಟ್ರ (ನಾಶಿಕ್): ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್‌ಗೆ ಬೆಂಕಿ ತಗುಳಿ 12 ಮಂದಿ ಮೃತರಾದರು. 43 ಮಂದಿ ಗಂಭೀರವಾಗಿ ಗಾಯಗೊಂಡರು. ಮುಂಜಾನೆ 5 ಗಂಟೆಗೆ ನಡೆದ ಈ ದುರಂತದಲ್ಲಿ ಬಹುತೇಕರು ನಿದ್ರೆಯಲ್ಲಿದ್ದರು.
ಈ ದುರಂತಗಳು ಖಾಸಗಿ ಬಸ್ ಸಂಸ್ಥೆಗಳ ಸುರಕ್ಷತಾ ಕೊರತೆಯನ್ನು ಎತ್ತಿ ತೋರಿಸುತ್ತವೆ. ಸರ್ಕಾರ ಬೆಂಕಿ ನಿರೋಧಕ ಸಾಧನಗಳು, ತುರ್ತು ಬಾಗಿಲುಗಳು ಮತ್ತು ಚಾಲಕರ ತರಬೇತಿಯನ್ನು ಕಡ್ಡಾಯಗೊಳಿಸಬೇಕು. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಜಾಗರೂಕತೆ ಅಭಿಯಾನಗಳು ಅಗತ್ಯವಾಗಿದೆ.





