ದಾವಣಗೆರೆ: ಕೋರ್ಟ್ ಆವರಣದಲ್ಲೇ ಪತಿಯೇ ಪತ್ನಿಗೆ ಚಾಕುವಿನಿಂದ ಹ*ಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 30 ವರ್ಷದ ಪದ್ಮಾ ಹಲ್ಲೆಗೊಳಗಾದ ಮಹಿಳೆ.
ಡಿವೋರ್ಸ್ ಕೇಸ್ ವಿಚಾರಕ್ಕೆ ದಂಪತಿಗಳು ಫ್ಯಾಮಿಲಿ ಕೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಪತಿ ಪ್ರವೀಣ್ (32) ಪತ್ನಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ. ನಾಲ್ಕು ವರ್ಷದ ಹಿಂದೆ ಪದ್ಮಾ ಮತ್ತು ಪ್ರವೀಣ್ ಪ್ರೀತಿಸಿ ಮದುವೆ ಆಗಿದ್ದರು. ಈ ದಂಪತಿ ಒಂದು ಹೆಣ್ಣು ಮಗು ಇದೆ. ಆಗಾಗ ಪತ್ನಿಯ ಶೀಲ ಶಂಕಿಸಿ ಪ್ರವೀಣ್ ಗಲಾಟೆ ಮಾಡುತ್ತಿದ್ದನು. ಕಳೆದ ಒಂದು ವರ್ಷದ ಹಿಂದೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಸಂಸಾರ ಮಾಡಲು ಆಗಲ್ಲ ಎಂದು ಪದ್ಮಾ ಡೈವೋರ್ಸ್‌ಗೆ ಅಪ್ಲೈ ಮಾಡಿದ್ದರು. ಈ ಹಿಂದೆಯು ಸಹ ಬೆಂಗಳೂರಿನಲ್ಲಿ ಪದ್ಮಾಳನ್ನ ಕೊಲೆ ಮಾಡಲು ಪ್ರವೀಣ್ ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಇಂದು ಡಿವೋರ್ಸ್ ವಿಚಾರಕ್ಕೆ ಕೋರ್ಟ್‌ಗೆ ಹಾಜರಾದ ವೇಳೆ ಪದ್ಮಾಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ತಕ್ಷಣ ಸಿಜೆ ಆಸ್ಪತ್ರೆಗೆ ದಾಖಲಿಲಾಗಿದೆ. ನಂತರ ಪ್ರವೀಣ್ ಕೂಡ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಹೈಡ್ರಾಮಾ ಮಾಡಿದ್ದ. ಸ್ಥಳಕ್ಕೆ ಬಂದ ದಾವಣಗೆರೆ ಬಡಾವಣೆ ಪೊಲೀಸರು ಪ್ರವೀಣ್‌ನನ್ನು ವಶಕ್ಕೆ ಪಡೆದ ತನಿಖೆ ನಡೆಸುತ್ತಿದ್ದಾರೆ.
