ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರು ಸುಂದರ ಹಾಗೂ ಆಕರ್ಷಕ ಮನೆ ನಿರ್ಮಿಸಿಕೊಳ್ಳಲು ಹೊಸ ಮಾದರಿಯ ಕ್ಯುಟೊನ್ ಟೈಲ್ಸ್ ಅನುಕೂಲಕರವಾಗಿದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಹೇಳಿದರು.
ಹುಬ್ಬಳಿಯ ನೀಲಿಜಿನ್ ರಸ್ತೆಯಲ್ಲಿರುವ ಸ್ವಸ್ತಿಕ್ ಸೆಂಟ್ರಲ್ನಲ್ಲಿ ಕ್ಯುಟೊನ್ ಲಕ್ಸುರಿಯಾ ಸೆರಾಮಿಕ್ಸ್ ಹಾಗೂ ವೈವಿಧ್ಯಮಯ ಟೈಲ್ಸ್ ಶೋರೂಂ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಉತ್ತಮ ಆರಂಭವಾಗಿದೆ. ಗ್ರಾಹಕರು ತಮ್ಮ ಮನೆಗೆ ಉತ್ತಮ ಟೈಲ್ಸ್ಗಳ ಹುಡುಕಾಟದಲ್ಲಿ ಇರುತ್ತಾರೆ. ಹೊಸ ಹಾಗೂ ವಿಭಿನ್ನ ಟೈಲ್ಸ್ಗೆ ಹೆಚ್ಚು ಬೇಡಿಕೆ ಇದ್ದೇ ಇದೆ. ಗ್ರಾಹಕರ ಆಶಯಕ್ಕೆ ತಕ್ಕಂತೆ ಕ್ಯುಟೊನ್ ಹೊಸತನ ನೀಡುತ್ತಿದೆ. ಕ್ಯುಟೊನ್ ಲಕ್ಸುರಿಯಾ ಅಧಿಕೃತ ಡೀಲರ್ ಹುಬ್ಬಳ್ಳಿಗೆ ಬಂದಿದ್ದು ಸಂತೋಷದ ಸಂಗತಿ, ಇದರ ಮೂಲಕ ಈ ಭಾಗದ ಜನರಿಗೆ ಉತ್ತಮವಾದ ಸೇವೆ ನೀಡಲಿ ಎಂದು ಆಶಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಕ್ಯುಟೊನ್ ಸೆರಾಮಿಕ್ ನಿರ್ದೇಶಕ ಆಶೀಶ್ ಸಿ. ಮಾತನಾಡಿ, ಅತ್ಯಂತ ಸುಂದರ ಶೋರೂಂ ಹುಬ್ಬಳ್ಳಿಗೆ ಬಂದಿದೆ. ಮೊದಲು ಬೇರೆ ಕಡೆಯಿಂದ ಟೈಲ್ಸ್ ತರಿಸಲಾಗುತ್ತಿತ್ತು. ಇದೀಗ ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ಅತ್ಯಂತ ಶ್ರೇಷ್ಠ ಆವಿಷ್ಕಾರದೊಂದಿಗೆ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಸ್ವಸ್ತಿಕ ಸೆಂಟ್ರಲ್ ಸಿಇಒ ನಿತಿನ್ ಶರ್ಮಾ ಮಾತನಾಡಿ, ಕ್ಯುಟೊನ್ ಕಂಪನಿಯ ಹೊಸ ಡಿಸೈನ್ಗಳ ಗ್ಯಾಲರಿ ಆರಂಭಿಸಲಾಗಿದೆ. ಕನಸಿನ ಮನೆ ಕಟ್ಟುವ ಗ್ರಾಹಕರ ಆಶಯಗಳನ್ನು ಇದು ಪೂರೈಸುತ್ತದೆ. ಸ್ವಸ್ತಿಕ್ನ ಒಂದೇ ವೇದಿಕೆಯಲ್ಲಿ ಹಲವು ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದರು.
ಸಿವಿಲ್ ಇಂಜಿನಿಯರ್ ಅಮೃತ ಮೆಹರವಾಡೆ ಮಾತನಾಡಿ, ಮನೆ, ವಾಣಿಜ್ಯ ಸಂಕೀರ್ಣ, ಅಪಾರ್ಟಮೆಂಟ್ ಕಟ್ಟುವವರು ಹೊಸ ನಮೂನೆಯ ಟೈಲ್ಸ್ ಬಯಸುತ್ತಾರೆ. ಸ್ವಸ್ತಿಕ್ ಮಳಿಗೆಯಲ್ಲಿ ಕ್ಯುಟೊನ್ನ ಎಲ್ಲ ರೀತಿಯ ಟೈಲ್ಸ್ ಸಿಗುವಂತೆ ಮಾಡಿರುವುದು ವಿಶೇಷ ಎಂದರು. ಇನ್ನೂ ಕಾರ್ಯಕ್ರಮದಲ್ಲಿ ಸ್ವಸ್ತಿಕ್ ಸಂಸ್ಥೆಯ ಮಂಜುಮಾಲಾ ಶರ್ಮಾ, ಸಾಂಚಿ ಶರ್ಮಾ, ನರೇಂದ್ರ ಶರ್ಮಾ ಇತರರು ಪಾಲ್ಗೊಂಡಿದ್ದರು.





