ಹುಬ್ಬಳ್ಳಿ: ‘ಪಂಚರತ್ನ ಹಾಲಿಡೇಸ್’ ಸಂಸ್ಥೆ ಆಯೋಜಿಸುವ ಪ್ರತಿಯೊಂದು ಪ್ರವಾಸವೂ ಅದ್ಭುತ ಅನುಭವವನ್ನು ನೀಡುವುದರ ಜೊತೆಗೆ ಪ್ರವಾಸದ ವಿಶೇಷ ಪ್ಯಾಕೇಜ್‌ಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಜೆ.ಸಿ. ನಗರದ ಅವನಿ ಎಂಪೋರಿಯೋ 3ನೇ ಮಹಡಿಯಲ್ಲಿರುವ `ಪಂಚರತ್ನ ಹಾಲಿಡೇಸ್’ ಕಚೇರಿಯಲ್ಲಿ ಆಯೋಜನೆಗೊಂಡ ಎರಡು ದಿನಗಳ `ಬೃಹತ್ ಪ್ರವಾಸ ಮೇಳ’ವನ್ನು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾಕೇಜ್ ಪ್ರವಾಸ ಆಯೋಜಕ ಸಂಸ್ಥೆಯಾದ `ಪಂಚರತ್ನ ಹಾಲಿಡೇಸ್’ ಸಂಸ್ಥೆಯು ಫೆ.21 ಮತ್ತು 22 ರಂದು ನಗರದಲ್ಲಿ ಬೃಹತ್ ಪ್ರವಾಸ ಮೇಳ ಆಯೋಜಿಸಿದೆ. ಈ ಮೇಳದಲ್ಲಿ ಪ್ರವಾಸ ಕಾಯ್ದಿರಿಸುವವರಿಗೆ ಶೇ.10 ರಷ್ಟು ರಿಯಾಯಿತಿ ಲಭಿಸಲಿದ್ದು, ಉಚಿತ ಉಡುಗೊರೆಯನ್ನೂ ಕಂಪನಿ ನೀಡುತ್ತಿದೆ. ಉತ್ತರ ಭಾರತ, ದಕ್ಷಿಣ ಭಾರತ, ಈಶಾನ್ಯ ಭಾರತದ ವುಮೆನ್ ಸ್ಪೆಷಲ್, ಸೀನಿಯರ್ ಸಿಟಿಜನ್ ಸ್ಪೆಷಲ್ ಪ್ರವಾಸಗಳನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗಿದ್ದು, ಹಿರಿಯರು ಆತಂಕರಹಿತವಾಗಿ ಪ್ರವಾಸ ಕೈಗೊಳ್ಳಬಹುದಾಗಿದೆ ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಸಿಇಓ ಮೋಹನ ಹೆಗಡೆ ಮಾತನಾಡಿ, ಜಗತ್ತಿನಲ್ಲಿ ಮಿಲಿಯನ್‌ಗಟ್ಟಲೆ ಪ್ರವಾಸ ಆಯೋಜನೆ ಮಾಡುವ ಸಂಸ್ಥೆಗಳಿವೆ. ಎಲ್ಲ ಸಂಸ್ಥೆಗಳೂ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿವೆ ಎಂಬುದರಲ್ಲಿ ಸಂಶಯವಿಲ್ಲ. `ದೇಶ ಸುತ್ತು, ಕೋಷ ಓದು’ ಎಂಬಂತೆ ಪ್ರವಾಸದ ಜೊತೆ ಜೊತೆಗೆ ಅಧ್ಯಯನವೂ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸ ಆಯೋಜನೆ ಮಾಡುವ ಸಂಸ್ಥೆಗಳು ಚಿಂತನೆ ನಡೆಸಬೇಕು. ದಿನ ಕಳೆದಂತೆ, ಜನಸಂಖ್ಯೆ ಹೆಚ್ಚದಂತೆ ಪ್ರವಾಸ ಕೈಗೊಳ್ಳುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಸಂಸ್ಥೆಗಳು ಇನ್ನೂ ಹೆಚ್ಚಿನ ಸೇವೆ ನೀಡಬೇಕು. ಪ್ರವಾಸದ ಅನುಭವ ಪಡೆದ ಗ್ರಾಹಕರೇ ಸಂಸ್ಥೆಗಳ ಬಗ್ಗೆ ಪ್ರಚಾರ ಮಾಡಿದಾಗ ಮಾತ್ರ ಪ್ರವಾಸ ಆಯೋಜನೆ ಮಾಡುವ ಸಂಸ್ಥೆಗಳಿಗೂ ಅನುಕೂಲವಾಗಲಿದೆ
ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಸಿಇಓ ಮೋಹನ ಹೆಗಡೆ, ಭಟ್ಸ್ ಮೀಡಿಯಾ ಮಾಲೀಕ ದತ್ತಾತ್ರೇಯ ಭಟ್, ಪಂಚರತ್ನ ಹಾಲಿಡೇಸ್ ಮಾಲಿಕ ನರಸಿಂಹ ಭಟ್, ಲಕ್ಷ್ಮೀ ಎನ್.ಭಟ್, ಗಜಾನನ ಭಟ್, ಗಿರೀಶ ಮ. ಭಟ್ ಸೇದಂತೆ ಅನೇಕರಿದ್ದರು.
