ಹೆಬ್ಬಾಳ ನೂತನ ಮೇಲ್ಸೇತುವೆ ಲೋಕಾರ್ಪಣೆ: ಫ್ಲೈಓವರ್ ಮೇಲೆ ಡಿಸಿಎಂ ಡಿಕೆಶಿ ಬೈಕ್ ಸವಾರಿ

Untitled design (10)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಬೆಂಗಳೂರಿನ ಹೆಬ್ಬಾಳದ ನೂತನ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಕೆ.ಆರ್.ಪುರಂನಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕಿಸುವ 700 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಹ್ಯಾರಿಸ್, ಮತ್ತು ನಟಿ ರಮ್ಯಾ ಉಪಸ್ಥಿತರಿದ್ದರು.

ಮೇಲ್ಸೇತುವೆ ಲೋಕಾರ್ಪಣೆ ಬಳಿಕ ಡಿಕೆ ಶಿವಕುಮಾರ್ ತಮ್ಮ ನೆಚ್ಚಿನ ಯೆಜ್ಡಿ ಬೈಕ್‌ನಲ್ಲಿ ಮೇಲ್ಸೇತುವೆಯ ಮೇಲೆ ಸವಾರಿ ಮಾಡಿದರು. ಬಳಿಕ ಮಾತನಾಡಿದ ಅವರು, “ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಈ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಈ ಯೋಜನೆಯನ್ನು ಹಿಂದೆಯೇ ಯೋಜಿಸಲಾಗಿತ್ತು, ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಉಪಮುಖ್ಯಮಂತ್ರಿಯಾದ ಬಳಿಕ ಈ ಯೋಜನೆಗೆ ಹಣಕಾಸಿನ ಅನುಮತಿ ನೀಡಿ, ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ,” ಎಂದರು.

ಈ ಮೇಲ್ಸೇತುವೆಯಿಂದ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಬರುವವರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ, ಮತ್ತೊಂದು ಜಂಕ್ಷನ್‌ನ ಸಂಪರ್ಕವನ್ನು ಸೇರಿಸಲಾಗುತ್ತಿದ್ದು, ನವೆಂಬರ್‌ನೊಳಗೆ ಈ ಮೇಲ್ಸೇತುವೆಯನ್ನು ಆರು ಲೇನ್‌ಗಳಿಗೆ ವಿಸ್ತರಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಇನ್ನೊಂದು ಲೂಪ್ ಸೇರ್ಪಡೆಯಾಗಲಿದೆ. ಎಸ್ಟಿಮ್ ಮಾಲ್‌ನಿಂದ 1 ಕಿಲೋಮೀಟರ್ ತನಕ ಟನಲ್ ಯೋಜನೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.
#HebbalFlyover #BangaloreTraffic #DKShivakumar #Siddaramaiah #FlyoverInauguration
#TunnelProject #KRPuram #MekhriCircle #BangaloreInfrastructure #YezdiBike

Exit mobile version