ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು. ಆರೋಗ್ಯ ಇಲಾಖೆ ಮೆಗಾ ಡ್ರೈವ್ ನಡೆಸಿದೆ. ಒಂದು ವರ್ಷದಲ್ಲಿ ಸಿಕ್ಕಿಹಾಕೊಂಡ ವೈದ್ಯರ ಸಂಖ್ಯೆ ಕೇಳಿ ನೀವು ಬೆಚ್ಚಿಬೀಳೋದ ಖಂಡಿತ. ಹಾಗಾದ್ರೆ ಎಷ್ಟು ಜನರ ನಕಲಿವೈದ್ಯರು ಸಿಕ್ಕಿ ಹಾಕಿಕೊಂಡಿದ್ದಾರೆ. ಅವರ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗುತ್ತೆ.
ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಆದ್ರೆ ಆ ವೈದ್ಯ ವೃತ್ತಿಗೆ ಕೆಲ ಸೋಕಾಲ್ಡ್ ನಕಲಿ ಡಾಕ್ಟರ್‌ಗಳು ಕಳಂಕ ತರುತ್ತಿದ್ದಾರೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು. ನಕಲಿ ವೈದ್ಯರ ವಿರುದ್ದ ಇಲಾಖೆ ಮೆಗಾ ಡ್ರೈವ್ ನಡೆಸಿದೆ.
ಕೇವಲ ಒಂದು ವರ್ಷದಲ್ಲಿ ರಾಜ್ಯದಲ್ಲಿ 958 ನಕಲಿ ವೈದ್ಯರನ್ನ ಅರೋಗ್ಯ ಇಲಾಖೆ ಪತ್ತೆ ಮಾಡಿದೆ. ಅದರಲ್ಲಿ ಅತಿಹೆಚ್ಚು ನಕಲಿ ವೈದ್ಯರು ಬೀದರ್‌ನಲ್ಲಿ ಪತ್ತೆಯಾಗಿದ್ದು.ಒಂದೇ ವರ್ಷದಲ್ಲಿ 213 ನಕಲಿ ವೈದ್ಯರು ಬೀದರ್‌ನಲ್ಲಿ ಪತ್ತೆಯಾಗಿದ್ದಾರೆ. ಇನ್ನೂ 958 ನಕಲಿ ವೈದ್ಯರ ಪೈಕಿ 442 ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ನೋಟೀಸ್ ಜಾರಿ ಮಾಡಿದೆ ಹಾಗೂ ಕಾನೂನಿನ ಅಡಿಯಲ್ಲಿ 67 ಜನರ ವಿರುದ್ದ ಕೇಸ್ ದಾಖಲಿಸಿದೆ ಜೊತೆಗೆ 89 ಜನ ವೈದ್ಯರಿಗೆ ದಂಡವನ್ನ ಆರೋಗ್ಯ ಇಲಾಖೆ ವಿಧಿಸಿದೆ.
ಅತಿ ಹೆಚ್ಚು ನಕಲಿ ವೈದ್ಯರು ಪತ್ತೆಯಾದ ಜಿಲ್ಲೆಗಳ ವಿವರ :
- ಬೀದರ್-213
- ಕೋಲಾರ-115
- ತುಮಕೂರು-109
- ವಿಜಯನಗರ -81
- ಕಲ್ಬುರ್ಗಿ-64
ರಾಜ್ಯದಲ್ಲಿ ನಕಲಿ ವೈದ್ಯರಿಗೆ ಕಾನೂನಿನ ಅಡಿಯಲ್ಲಿ 1 ಲಕ್ಷ ವರೆಗೂ ದಂಡ ಹಾಗೂ 3 ವರ್ಷದ ವರೆಗೂ ಜೈಲು ಶಿಕ್ಷೆಗೆ ಗುರಿಯಾಗಿಸಬಹುದು.ಕೆಲ ಸಮಯದಲ್ಲಿ ಈ ಶಿಕ್ಷೆ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.
ಆರೋಗ್ಯ ಇಲಾಖೆ ಫೇಕ್ ಡಾಕ್ಟರ್‌ಗಳ ವಿರುದ್ದ ಸಮರಸಾರಿದ್ದು. ಮುಂದಿನ ದಿನಗಳಲ್ಲಿ ಮತ್ತಷ್ಟು ವೈದ್ಯರಿಗೆ ಬಲೆ ಬೀಸಲು ಇಲಾಖೆ ಸಜ್ಜಾಗಿದೆ.