ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇ*ಪ್

Untitled design 2025 03 08t092456.783

ಗಂಗಾವತಿ: ಸಾಣಾಪುರ ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಗುರುವಾರ ರಾತ್ರಿ ಘೋರ ಅತ್ಯಾಚಾರದ ಘಟನೆ ನಡೆದಿದೆ. ಕಳೆದ ರಾತ್ರಿ ಓರ್ವ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಇವರ ಜೊತೆ ಇದ್ದ ಮತ್ತೋರ್ವ ವಿದೇಶಿ ಪ್ರಜೆ ಸೇರಿ ಮೂವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ದುರುಳರು ಒಬ್ಬನನ್ನು ಹಲ್ಲೆ ನಡೆಸಿ ಕಾಲುವೆಗೆ ಎಸೆದು ಪರಾರಿಯಾಗಿದ್ದಾರೆ.

ಘಟನೆ ವಿವರ:

ಆನೆಗೊಂದಿಯ ಹೋಮ್ ಸ್ಟೇನಲ್ಲಿ ತಂಗಿದ್ದ ಅಮೆರಿಕದ ಡ್ಯಾನಿಯಲ್, ಇಸ್ರೇಲ್ನ ನಾಮಾ, ಮಹಾರಾಷ್ಟ್ರದ ಪಂಕಜ್ ಮತ್ತು ಹೋಮ್ ಸ್ಟೇ ಮಾಲೀಕಿ ಅಂಬಿಕಾ ನಾಯರ್ ಗುರುವಾರ ರಾತ್ರಿ ತುಂಗಭದ್ರಾ ಕಾಲುವೆ ಬಳಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಸ್ಥಳೀಯರು ಪೆಟ್ರೋಲ್ ಕೇಳಿದರು. ಪೆಟ್ರೋಲ್ ಇಲ್ಲವೆಂದಾಗ, ಹಣಕ್ಕಾಗಿ ಒತ್ತಾಯಿಸಿದರು. ಹಣ ನೀಡಲು ನಿರಾಕರಿಸಿದಾಗ ಮೂವರು ಪುರುಷರನ್ನು ಹಲ್ಲೆ ಮಾಡಿ ಕಾಲುವೆಗೆ ಎಸೆದರು.

ಇದಾದ ಬಳಿಕ ಇಬ್ಬರು ಮಹಿಳೆಯರನ್ನು ಪಕ್ಕಕ್ಕೆ ಒಯ್ದು ಹಲ್ಲೆ ನಡೆಸಿ ಅತ್ಯಾಚಾರ ಮಾಡಿದರು. ದುರುಳರು ಮೊಬೈಲ್ ಮತ್ತು ಹಣ ದೋಚಿಕೊಂಡು ಪರಾರಿಯಾದರು. ಗಾಯಾಳುಗಳನ್ನು ಎಂಎಸ್‌ಆರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಿಗೆ ಎಸೆಯಲಾದ ಬಿಬಾಸ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಪ್ರಕರಣವನ್ನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Exit mobile version