ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರು ಇಂದು ಕೇವಲ ಸಂಚಾರ ದಟ್ಟಣೆಗೆ ಮಾತ್ರವಲ್ಲದೆ, ಕಳಪೆ ಗಾಳಿಯ ಗುಣಮಟ್ಟಕ್ಕೂ (AQI) ಸುದ್ದಿಯಾಗುತ್ತಿದೆ. ಇಂದಿನ ಅಂಕಿಅಂಶಗಳ ಪ್ರಕಾರ, ನಗರದ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕ 173 ದಾಖಲಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಕಳಪೆ ಮಟ್ಟವಾಗಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –173
- ಮಂಗಳೂರು – 154
- ಮೈಸೂರು – 132
- ಬೆಳಗಾವಿ – 161
- ಕಲಬುರ್ಗಿ – 105
- ಶಿವಮೊಗ್ಗ – 92
- ಬಳ್ಳಾರಿ – 201
- ಹುಬ್ಬಳ್ಳಿ- 108
- ಉಡುಪಿ –142
- ವಿಜಯಪುರ –82
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಮಾಲಿನ್ಯದ ಭೀಕರತೆ: ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪಾರ್ಟಿಕ್ಯುಲೇಟ್ ಮ್ಯಾಟರ್ (PM) ಪ್ರಮಾಣ ಮಿತಿ ಮೀರಿದೆ. ಇಂದು PM2.5 ಪ್ರಮಾಣ 87 ಹಾಗೂ PM10 ಪ್ರಮಾಣ 121 ರಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳ ಪ್ರಕಾರ ಈ ಮಟ್ಟವು ಮಾನವನ ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಜನವಿರುವ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ನಗರದ ಸರಾಸರಿಗಿಂತ ಶೇ. 30ರಷ್ಟು ಹೆಚ್ಚು ದಾಖಲಾಗುತ್ತಿದೆ.
ಆರೋಗ್ಯದ ಮೇಲಿನ ಪರಿಣಾಮಗಳು: ವಾಯುಮಾಲಿನ್ಯದ ಈ ಸೂಕ್ಷ್ಮ ಕಣಗಳು ನೇರವಾಗಿ ಶ್ವಾಸಕೋಶದ ಒಳಗೆ ಪ್ರವೇಶಿಸಿ ರಕ್ತವನ್ನು ಸೇರುತ್ತವೆ. ಇದರಿಂದಾಗಿ ಉಸಿರಾಟದ ತೊಂದರೆಗಳು ಹೆಚ್ಚಾಗುತ್ತವೆ. ಗಾಳಿಯ ಗುಣಮಟ್ಟ 150 ದಾಟಿದರೆ ಹೃದಯಾಘಾತದ ಅಪಾಯವೂ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಜೊತೆಗೆ PM2.5 ಕಣಗಳು ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವುದರಿಂದ ಅವುಗಳನ್ನು ಸಾಮಾನ್ಯ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ.
ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳು:
ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿವೆ. ನಗರದಾದ್ಯಂತ 85 ಮೆಟ್ರೋ ನಿಲ್ದಾಣಗಳು, 55 ಬಿಎಂಟಿಸಿ ಟಿಟಿಎಂಸಿಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಹೈಟೆಕ್ ವಾಯುಮಾಲಿನ್ಯ ತಪಾಸಣಾ ಸೆನ್ಸರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಪ್ರತಿ ಸೆನ್ಸರ್‌ಗೆ 3 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ.
ಇಂದು ರಾಜ್ಯದ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಬಳ್ಳಾರಿಯಲ್ಲಿ ಅತ್ಯಂತ ಗರಿಷ್ಠ ಅಂದರೆ 201 AQI ದಾಖಲಾಗಿದೆ. ಮಂಗಳೂರು (154) ಮತ್ತು ಬೆಳಗಾವಿ (161) ನಗರಗಳೂ ಸಹ ಕಳಪೆ ಮಟ್ಟದ ಪಟ್ಟಿಯಲ್ಲಿವೆ.





