ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್ , ಇಷ್ಟು ದಿನ ಡಿಜಿಟಲ್ ಮೂಲಕ ಯೂಟ್ಯೂಬ್, ಫೇಸ್ಬುಕ್, ಮತ್ತು ವೆಬ್ಸೈಟ್ ಮೂಲಕ ಓದುಗರನ್ನು ತಲುಪಿದ್ದ ಗ್ಯಾರಂಟಿ ವಾಹಿನಿ, ಇದೀಗ ಸ್ಯಾಟಲೈಟ್ ಚಾನಲ್ ಆಗಿ ಕರ್ನಾಟಕದಾದ್ಯಂತ ಲಭ್ಯವಾಗಲಿದೆ. ಫೆಬ್ರವರಿ ೧೪, ೨೦೨೫ರಂದು ಗ್ಯಾರಂಟಿ ನ್ಯೂಸ್ ಕಚೇರಿ ಸಿಬ್ಬಂದಿಯ ಕುಟುಂಬಸ್ಥರ ಆಗಮಿಸಿದರು . ಕುಟುಂಬಸ್ಥರು ಆಗಮಿಸಿ ಗ್ಯಾರಂಟಿ ನ್ಯೂಸ್ ಗೆ ಶುಭಹಾರೈಸಿದರು .
ಗ್ಯಾರಂಟಿ ನ್ಯೂಸ್ ಕಚೇರಿಯ ಸಿಬ್ಬಂದಿಯ ಕುಟುಂಬಗಳು ಸಂಯುಕ್ತ ಸಂಭ್ರಮದೊಂದಿಗೆ ಉತ್ಸಾಹದ ವಾತಾವರಣವನ್ನು ಸೃಷ್ಟಿಸಿತು. ಸಾಮಾಜಿಕ ಬಾಂಧವ್ಯ ಹಾಗೂ ಸಂಸ್ಥೆಯೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಚೇರಿಯ ಸಿಬ್ಬಂದಿಯು ತಮ್ಮ ಕುಟುಂಬದೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಭಾಷಣೆಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ಸಂಜೆ ಸಂಗೀತ ಮತ್ತು ನೃತ್ಯದೊಂದಿಗೆ ಮುಕ್ತಾಯಗೊಂಡಿತು. ಸಿಬ್ಬಂದಿ ಮತ್ತು ಅವರ ಕುಟುಂಬಗಳು ಈ ಸಂಭ್ರಮದ ಮೂಲಕ ಒಂದಾಗಿ, ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಗುರಿಗಳ ಬಗ್ಗೆ ಹೊಸ ಶಕ್ತಿಯನ್ನು ಪಡೆದರು. ಗ್ಯಾರಂಟಿ ನ್ಯೂಸ್ ತಂಡವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮುಂದುವರೆಸುವುದರೊಂದಿಗೆ, ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲು ಯೋಜಿಸಿದೆ ಎಂದು ತಿಳಿಸಲಾಗಿದೆ.
ಗ್ಯಾರಂಟಿ ನ್ಯೂಸ್ ಕೇವಲ ಸುದ್ದಿ ವಾಹಿನಿಯಲ್ಲ, ಕನ್ನಡಿಗರ ಹೆಮ್ಮೆಯ ಪ್ರತೀಕ. “ಜನ ಪರವಾಗಿ ಕೆಲಸ ಮಾಡಲು” ಹೊರಟಿರುವ ಈ ತಂಡದ ಸಾಧನೆ, ಕರ್ನಾಟಕದ ಮಾಧ್ಯಮ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ. ಸತತ ನಾವೀನ್ಯತೆ ಮತ್ತು ನಿಷ್ಠೆಯಿಂದ ಕರುನಾಡಿನ ಮನೆಮಾತಾಗಲುಈ ವಾಹಿನಿ ಸಿದ್ಧವಿದೆ.