ಡಿಸಿಎಂ ಡಿಕೆಶಿ ಪುತ್ರಿ ಐಶ್ವರ್ಯ ಹೆಗ್ಗಡೆಗೆ ಹೆಣ್ಣು ಮಗು ಜನನ

Woman dead living relationship age gap kodigehalli (14)

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಡಿಕೆಶಿ) ಕುಟುಂಬದಲ್ಲಿ ಸಂತಸದ ಸಂಭ್ರಮ ಮನೆಮಾಡಿದೆ. ಅವರ ಪುತ್ರಿ ಐಶ್ವರ್ಯ ಹೆಗ್ಗಡೆ ಅವರಿಗೆ ಹೆಣ್ಣು ಮಗು ಜನಿಸಿದೆ. ಇಂದು ಮಾಜಿ ಸಿಎಂ ದಿವಂಗತ ಎಸ್‌ ಎಂ ಕೃಷ್ಣ ಅವರ ಹುಟ್ಟುಹಬ್ಬದ ದಿನ. ಇಂದೇ ಎಸ್‌ ಎಂ ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಗಡೆ ಹಾಗೂ ಐಶ್ವರ್ಯ ಹೆಗ್ಗಡೆ ಅವರಿಗೆ ಹೆಣ್ಣು ಮಗು ಜನಿಸಿದ್ದು, ಎರಡು ಕುಟುಂಬದಲ್ಲಿ ಸಂಭ್ರಮ ಮನೆ  ಮಾಡಿದೆ.

ಇಂದು ಡಿಕೆ ಶಿವಕುಮಾರ್‌ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮಗಳ ನಡುವೆಯೇ ಆಸ್ಪತ್ರೆಯಲ್ಲಿ ಐಶ್ವರ್ಯ ಹೆರಿಗೆಗೆ ದಾಖಲಾಗಿದ್ರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಡಿಕೆ ಶಿವಕುಮಾರ್‌ ಅಸ್ಪತ್ರೆಗೆ ಭೇಟಿ ನೀಡಿದ್ರು. ಆಸ್ಪತ್ರೆಯಲ್ಲಿ ಮೊಮ್ಮಗಳನ್ನ ಕಂಡು ಡಿಸಿಎಂ ಡಿಕೆ ಶಿವಕುಮಾರ್‌ ಸಂತಸ ವ್ಯಕ್ತಪಡಿಸಿದ್ರು.

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ.ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ 2021ರ ಫೆ.14 ರಂದು ವಿವಾಹವಾಗಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆಗಿನ ಸಿಎಂ ಬಿ.ಎಸ್‌.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದ್ದರು.

Exit mobile version