ಕರ್ನಾಟಕದಾದ್ಯಂತ ಕಳೆದ ಹಲವು ದಿನಗಳಿಂದ ಮಳೆಯ ಆಚೆಯೇ ಇಲ್ಲದ ಒಣ ಹವಾಮಾನ ಮುಂದುವರಿದಿದೆ. ಆದರೆ ಈ ಒಣ ಹವೆಯ ಜೊತೆಗೆ ರಾತ್ರಿ ಮತ್ತು ಬೆಳಗ್ಗೆ ತಾಪಮಾನ ಗಣನೀಯವಾಗಿ ಕುಸಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮುನ್ಸೂಚನೆ ಪ್ರಕಾರ ಮುಂದಿನ 48 ಗಂಟೆಗಳಲ್ಲಿ (ಡಿಸೆಂಬರ್ 14 ಮತ್ತು 15) ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಶೀತದಲೆ (Cold Wave) ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಶೀತದಲೆ ಎಚ್ಚರಿಕೆ ಘೋಷಣೆಯಾದ ಜಿಲ್ಲೆಗಳು:
ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳಲ್ಲಿ ಈ ಕೆಳಗಿನ ಜಿಲ್ಲೆಗಳಲ್ಲಿ ತೀವ್ರ ಶೀತದಲೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ:
- ಬಾಗಲಕೋಟೆ
- ಬೆಳಗಾವಿ
- ಬೀದರ್
- ಧಾರವಾಡ
- ಗದಗ
- ಕಲಬುರ್ಗಿ
- ವಿಜಯಪುರ
- ರಾಯಚೂರು
- ಯಾದಗಿರಿ
- ಬಳ್ಳಾರಿ
- ಶಿವಮೊಗ್ಗ
- ಹಾಸನ
- ಚಿಕ್ಕಮಗಳೂರು
- ಚಿಕ್ಕಬಳ್ಳಾಪುರ
- ಕೋಲಾರ
- ವಿಜಯನಗರ
ಈ ಜಿಲ್ಲೆಗಳಲ್ಲಿ ರಾತ್ರಿ ತಾಪಮಾನ ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿ 8-12ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುವ ಸಾಧ್ಯತೆ ಇದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಉಸಿರಾಟದ ಸಮಸ್ಯೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಒಣ ಹವಾಮಾನ ಮುಂದುವರಿಕೆ
ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಯಾವುದೇ ಮಳೆಯ ಸೂಚನೆ ಇಲ್ಲ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವೆಯೇ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿಯೂ ಒಣ ಹವಾಮಾನವೇ ಆವರಿಸಲಿದೆ.
ಬೆಂಗಳೂರು ಹವಾಮಾನ ವಿಶೇಷ
ನಗರದಲ್ಲಿ ಬೆಳಗ್ಗೆ ದಟ್ಟ ಮಂಜು ಮುಂದುವರಿದಿದ್ದು, ದೃಶ್ಯತೆ 500 ಮೀಟರ್‌ಗಿಂತ ಕಡಿಮೆಯಾಗುತ್ತಿದೆ.
- ಗರಿಷ್ಠ ತಾಪಮಾನ: 27-28ಡಿಗ್ರಿ ಸೆಲ್ಸಿಯಸ್
- ಕನಿಷ್ಠ ತಾಪಮಾನ: 14-15ಡಿಗ್ರಿ ಸೆಲ್ಸಿಯಸ್
- ಗಾಳಿಯ ವೇಗ: 6-10 ಕಿ.ಮೀ./ಗಂಟೆ
- ಆರ್ದ್ರತೆ: 75-90% ಬೆಳಗ್ಗೆ 5ರಿಂದ 9 ಗಂಟೆಯವರೆಗೆ ಮಂಜು ಮುಸುಕಿದ ವಾತಾವರಣದಿಂದ ವಾಹನ ಚಾಲಕರು ಹೆಡ್ಲೈಟ್ ಆನ್ ಮಾಡಿ, ಸ್ಪೀಡ್ ಕಡಿಮೆ ಮಾಡಿ ಚಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.
ರೈತರಿಗೆ ಸಲಹೆ
ಶೀತದಲೆಯಿಂದ ರಾಗಿ, ಜೋಳ, ಗೋಧಿ ಬೆಳೆಗಳು ಮತ್ತು ತರಕಾರಿಗಳಿಗೆ ಆಂಶಿಕ ಹಾನಿಯಾಗಬಹುದು. ರಾತ್ರಿ ಸಮಯದಲ್ಲಿ ಬೆಳೆಗಳಿಗೆ ನೀರಾವರಿ ಮಾಡುವುದು, ಧೂಮಾವೃತಿ (smoke cover) ಮಾಡುವುದು, ಪಾಲಿಥೀನ್ ಹಾಕುವುದು ಸೂಕ್ತ.
